ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ‘ಜೈ ಶ್ರೀರಾಮ್’ ಎಂಬ ಘೋಷಣೆಯನ್ನು ಕಳುಹಿಸುವ ಸಲುವಾಗಿ ಬಿಜೆಪಿ ಜನತಾ ಯುವ ಮೋರ್ಚಾವು 10 ಲಕ್ಷ ಅಂಚೆಚೀಟಿಯನ್ನು ಹಂಚಿಕೆ ಮಾಡಿದೆ. ಈ ಅಂಚೆಚೀಟಿಗಳು ಎಲ್ಲಾ ಅಂಚೆ ಕಛೇರಿಗಳಲ್ಲಿ ಲಭ್ಯವಿರುವಂತೆ ಮಾಡಲಾಗಿದ್ದು, ಇದರ ಮೂಲಕ ಪಶ್ಚಿಮಬಂಗಾಳದ ಜನರು ಮುಖ್ಯಮಂತ್ರಿಗೆ ವೈಯಕ್ತಿಕ ಸಂದೇಶವನ್ನು ರವಾನಿಸಲಾಗಿದೆ.
ಇತ್ತೀಚಿಗೆ ತನ್ನ ವಾಹನ ಚಲಿಸುತ್ತಿದ್ದ ವೇಳೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಿದ್ದ ಜನರ ಗುಂಪನ್ನು ಮಮತಾ ಅವರು ಕಾರಿನಿಂದ ಇಳಿದು ತರಾಟೆಗೆ ತೆಗೆದುಕೊಂಡಿದ್ದರು. ಈ ವೀಡಿಯೋ ಭಾರೀ ವೈರಲ್ ಆಗಿತ್ತು. ನನ್ನನ್ನು ಹೀಗೆಳೆಯುವ ಸಲುವಾಗಿ ಜೈಶ್ರೀರಾಮ್ ಎಂದು ಘೋಷಣೆ ಕೂಗಲಾಗಿದೆ ಎಂದು ಅವರು ವಾದಿಸಿದ್ದರು.
ಹಿಂದೂ ದೇವರು ಶ್ರೀರಾಮನ ಬಗೆಗಿನ ಘೋಷಣೆಯನ್ನು ಅವರು ತನ್ನ ಮೇಲಿನ ಪ್ರಹಾರ ಅಥವಾ ತನಗೆ ಮಾಡಲಾಗುತ್ತಿರುವ ಅವಮಾನ ಎಂದು ಅಂದುಕೊಂಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.
ಅವರ ಈ ಧೋರಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣಾ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಿತು. ಬಿಜೆಪಿಯವರ ಪ್ರತಿ ಸಮಾವೇಶದಲ್ಲಿ ಜೈ ಶ್ರೀರಾಮ್ ಘೋಷ ಮೊಳಗಿತು. ನಾನು ಜೈಶ್ರೀರಾಮ್ ಎನ್ನುತ್ತೇನೆ ತಾಕತ್ತಿದ್ದರೆ ಬಂಧಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಹಿರಂಗವಾಗಿಯೇ ಸಾವಲೊಡ್ಡಿದರು. ಇದೀಗ ಈ ಅಭಿಯಾನದ ಭಾಗವಾಗಿ ಬಿಜೆಪಿ ಮಮತಾ ಅವರಿಗೆ ‘ಜೈಶ್ರೀರಾಮ್’ ಎಂಬ ಸಂದೇಶವನ್ನು ರವಾನಿಸಲು 10 ಲಕ್ಷ ಅಂಚೆಚೀಟಿಗಳನ್ನು ವಿತರಣೆ ಮಾಡಿದೆ.
.@BJYMinWB will distribute 10 lakh post cards today so that people can send a hearty “Jai Shri Ram” and a personalised message to @mamatofficial. You can get the postcards from your nearest post office and send your message to her address. #MamataDidiJaiShriRam pic.twitter.com/CgOVQKudFp
— BJP Bengal (@BJP4Bengal) May 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.