ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ವಿಶ್ವದ ಅತೀ ಎತ್ತರದ ಯುದ್ಧಭೂಮಿಗೆ ತೆರಳಿ ಅಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಜಿಲೇಬಿ ಹಂಚಿ ಸಂಭ್ರಮಿಸಿದರು. ಅಲ್ಲದೇ, ಸಿಯಾಚಿನ್ನಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಮಾಡಿದರು. ರಕ್ಷಣಾ ಸಚಿವರಾದ ಬಳಿಕದ ಇದು ಅವರ ಮೊದಲ ರಾಜಧಾನಿಯೇತರ ಭೇಟಿಯಾಗಿದೆ.
ಟ್ವಿಟ್ ಮಾಡಿರುವ ಅವರು, “ಇಂದು ಫಾರ್ವರ್ಡ್ ಪೋಸ್ಟ್ ಮತ್ತು ಸಿಯಾಚಿನ್ ಬೇಸ್ ಕ್ಯಾಂಪಿಗೆ ಭೇಟಿ ನೀಡಿದೆ. ವಿಶ್ವದ ಅತೀ ಎತ್ತರದ ಯುದ್ಧಭೂಮಿ ಎಂದು ಕರೆಯಲ್ಪಡುವ ಇಲ್ಲಿ ನಿಯೋಜನೆಗೊಂಡಿರುವ ಯೋಧರೊಂದಿಗೆ ಸೇನೆಯ ಯೋಧರೊಂದಿಗೆ ಸಂವಾದ ನಡೆಸಿದೆ” ಎಂದರು.
“ಸಿಯಾಚಿನ್ ಗೇಸ್ಲಿಯರ್ ರಕ್ಷಣೆ ಮಾಡುತ್ತಾ 1100 ಯೋಧರು ಹುತಾತ್ಮರಾಗಿದ್ದಾರೆ. ಅವರ ತ್ಯಾಗ ಮತ್ತು ಸೇವೆಗೆ ಈ ದೇಶ ಎಂದೆಂದಿಗೂ ಚಿರಋಣಿಯಾಗಿರುತ್ತದೆ” ಎಂದಿದ್ದಾರೆ.
Paid tributes to the martyred soldiers who sacrificed their lives while serving in Siachen.
More than 1100 soldiers have made supreme sacrifice defending the Siachen Glacier.
The nation will always remain indebted to their service and sacrifice. pic.twitter.com/buWxgv6Nmg
— Rajnath Singh (@rajnathsingh) June 3, 2019
ಚಳಿಗಾಲದಲ್ಲಿ ಸಿಯಾಚಿನ್ ಗ್ಲೇಸಿಯರ್ ತಾಪಮಾನ ಮೈನಸ್ 60 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ. ಇಲ್ಲಿ ವೈಟ್ ಜಾಕೆಟ್ ಹಾಕಿಕೊಂಡು ಫೋಟೋಗೆ ರಾಜನಾಥ್ ಸಿಂಗ್ ಕಾಣಿಸಿಕೊಂಡಿದ್ದಾರೆ.
“ತಾಯ್ನಾಡನ್ನು ಕಾಪಾಡುವಲ್ಲಿ ಅವಿರತ ಪರಿಶ್ರಮಪಡುವ ಸಿಯಾಚಿನ್ನಲ್ಲಿ ನಿಯೋಜನೆಗೊಂಡಿರುವ ಯೋಧರ ಬಗ್ಗೆ ಹೆಮ್ಮೆ ಎನಿಸುತ್ತದೆ. ಶಸ್ತ್ರಾಸ್ತ್ರ ಪಡೆಗಳಿಗೆ ಸೇರುವಂತೆ ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿದ ಅವರ ಹೆತ್ತವರ ಬಗ್ಗೆಯೂ ಹೆಮ್ಮೆ ಎನಿಸುತ್ತದೆ. ಅವರಿಗೆ ವೈಯಕ್ತಿಕ ಧನ್ಯವಾದಗಳನ್ನು ನಾನು ಕಳುಹಿಸುತ್ತೇನೆ” ಎಂದಿದ್ದಾರೆ.
ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು. ಸೈನಿಕರು ತಮ್ಮ ದೈನಂದಿನ ಕಾರ್ಯಗಳ ಬಗ್ಗೆ, ಕಾರ್ಯಾಚರಣೆಗಳ ಬಗ್ಗೆ ಸಚಿವರಿಗೆ ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.