ಹೈದರಾಬಾದ್: ಗಿಡ ನೆಡಲು ಬಂದ ಮಹಿಳಾ ಅರಣ್ಯಾಧಿಕಾರಿಗೆ ಟಿಆರ್ಎಸ್ ಗೂಂಡಾಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತೆಲಂಗಾಣದ ಕಾಘಝ್ನಗರದಲ್ಲಿ ಸೋಮವಾರ ನಡೆದಿತ್ತು. ಇಡೀ ದೇಶವನ್ನೇ ಈ ಘಟನೆ ತಲ್ಲಣಗೊಳಿಸಿತ್ತು. ದೇಶವ್ಯಾಪಿಯಾಗಿ ಇದಕ್ಕೆ ಖಂಡನೆಗಳೂ ವ್ಯಕ್ತವಾಗಿದ್ದವು. ಇದೀಗ ಅರಣ್ಯ ಇಲಾಖೆ ಈ ದುಷ್ಕರ್ಮಿಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದು, ಅಧಿಕಾರಿ ಹಲ್ಲೆಗೊಳಗಾದ ಜಾಗದಲ್ಲೇ ಗಿಡ ನೆಡುವ ಅಭಿಯಾನವನ್ನು ನಡೆಸಿದೆ.
20 ಎಕರೆ ಜಾಗದಲ್ಲಿ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಮತ್ತು ಇತರರು ಸೇರಿ ಗಿಡವನ್ನು ನೆಟ್ಟಿದ್ದಾರೆ, ಈ ಮೂಲಕ ಗೂಂಡಾಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.
The place where lady range officer was attacked. Plantation was done at same location today by 400 FD, police & other personals. All nearby senior officers were present & 20 hectare was planted to save land from future encroachment. Much required step & befitting reply. pic.twitter.com/ufg1VqUiJF
— Parveen Kaswan, IFS (@ParveenKaswan) July 1, 2019
ನಿನ್ನೆ ನಡೆದ ಮಹಿಳಾ ಅಧಿಕಾರಿಯ ಮೇಲಿನ ಹಲ್ಲೆಯ ಘಟನೆಯು ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಕಾಘಝ್ನಗರ ಪ್ರದೇಶದಲ್ಲಿ ಕಾಳೇಶ್ವರಂ ನೀರಾವರಿ ಯೋಜನೆಯ ಭಾಗವಾಗಿ ಅರಣ್ಯ ಇಲಾಖೆ ಅರಣ್ಯ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡುತ್ತಿರುವಾಗ, 30-40 ಗೂಂಡಾಗಳ ಗುಂಪೊಂದು ದೊಣ್ಣೆ ಮೂಲಕ ಇವರನ್ನು ಥಳಿಸಿದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷದ ಮುಖಂಡ ಕೊನೇರು ಕೃಷ್ಣ ನೇತೃತ್ವದಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
ಕಾಘಝ್ನಗರ ವ್ಯಾಪ್ತಿಯಲ್ಲಿರುವ ಕಡಂಬದ ರಿಸರ್ವ್ ಫಾರೆಸ್ಟ್ ಬ್ಲಾಕ್ಗಳಲ್ಲಿ ಅರಣ್ಯೀಕರಣಕ್ಕಾಗಿ ತೆಲಂಗಾಣದ ಅರಣ್ಯ ಇಲಾಖೆಯು ಸುಮಾರು 20 ಹೆಕ್ಟೇರ್ ಅರಣ್ಯ ಭೂಮಿಯನ್ನು ಆಯ್ಕೆ ಮಾಡಿದೆ. ಹಲ್ಲೆ ನಡೆದ ಕಾರಣ ನಿನ್ನೆ ಯೋಜನೆಯ ಕಾರ್ಯ ಆರಂಭಗೊಂಡಿಲ್ಲ. ಆದರೆ, ಕಾರ್ಯವನ್ನು ಮುಂದುವರೆಸಲು ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವಂತೆ ಅರಣ್ಯ ಇಲಾಖೆಯು ಆಸಿಫಾಬಾದ್ ಜಿಲ್ಲೆಯ ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದೆ. ಇಂದು ಘಟನೆ ನಡೆದ ಮರುದಿನವೇ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಷ್ಟು ಭದ್ರತೆಯಡಿಯಲ್ಲಿ ಅರಣ್ಯೀಕರಣ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ.
Trouble is an occupational hazard in service. Shocking is how so many brave people decide to attack a lady officer who is without any arms. Dozen arrested for attempt to murder, DSP & IC suspended. But I hope department will try to strengthen force keeping in mind recent attacks. pic.twitter.com/P78KKIfOGy
— Parveen Kaswan, IFS (@ParveenKaswan) July 1, 2019
The FRO Kagaznagar was stopping illegal cultivation from the last 3 months and was carrying out her duties trying to protect the Govt tractor when she was attacked and beaten with sticks..a similar incident had happened at Tipeshawer sanctuary. Local mafia with political support pic.twitter.com/sUH1mzcQsc
— Randeep Hooda (@RandeepHooda) June 30, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.