2019ರ ಮಾರ್ಚ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ಗೆ ಚಾಲನೆಯನ್ನು ನೀಡಿದ್ದಾರೆ. ಇದು ವಾರಾಣಾಸಿಯ ಚಿತ್ರಣವನ್ನೇ ಬದಲಿಸುವ ಮೋದಿಯವರ ಕನಸಿನ ಯೋಜನೆಯಾಗಿದೆ.
ಹಿಂದೂಗಳ ಅತ್ಯಂತ ಪವಿತ್ರ ಸ್ಥಳ, ಪ್ರಾಚೀನ ಜ್ಞಾನದ ಸಂಕೇತ, ಧರ್ಮದ ಮೂರ್ತರೂಪ ವಾರಣಾಸಿಯಿಂದ ಸ್ಪರ್ಧಿಸುವುದಾಗಿ 2014ರ ಮಾರ್ಚ್ನಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ವೇಳೆ ಮೋದಿಯವರು ಘೋಷಣೆ ಮಾಡಿದ್ದರು. ಅವರ ಈ ಆಯ್ಕೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯವನ್ನು ಸಾಧಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿತ್ತು. ಅಲ್ಲಿ ಮೋದಿ ಗೆದ್ದು ಬಂದರು, ಪ್ರಧಾನಿಯೂ ಆದರು. ವಾರಣಾಸಿ ತಾರಾ ಕ್ಷೇತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಆ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಲು ಮತ್ತು ಅಲ್ಲಿನ ಜನಜೀವನವನ್ನು ಸುಧಾರಿಸಲು ಮೋದಿ ಕಳೆದ ಐದು ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಈ ಬಾರಿ ಅಲ್ಲಿ ಅವರಿಗೆ ಅತ್ಯಂತ ಸುಲಭದ ಜಯ ಪ್ರಾಪ್ತಿಯಾಗಲಿದೆ.
ಪವಿತ್ರ ಗಂಗಾ ನದಿಯ ಎಡ ತಟದಲ್ಲಿ ಕಂಗೊಳಿಸುವ ಕಾಶಿ ವಿಶ್ವನಾಥ ದೇಗುಲ, ಕಿರಿದಾದ ಮತ್ತು ಚಿಕ್ಕದಾದ ಕ್ಲಾಸ್ಟ್ರೊಫೊಬಿಕ್ ಲೇನ್ಗಳಿಂದ ಆವೃತ್ತವಾಗಿದೆ. ನಗರ ಮಾತ್ರವಲ್ಲ ದೇಶದ ಆರಾಧನೆಯ ಪ್ರಧಾನ ಸ್ಥಳ ಇದಾಗಿದೆ. ಹಬ್ಬಹರಿದಿನಗಳ ಸಂದರ್ಭದಲ್ಲಿ ಈ ಸಂಕೀರ್ಣ ಹಾದಿಗಳಲ್ಲಿ ಜನಸಂದಣಿಯನ್ನು ನಿರ್ವಹಿಸಲು ವಾರಣಾಸಿ ತುಂಬಾ ಪ್ರಯಾಸಪಡುತ್ತದೆ. ಪ್ರತಿನಿತ್ಯ 3,000-5,000 ಜನರು ಕಾಶಿಗೆ ಆಗಮಿಸುತ್ತಾರೆ. ಮಹಾಶಿವರಾತ್ರಿ ಮತ್ತು ಶ್ರಾವಣ ಮಾಸಗಳ ಸಂದರ್ಭದಲ್ಲಿ 1 ರಿಂದ 3 ಲಕ್ಷದವರೆಗೆ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
ಮೋದಿ ಶಿಲಾನ್ಯಾಸ ಮಾಡಿದ ಕಾಶಿ ಕಾರಿಡಾರ್ 600 ಕೋಟಿಯ ಯೋಜನೆಯಾಗಿದ್ದು, 1780 AD ಯ ಬಳಿಕ ಹಮ್ಮಿಕೊಳ್ಳಲಾಗುತ್ತಿರುವ ಮೊದಲ ಘಾಟ್ ಅಭಿವೃದ್ಧಿ ಕಾರ್ಯ. 1780ರ AD ಯಲ್ಲಿ ಮರಾಠ ರಾಣಿ ಅಹಿಲ್ಯಾ ಬಾಯಿ ಹೋಳ್ಕರ್ ದೇಗುಲವನ್ನು ಜೀರ್ಣೋದ್ಧಾರಗೊಳಿಸಿ, ಅದರ ಸುತ್ತಲ ಪರಿಸರವನ್ನು ಅಭಿವೃದ್ಧಿಪಡಿಸಿದ್ದರು.
ಈ ಕಾರಿಡಾರ್ ಪೂರ್ಣಗೊಂಡರೆ, ಜನಸಂದಣಿಯ ನಿರ್ವಹಣೆ ಅತ್ಯಂತ ಸರಳಗೊಳ್ಳಲಿದೆ. ಭಕ್ತಾದಿಗಳಿಗೆ, ಯಾತ್ರಾರ್ಥಿಗಳಿಗೆ ವಿಸ್ತಾರವಾದ ಮತ್ತು ಸ್ವಚ್ಛ ರಸ್ತೆಗಳನ್ನು ನೀಡಲಿದೆ. ಬೀದಿ ದೀಪಗಳು, ಶುದ್ಧ ಕುಡಿಯುವ ನೀರುಗಳು ಸಿಗಲಿದೆ.
दिव्य काशी विश्वनाथ की भव्यता बढ़ाने का एक अनूठा प्रयास। देखिए… pic.twitter.com/7jw5H61Otz
— Narendra Modi (@narendramodi) March 9, 2019
ಕಾಶಿ ಕಾರಿಡಾರ್ ಯೋಜನೆಯ ಪ್ರಮುಖ ಅಂಶಗಳು
1. 50 ಅಡಿ ಅಗಲದ ಕಾಶಿ ವಿಶ್ವನಾಥ ಕಾರಿಡಾರ್ ಈ ಪ್ರಾಚೀನ ದೇಗುಲವನ್ನು ವಾರಣಾಸಿಯ ಪ್ರಸಿದ್ಧ ಘಾಟ್ಗಳೊಂದಿಗೆ ಸಂಪರ್ಕಿಸಲಿದೆ. ಗಂಗೆಯ ಮಣಿಕರ್ಣಿಕ ಮತ್ತು ಲಲಿತಾ ಘಾಟ್ನ್ನು ಜ್ಯೋತಿರ್ಲಿಂಗ ದೇಗುಲ ಕಾಶಿ ವಿಶ್ವನಾಥಕ್ಕೆ ನೇರವಾಗಿ ಸಂಪರ್ಕಿಸಲಿದೆ.
2. 50 ಅಡಿ ಅಗಲದ ಕಾಲುದಾರಿ ಯಾತ್ರಾರ್ಥಿಗಳಿಗೆ ಕಾಶಿ ವಿಶ್ವನಾಥ ದೇಗುಲದಿಂದ ಗಂಗಾ ನದಿಯ ಘಾಟ್ಗಳಿಗೆ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಮತ್ತು ಈ ಸಂಖ್ಯೆ ವಿಶೇಷ ದಿನಗಳಲ್ಲಿ ಲಕ್ಷವನ್ನು ದಾಟುತ್ತದೆ. ದೇಗುಲಕ್ಕೆ ಈಗ ಇರುವ ಕಾಲುದಾರಿ ಕಿರಿದಾಗಿದ್ದು, ಜನ ಉದ್ದದ ಕ್ಯೂಗಳಲ್ಲಿ ನಿಲ್ಲಬೇಕಾಗುತ್ತದೆ. ಕಾಲುದಾರಿ ಅಗಲೀಕರಣದಿಂದ ಜನಸಂದಣಿ ನಿಯಂತ್ರಣ ಸಮಸ್ಯೆ ನಿವಾರಣೆಯಾಗಲಿದೆ. ಅಭಿವೃದ್ಧಿಯಾದ ಬಳಿಕ, ಮನಿಕರ್ಣಿಕ ಮತ್ತು ಲಲಿತಾ ಘಾಟ್ಗಳಿಗೆ ದೇಗುಲ ನೇರವಾಗಿ ಸಂಪರ್ಕಿತವಾಗಲಿದೆ.
3. ಕಾರಿಡಾರ್ ಜೊತೆಜೊತೆಗೆ ಯಾತ್ರಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ದೇಗುಲದ ಇತಿಹಾಸ, ಸಂಸ್ಕೃತಿ ಸಾರುವ ಮ್ಯೂಸಿಯಂನ್ನು ನೋಡುವ ಭಾಗ್ಯ ಪ್ರಾಪ್ತಿಯಾಗಲಿದೆ.
4. ಹವನ ಮತ್ತು ಯಾಗಗಳನ್ನು ನಡೆಸಲು ಹೊಸದಾದ ಯಾಗ ಶಾಲೆಗಳು ನಿರ್ಮಾಣವಾಗಲಿದೆ.
5. ಅರ್ಚಕರಿಗೆ, ಭಕ್ತಾದಿಗಳಿಗೆ, ಸ್ವಯಂಸೇವಕರಿಗೆ ತಂಗಲು ಲಾಡ್ಜ್ಗಳು ಮತ್ತು ಪ್ರವಾಸಿಗರಿಗೆ ನೆರವಾಗಲು ಮಾಹಿತಿ ಕೇಂದ್ರಗಳ ನಿರ್ಮಾಣವಾಗಲಿದ್ದು, ವಾರಾಣಸಿಯ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿ ದೊರೆಯಲಿದೆ.
6. ದೇಗುಲ ಕಾರ್ಯಕ್ರಮ, ಸಭೆ ಮತ್ತು ಸಮಾವೇಶಗಳನ್ನು ನಡೆಸಲು ಬೃಹತ್ ಅಡಿಟೋರಿಯಂ ನಿರ್ಮಾಣವಾಗಲಿದೆ.
7. ಯಾತ್ರಾರ್ಥಿಗಳಿಗೆ ಸ್ವಾದಿಷ್ಟ ಬನಾರಸಿ ಮತ್ತು ಅವಧಿ ಖಾದ್ಯಗಳ ರುಚಿಯನ್ನು ಉಣಬಡಿಸಲು ಫುಡ್ ಸ್ಟ್ರೀಟ್ಗಳು ತಲೆ ಎತ್ತಲಿದೆ.
ಕಾಶಿ ವಿಶ್ವನಾಥ ದೇಗುಲದ ನಿವಾಸಿಗಳು ತಮ್ಮ ಬದುಕು ಸುಧಾರಣೆಯಾಗುತ್ತಿರುವುದನ್ನು ಮಾತ್ರವಲ್ಲ, ತಮ್ಮ ಸುತ್ತಲ ಪ್ರದೇಶ ಅಭಿವೃದ್ಧಿಯಾಗುತ್ತಿರುವುದನ್ನೂ ಕಣ್ತುಂಬಿಕೊಳ್ಳುತ್ತಿದ್ದಾರೆ.
ಈಗಾಗಲೇ ಯೋಗಿ ಆದಿತ್ಯನಾಥ ಸರ್ಕಾರ ಭೂ ಕಬಳಿಕೆ ವಿರೋಧಿ ಹೋರಾಟವನ್ನು ನಡೆಸುತ್ತಿದ್ದಾರೆ. ಖಾಸಗಿ ವ್ಯಕ್ತಿಗಳು ಕಬಳಿಸಿರುವ ಸುಮಾರು 80 ದೇಗುಲಗಳನ್ನು ಸರ್ಕಾರ ಪತ್ತೆ ಮಾಡಿದೆ. 300ಕ್ಕೂ ಅಧಿಕ ಮನೆಗಳನ್ನು ಸ್ವಾಧೀನಪಡಿಸಿಕೊಂಡಿದೆ. ವಿಶ್ವನಾಥ ದೇಗುಲಕ್ಕೆ ಕಾಲುದಾರಿ ನಿರ್ಮಿಸುವ ಸಲುವಾಗಿ ಭೂಕಬಳಿಕೆದಾರರು ಅಕ್ರಮವಾಗಿ ಕಬಳಿಸಿಕೊಂಡಿದ್ದ ಭೂಮಿಯನ್ನು ವಶಕ್ಕೆ ಪಡೆಯಲಾಗುತ್ತಿದೆ.
ಮೋದಿಯವರು ವಾರಣಾಸಿಯ ಸಂಸದರಾದ ಬಳಿಕ ವಾರಣಾಸಿಯ ಚಿತ್ರಣ ಬದಲಾಗುತ್ತಿದ್ದು, ದೇಶದ ಗಮನವನ್ನು ಮಾತ್ರವಲ್ಲ ವಿದೇಶದ ಗಮನವನ್ನೂ ಸೆಳೆಯುತ್ತಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆಯವರು 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಮೋದಿಯವರೊಂದಿಗೆ ಗಂಗಾ ಆರತಿಯಲ್ಲಿ ಭಾಗಿಯಾಗಿ, ವಾರಣಾಸಿಯ ಸೌಂದರ್ಯದ ಬಗ್ಗೆ ಗುಣಗಾನ ಮಾಡಿದ್ದರು.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಮತ್ತು ಮೋದಿ ಜಂಟಿಯಾಗಿ ವಾರಾಣಸಿಯಲ್ಲಿ ಹಲವಾರು ಯೋಜನೆಗಳಿಗೆ 2018ರಲ್ಲಿ ಚಾಲನೆಯನ್ನು ನೀಡಿದ್ದಾರೆ. 2017ರಲ್ಲಿ ಜಿ20 ನಾಯಕರ ಸಭೆಯನ್ನು ಇಲ್ಲಿ ಆಯೋಜನೆಗೊಳಿಸುವ ಮೂಲಕ ಮೋದಿ, ವಾರಣಾಸಿಗೆ ಜಾಗತಿಕ ಮನ್ನಣೆಯನ್ನು ತಂದಿತ್ತರು.
ಅತ್ಯಂತ ಪ್ರಾಚೀನ ಮತ್ತು ದೇಶದ ಆಧ್ಯಾತ್ಮ ಶಕ್ತಿ ಕೇಂದ್ರ ಎನಿಸಿರುವ ವಾರಣಾಸಿ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿತ್ತು, ಆದರೆ ಮೋದಿ ಈಗ ಅದನ್ನು ಅಭಿವೃದ್ಧಿಯಲ್ಲಿ ದಾಪುಗಾಲಿಡುವ ಕ್ಷೇತ್ರವಾಗಿ ಹೊರಹೊಮ್ಮಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.