ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಭಾರೀ ಉತ್ಸಾಹ ಕಂಡು ಬಂದಿದೆ. ಸೆನ್ಸೆಕ್ಸ್ 40,000ಕ್ಕೆ ಏರಿಕೆಯಾಗಿದ್ದು, ನಿಫ್ಟಿ 12,000ಕ್ಕೆ ಏರಿಕೆಯಾಗಿದೆ.
ಮೋದಿಯವರು ತಮ್ಮ ಸಂಪುಟ ಸದಸ್ಯರೊಂದಿಗೆ ಗುರುವಾರ ಸಂಜೆ 7 ಗಂಟೆಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು.
ನಿಮಿಷಗಳ ಟ್ರೇಡಿಂಗ್ನಲ್ಲಿ ಎನ್ ಎಸ್ ಇ ನಿಫ್ಟಿಯು 62.35 ಪಾಯಿಂಟ್ಗಳನ್ನು ಅಥವಾ ಶೇ.0.52 ಪಡೆದುಕೊಂಡು 12,008.25 ರಷ್ಟಾದರೆ, ಬಿಎಸ್ಇ ಸೆನ್ಸೆಕ್ಸ್ 191.01 ಅಂಕಗಳು ಅಥವಾ ಶೇ.0.48ನಲ್ಲಿ 40,022.98 ಕ್ಕೆ ಏರಿಕೆಯಾಗಿದೆ. ಬ್ಯಾಂಕಿಂಗ್ ಮತ್ತು ಐಟಿ ಷೇರುಗಳ ಗಳಿಕೆ, ಧನಾತ್ಮಕ ದೇಶೀಯ ಸೂಚ್ಯಂಕಗಳು ಮತ್ತು ಬಲವಾದ ವಿದೇಶಿ ನಿಧಿಯ ಒಳಹರಿವಿನಿಂದ ಈ ಓಟವು ಸಾಧ್ಯವಾಗಿದೆ.
ಸೆನ್ಸೆಕ್ಸ್ ಏರಿಕೆಯಿಂದ ಏಷ್ಯನ್ ಪೇಂಟ್ಸ್, ಕೋಲ್ ಇಂಡಿಯಾ, ಟಿಸಿಎಸ್, ಓಎನ್ ಜಿಸಿ, ಎಚ್ ಸಿಎಲ್, ಎಲ್ &ಟಿ, ಆಕ್ಸಿಸ್ ಬ್ಯಾಂಕ್, ಎಸ್ ಬಿಐ, ಇಂಡಸ್ ಇಂಡ್ ಬ್ಯಾಂಕ್ ಲಾಭ ಪಡೆದುಕೊಂಡಿದೆ. ಶೇ.30ರಷ್ಟು ಪ್ರಗತಿ ಕಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.