ನವದೆಹಲಿ: ಪುಲ್ವಾಮದಲ್ಲಿ CRPF ಯೋಧರ ಮೇಲೆ ನಡೆದ ಹೇಯ ಕೃತ್ಯವನ್ನು ಈ ದೇಶ ಎಂದಿಗೂ ಮರೆಯಲಾರದು. ಈ ಘಟನೆಗೆ ದೇಶದಾದ್ಯಂತದ ಜನರು ತೀವ್ರ ಆಕ್ರೋಶಗಳನ್ನು ಹೊರಹಾಕಿದ್ದರು, ಹುತಾತ್ಮ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದರು. ಇದೀಗ ನಮ್ಮ ದೇಶದ ಸೆಲೆಬ್ರಿಟಿಗಳು CRPF ಯೋಧರಿಗೆ ಗೌರವಾರ್ಪಣೆ ನೀಡಲು ಪರಸ್ಪರ ಕೈಜೋಡಿಸಿದ್ದಾರೆ.
CRPF ಯೋಧರಿಗಾಗಿ ‘ತು ದೇಶ್ ಹೈ ಮೇರಾ’ ಟ್ರಿಬ್ಯೂಟ್ ಸಾಂಗ್ ಅನ್ನು ರಚನೆ ಮಾಡಲಾಗಿದ್ದು, ಇದರಲ್ಲಿ ಅಮಿತಾಭ್ ಬಚ್ಚನ್, ಅಮೀರ್ ಖಾನ್, ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ.
CRPF ತನ್ನ ಟ್ವಿಟರ್ ಖಾತೆಯಲ್ಲಿ ಹಾಡು ಮತ್ತು ವೀಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ನಟರು ಬಿಳಿ ಬಟ್ಟೆಯನ್ನು ಧರಿಸಿ CRPF ಯೋಧರ ಸಾಹಸ, ಬಲಿದಾನವನ್ನು ಕೊಂಡಾಡಿದ್ದಾರೆ. ‘ಹುತಾತ್ಮರಿಗೆ ನೀವು ತೋರಿಸಿದ ಬೆಂಬಲಕ್ಕೆ ನಾವು ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ’ ಎಂದು ಟ್ವಿಟರ್ ಹ್ಯಾಂಡಲ್ನಲ್ಲಿ ಬರೆದುಕೊಂಡಿದೆ.
ಈ ಹಾಡಿಗೆ ನಟರೇ ಧ್ವನಿ ನೀಡಿದ್ದಾರೋ ಅಥವಾ ಕೇವಲ ಲಿಪ್ ಸಿಂಕ್ ಮಾಡಿದ್ದಾರೋ ಎಂದು ತಿಳಿದು ಬಂದಿಲ್ಲ. ಈ ಹ್ಯಾಂಡಲ್ ಸಲ್ಮಾನ್ ಖಾನ್, ಅಜಯ್ ದೇವಗನ್, ರಣವೀರ್ ಸಿಂಗ್, ವರುಣ್ ಧವನ್, ಅನುಪಮ್ ಖೇರ್, ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿದೆ.
ಅಮಿತಾಭ್ ಅವರು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದವರ ಪ್ರತಿ ಕುಟುಂಬಗಳಿಗೆ ತಲಾ.5 ಲಕ್ಷಗಳನ್ನು ನೀಡಿದ್ದಾರೆ. ಅಲ್ಲದೇ, ಸೆಂಟ್ರಲ್ ಇಂಡಸ್ಟ್ರಿಯಲ್ ಫೋರ್ಸ್ನ 50 ವರ್ಷ ಪೂರೈಸಿದ ವೀಡಿಯೋಗೆ ಧ್ವನಿ ನೀಡಿದ್ದಾರೆ.
Commendable work has been done by @SrBachchan, @aamir_khan and #RanbirKapoor for the tribute song #TuDeshMera dedicated to the Martyrs of Pulwama.
We would like to thank you all for showing your support towards the Martyrs. pic.twitter.com/sw6MpDP05b
— 🇮🇳CRPF🇮🇳 (@crpfindia) April 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.