ನವದೆಹಲಿ: ಅಸ್ಸಾಂ ಮತ್ತು ಮಣಿಪುರದ ಸುಮಾರು 24 ಭಯೋತ್ಪಾದಕರಿಗೆ ಮಯನ್ಮಾರ್ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸವನ್ನು ನೀಡಿದೆ. ಅಕ್ರಮ ಚಟುವಟಿಕೆಯನ್ನು ನಡೆಸಿದ ಹಿನ್ನಲೆಯಲ್ಲಿ ಅವರಿಗೆ ಈ ಶಿಕ್ಷೆಯನ್ನು ನೀಡಲಾಗಿದೆ.
ವರದಿಗಳ ಪ್ರಕಾರ, ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದ ಈ ಉಗ್ರರನ್ನು ಜನವರಿಯಲ್ಲಿ ಅವರ ಅಡಗು ತಾಣದಿಂದ ಮಯನ್ಮಾರ್ ಸೇನೆ ಬಂಧನಕ್ಕೊಳಪಡಿಸಿದೆ.
ಮಯನ್ಮಾರಿನ ಹ್ಕಮತಿ ನ್ಯಾಯಾಲಯ ಅವರಿಗೆ ಎಡರು ವರ್ಷಗಳ ಸೆರೆವಾಸ ಶಿಕ್ಷೆಯನ್ನು ನೀಡಿದೆ. ಶಿಕ್ಷಿತರು ಯುನೈಟೆಡ್ ಲಿಬರೇಶನ್ ಫ್ರಾಂಟ್ ಆಫ್ ಅಸ್ಸಾಂ, ಕಂಗ್ಲೀ ಯವೊಲ್ ಕನ್ನಾ ಲುಪ್, ಪೀಪಲ್ಸ್ ಲಿಬರೇಶನ್ ಆರ್ಮಿ ಆಫ್ ಮಣಿಪುರ್, ಪೀಪಲ್ಸ್ ಪಾರ್ಟಿ ಆಫ್ ಕಂಗ್ಲೇಪಾಕ್ ಸಂಘಟನೆಗೆ ಸೇರಿದ ಉಗ್ರರಾಗಿದ್ದಾರೆ.
“ಅವರು ಬಂಡುಕೋರರಾದ ಕಾರಣ ಕಾಯ್ದೆ17(1)ರ ಅಡಿಯಲ್ಲಿ ಅಕ್ರಮ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಬಂಧಿಸಲಾಗಿದೆ” ಎಂದು ಮಯನ್ಮಾರ್ ಸೇನಾಧಿಕಾರಿ ಹೇಳಿದ್ದಾರೆ.
ಮಯನ್ಮಾರಿನಲ್ಲಿ ಭಾರತೀಯ ಮತ್ತು ಮಯನ್ಮಾರಿ ಬಂಡುಕೋರರನ್ನು ದಮನ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.