ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ನಾಯಕತ್ವ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯ ಚತುರತೆಯಿಂದಾಗಿ ಬಿಜೆಪಿಗೆ ಇಂದು ಐತಿಹಾಸಿಕ ದಿಗ್ವಿಜಯ ಪ್ರಾಪ್ತಿಯಾಗಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಇಬ್ಬರು ನಾಯಕರಿಗೆ ಅವರು ಅಭಿನಂದನೆಯನ್ನೂ ಸಲ್ಲಿಕೆ ಮಾಡಿದ್ದಾರೆ.
Spoke to Prime Minister Shri @narendramodi and the BJP National President Shri @AmitShah over the phone and congratulated them for @BJP4India led NDA’s stupendous victory in these Lok Sabha Elections. 1/3
— Chowkidar Rajnath Singh (@rajnathsingh) May 23, 2019
This historic victory in the General Elections is the outcome of Modiji’s visionary leadership, Amit Shahji’s dynamism and the hard work of millions of BJP karyakartas on the ground. 2/3
— Chowkidar Rajnath Singh (@rajnathsingh) May 23, 2019
I thank the people of India for once again giving a decisive mandate to @BJP4India led NDA and reposing faith in Shri @narendramodi’s astute leadership and his vision of New India. Shri Modi is now all set to build a New India. 3/3
— Chowkidar Rajnath Singh (@rajnathsingh) May 23, 2019
ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, “ದೇಶದ ಜನರು ಬಿಜೆಪಿ ನೇತೃತ್ವದ ಎನ್ಡಿಎಗೆ ಮತ್ತೊಮ್ಮೆ ಬಲಿಷ್ಠ ಜನಾದೇಶವನ್ನು ನೀಡಿದ್ದಾರೆ. ಮೋದಿ ನಾಯಕತ್ವ ಹಾಗೂ ನವಭಾರತ ನಿರ್ಮಾಣದ ಅವರ ಕನಸಿನ ಮೇಲೆ ನಂಬಿಕೆಯನ್ನು ಇಟ್ಟು ಅಭೂತಪೂರ್ವವಾಗಿ ಬೆಂಬಲವನ್ನು ನೀಡಿದ್ದಾರೆ” ಎಂದಿದ್ದಾರೆ.
“ಈ ಐತಿಹಾಸಿಕ ದಿಗ್ವಿಜಯ ಮೋದಿಯವರ ದೂರದೃಷ್ಟಿತ್ವದ ನಾಯಕತ್ವ ಮತ್ತು ಅಮಿತ್ ಶಾ ಅವರ ಕ್ರಿಯಾಶೀಲತೆ ಮತ್ತು ಲಕ್ಷಾಂತರ ತಳಮಟ್ಟದ ಕಾರ್ಯಕರ್ತರ ಪರಿಶ್ರಮದ ಫಲ” ಎಂದಿದ್ದಾರೆ.
ಅಲ್ಲದೇ ಮತ್ತೊಂದು ಅವಧಿಗೆ ಬಿಜೆಪಿಗೆ ಮಹತ್ವದ ಜನಾದೇಶವನ್ನು ನೀಡಿದ, ಮೋದಿಯವರ ದೂರದೃಷ್ಟಿತ್ವದ ನಾಯಕತ್ವ ಮತ್ತು ನವ ಭಾರತದ ಕನಸಿಗೆ ಬೆಂಬಲ ನೀಡಿದ ಜನರಿಗೆ ಧನ್ಯವಾದಗಳು ಎಂದಿದ್ದಾರೆ.
ಲಕ್ನೋ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜನಾಥ್ ಸಿಂಗ್ 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.