ಹಿಂದಿನ ಕಾಲದಲ್ಲಿ ಮಹಿಳೆಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುತ್ತಿರಲಿಲ್ಲ. ಮಕ್ಕಳನ್ನು ಹೆರುವುದು, ಪುರುಷರ ಸೇವೆ ಮಾಡುವುದು ಅಷ್ಟೇ ಆಕೆಯ ಕೆಲಸ ಎಂಬಂತಹ ಪರಿಸ್ಥಿತಿಗಳಿದ್ದವು. ಆದರೆ ಇಂದು ಕಾಲ ಬದಲಾಗಿದೆ, ಮಹಿಳಾ ಸಬಲೀಕರಣದ ವಿಷಯದಲ್ಲಿ ನಮ್ಮ ಸಮಾಜ ಬಹಳಷ್ಟು ಮುಂದಕ್ಕೆ ಸಾಗಿದೆ. ಸರ್ಕಾರ ತನ್ನ ನಾಗರಿಕರ ಮನಸ್ಥಿತಿಯನ್ನು ರೂಪಿಸುತ್ತದೆ ಎಂಬ ಮಾತಿದೆ, ಇಂದಿನ ಸರ್ಕಾರ ಕೇವಲ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಅದನ್ನು ಸಾಕಾರಕ್ಕೆ ತರಲು ಶ್ರಮಿಸುತ್ತಿದೆ. ಮಹಿಳಾ ಸಬಲೀಕರಣಕ್ಕೆ ಪ್ರಮುಖ ಉದಾಹರಣೆಯಾಗಿ ಇಂದು ನಮ್ಮ ಮುಂದೆ ನಿಂತಿರುವವರು ಕೇಂದ್ರ ಸರಕಾರದ ಹೆಮ್ಮೆಯ ಮೂರು ಮಹಿಳಾ ಸಚಿವರುಗಳಾದ ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್ ಮತ್ತು ಸ್ಮೃತಿ ಇರಾನಿ. ಈ ಮಹಿಳೆಯರು ಕೇವಲ ನಮ್ಮ ದೇಶದ ರಾಜಕೀಯ ಮುಂದಾಳುಗಳಲ್ಲ, ಬದಲಾಗಿ ಇವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ನಾಯಕರು, ಜಾಗತಿಕ ವೇದಿಕೆಗಳಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ದಿಟ್ಟೆಯರು.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್ ಭಾರತದ ಖ್ಯಾತ ರಾಜಕಾರಣಿಗಳಲ್ಲಿ ಒಬ್ಬರು ಮತ್ತು ಸುಪ್ರೀಂ ಕೋರ್ಟ್ನ ಮಾಜಿ ವಕೀಲೆ ಕೂಡ ಹೌದು. ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಮೇ 26ರಂದು ಇವರು ದೇಶದ ವಿದೇಶಾಂಗ ಸಚಿವೆಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸುಷ್ಮಾ ಸ್ವರಾಜ್ ಅವರು ಏಳು ಬಾರಿ ಸಂಸತ್ತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಮತ್ತು ಮೂರು ಬಾರಿ ವಿಧಾನಸಭೆಯ ಸದಸ್ಯೆಯಾಗಿದ್ದಾರೆ. 1977ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಇವರು ಉತ್ತರ ಭಾರತೀಯ ರಾಜ್ಯ ಹರ್ಯಾಣದ ಸಂಪುಟ ದರ್ಜೆ ಸಚಿವೆಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ದೆಹಲಿಯ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಅಮೆರಿಕದ ದಿನಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ ಸುಷ್ಮಾ ಸ್ವರಾಜ್ ಅವರು ಭಾರತದ ಅತ್ಯಂತ ನೆಚ್ಚಿನ ರಾಜಕಾರಣಿ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಜವಾಬ್ದಾರಿಯನ್ನು ಟೆಲಿಕಮ್ಯೂನಿಕೇಷನ್ ಖಾತೆಯೊಂದಿಗೆ ಹೆಚ್ಚುವರಿಯಾಗಿ ನಿಭಾಯಿಸಿದ ಅನುಭವ ಇವರಿಗಿದೆ. ಈ ಅವಧಿಯಲ್ಲಿ ಅವರು ಮಾಡಿದ ಅತಿ ದೊಡ್ಡ ಸಾಧನೆ ಎಂದರೆ ಸಿನಿಮಾ ನಿರ್ಮಾಣವನ್ನು ಒಂದು ಇಂಡಸ್ಟ್ರಿ ಎಂದು ಪರಿಗಣಿಸಿದ್ದು.
ಅವರು ಆರೋಗ್ಯ ಸಚಿವೆಯಾಗಿ, ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಇವರು ದೇಶದಾದ್ಯಂತ 6 ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಗಳನ್ನು ನಿರ್ಮಾಣ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿಗೆ ಭಾಜನರಾದ ಏಕೈಕ ಮಹಿಳೆ ಇವರಾಗಿದ್ದಾರೆ. 2019ರ ಫೆಬ್ರವರಿ 19ರಂದು ಇವರು ಪ್ರತಿಷ್ಠಿತ ಗ್ರ್ಯಾಂಡ್ ಕ್ರಾಸ್ ಆಫ್ ಬಾರ್ಡರ್ ಆಫ್ ಸಿವಿಲ್ ಮೆರಿಟ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದನ್ನು ಸ್ಪ್ಯಾನಿಶ್ ಸರ್ಕಾರವು ನೀಡಿದೆ. 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಪಾರು ಮಾಡುವಲ್ಲಿ ಭಾರತ ನೀಡಿದ ಸಹಕಾರವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಯಾವುದೇ ಹುದ್ದೆಯಲ್ಲಿದ್ದರೂ ಆ ಹುದ್ದೆಗೆ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಸುಷ್ಮಾ ಮಾಡಿದ್ದಾರೆ. ಪ್ರಸ್ತುತ ವಿದೇಶಾಂಗ ಸಚಿವೆಯಾಗಿಯೂ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ. ಸಾಕ್ ರೀಜನ್, ಅಸಿಯಾನ್ ರೀಜನ್ ಮುಂತಾದ ಕಿಶನ್ಗಳ ಭಾರತೀಯ ನಾಯಕರೊಂದಿಗೆ ದುಂಡುಮೇಜಿನ ಸಮಾವೇಶಗಳನ್ನು ಅವರು ಆಯೋಜಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ವಿದೇಶಗಳ ವಿವಿಧ ಭಾಗಗಳಲ್ಲಿ ಅಪಾಯಕ್ಕೆ ಸಿಲುಕಿಕೊಂಡಿದ್ದ ಸುಮಾರು 90 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಪಾರು ಮಾಡಿದ ಸಾಧನೆ ಇವರದ್ದಾಗಿದೆ. ಪ್ರಸ್ತುತ ಅವರು ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಸಲುವಾಗಿ ವಿಶ್ವ ಸಮುದಾಯದ ಸಹಾಯ, ಬೆಂಬಲವನ್ನು ಪಡೆಯುವಲ್ಲಿ ಕಾರ್ಯನಿರತರಾಗಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರಕಾರದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. 2017ರಿಂದ ಇವರು ರಕ್ಷಣಾ ಸಚಿವೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. 2016ರಲ್ಲಿ ರಾಜ್ಯಸಭೆಗೆ ಆಯ್ಕೆಗೊಂಡ ಇವರು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ವಾಣಿಜ್ಯ ಮತ್ತು ಕೈಗಾರಿಕೆ ಸ್ವತಂತ್ರ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2017ರಲ್ಲಿ ಇವರನ್ನು ದೇಶದ ರಕ್ಷಣಾ ಸಚಿವೆಯಾಗಿ ನೇಮಕ ಮಾಡಲಾಗಿದೆ .
ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಇವರು ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಆಸಕ್ತಿಯನ್ನು ಹೊರತುಪಡಿಸಿಯೂ ಇವರು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಪ್ರೈಸ್ ವಾಟರ್ ಹೌಸ್ನ ಹಿರಿಯ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಬಿಪಿಸಿ ವರ್ಲ್ಡ್ ಸರ್ವಿಸ್ನೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಿಕ್ಷಣದ ಮಹತ್ವವನ್ನು ಅರಿತುಕೊಂಡಿರುವ ಇವರು ಪ್ರಣವ ಎಂಬ ಶಾಲೆಯನ್ನು ಹೈದರಾಬಾದ್ನಲ್ಲಿ ಸ್ಥಾಪಿಸಿ ಶಿಕ್ಷಣ ವಲಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.
ಪ್ರಸ್ತುತ ದೇಶದ ರಕ್ಷಣಾ ಸಚಿವೆಯಾಗಿ ಇವರು ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಪುಲ್ವಾಮ ದಾಳಿಯ ಮತ್ತು ಬಾಲಾಕೋಟ್ ವೈಮಾನಿಕ ದಾಳಿಯ ಸಂದರ್ಭದಲ್ಲಿ ಇವರು ಭದ್ರತೆ ಮತ್ತು ರಕ್ಷಣಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಮಾತ್ರವಲ್ಲ, ಚೀನಾದೊಂದಿಗಿನ ಡೋಕ್ಲಾಂ ವಿವಾದವನ್ನೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಾದ ಎಲ್ಲಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸೇನಾಪಡೆಗಳಿಗಾಗಿ ಅವರು ಖರೀದಿ ಮಾಡಿದ್ದಾರೆ. ಅವರ ಅರುಣಾಚಲ ಪ್ರದೇಶ ಮತ್ತು ಮೇಘಾಲಯದಿಂದ ಶಸ್ತ್ರಾಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ಹಿಂಪಡೆದುಕೊಂಡ ನಿರ್ಧಾರ ಅತ್ಯಂತ ಪ್ರಮುಖವಾದುದ್ದಾಗಿದೆ.
ಸ್ಮೃತಿ ಇರಾನಿ
ಕೇಂದ್ರ ಸರ್ಕಾರದ ಅತ್ಯಂತ ಪ್ರಭಾವಿ ಮಹಿಳಾ ರಾಜಕಾರಣಿ ಎನಿಸಿರುವ ಸ್ಮೃತಿ ಇರಾನಿ, ಮಾಜಿ ರೂಪದರ್ಶಿ ಹಾಗೂ ಕಿರುತೆರೆ ನಟಿ ಮತ್ತು ನಿರ್ಮಾಪಕಿಯೂ ಹೌದು. ಗುಜರಾತಿನಿಂದ ಇವರು ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಭಾರತ ಸರ್ಕಾರದಲ್ಲಿ ಇವರು ಟೆಕ್ಸ್ಟೈಲ್ ಸಚಿವೆಯಾಗಿ ಹೊಂದಬಲ್ಲಳು ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಭಿನ್ನತೆಯನ್ನು ಕಾಯ್ದುಕೊಳ್ಳುವ ಮೂಲಕ ಮಹಿಳೆ ಬಹುಮುಖ ಪ್ರತಿಭೆಯನ್ನುಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಾಧನೆ ಮಾಡಬೇಕು ಎಂಬ ಛಲವಿದ್ದರೆ ಯಾವುದೇ ಕನಸನ್ನಾದರೂ ನನಸು ಮಾಡಿಕೊಳ್ಳಬಹುದು. ತಮಗೆ ಪೂರಕವಾದ ವೃತ್ತಿಯನ್ನು ಆಯ್ದುಕೊಂಡು ಮುಂದೆ ಸಾಗಬಹುದು. ಸ್ಮೃತಿ ಸತತ ಐದು ಬಾರಿ ಅತ್ಯುತ್ತಮ ನಟಿ ಎಂಬ ಭಾರತೀಯ ಟೆಲಿವಿಷನ್ ಅಕಾಡಮಿ ಅವಾರ್ಡ್ನ್ನು ಪಡೆದುಕೊಂಡಿದ್ದಾರೆ. ನಾಲ್ಕು ಬಾರಿ ಇಂಡಿಯನ್ ಟೆಲಿ ಅವಾರ್ಡ್ನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಜಕೀಯವಾಗಿ, ಸ್ಮೃತಿ ಮಹಾರಾಷ್ಟ್ರ ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಮಹಿಳಾ ಮೋರ್ಛಾದ ಆಲ್ ಇಂಡಿಯಾ ಪ್ರೆಸಿಡೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆ, 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಮೇಥಿಯಲ್ಲಿ ಎದುರಿಸಿದ್ದಾರೆ. ಅಲ್ಲಿ ಬಿಜೆಪಿಯ ಮತ ಹಂಚಿಕೆಯನ್ನು ಶೇ.5ರಿಂದ ಶೇ.34ಕ್ಕೆ ಏರಿಸಿ, ಕಾಂಗ್ರೆಸ್ ಮತ ಹಂಚಿಕೆಯನ್ನು ಶೇ.71ರಿಂದ ಶೇ.34ಕ್ಕೆ ಇಳಿಸಿದ್ದಾರೆ. ಸರ್ಕಾರ ರಚನೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಮಾನವ ಸಂಪನ್ಮೂಲ ಸಚಿವೆಯಾಗಿ ನೇಮಕಗೊಳಿಸಿದರು. 2017ರಲ್ಲಿ ಹೆಚ್ಚುವರಿಯಾಗಿ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆಯನ್ನೂ ನೀಡಲಾಗಿತ್ತು. ಟೆಕ್ಸ್ಟೈಲ್ ಸಚಿವೆಯಾಗಿ ಅವರ ಸಾಧನೆ ಅಮೋಘ. ದೇಶದಲ್ಲಿ 21 ರೆಡಿಮೇಟ್ ಗಾರ್ಮೆಂಟ್ ಉತ್ಪಾದನಾ ಯುನಿಟ್ಗಳನ್ನು ಅವರು ಸ್ಥಾಪಿಸಿದ್ದಾರೆ. ಟೆಕ್ಸ್ಟೈಲ್ ಸೆಕ್ಟರ್ನ ಅಭಿವೃದ್ಧಿ ಮತ್ತು ಉತ್ಪಾದನೆಗೆ ಅವರು ಹೆಚ್ಚಿನ ಗಮನವನ್ನು ನೀಡಿದ್ದಾರೆ. ಕೈಮಗ್ಗ ನೇಕಾರರಿಗಾಗಿ, ರೇಷ್ಮೇ ಉತ್ಪಾದಕರಿಗಾಗಿ ಅವರು ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳಾ ಹಕ್ಕು ಮತ್ತು ಸಮಾನತೆಯ ಪ್ರತಿಪಾದಕಿಯಾಗಿರುವ ಅವರು, ಮಹಿಳಾ ಸುರಕ್ಷತೆ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ನಿಟ್ಟಿನಲ್ಲಿ ಧ್ವನಿ ಎತ್ತಿದ್ದಾರೆ.
ಈ ಮೂರು ಮಹಿಳೆಯರು ಭಾರತದ ತರುಣಿಯರಿಗೆ ರೋಲ್ ಮಾಡೆಲ್ಗಳು ಅಂದರೆ ತಪ್ಪಿಲ್ಲ. ತಮ್ಮ ಬುದ್ಧಿವಂತಿಕೆ ಮತ್ತು ಪರಿಶ್ರಮದಿಂದ ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಮೂವರು ಸೂಪರ್ ವುಮೆನ್ಗಳು ಯಾವುದೇ ಕುಟುಂಬ ರಾಜಕಾರಣದ ಸಂಪರ್ಕವನ್ನು ಹೊಂದಿಲ್ಲ ಮತ್ತು ವಿಭಿನ್ನವಾದ ಹಿನ್ನಲೆ, ವೃತ್ತಿ ಮತ್ತು ಕ್ಷೇತ್ರಗಳಿಂದ ಬಂದವರಾಗಿದ್ದಾರೆ. ಆದರೆ ಇವರಲ್ಲಿರುವ ಸಾಮಾನ್ಯ ಗುಣವೆಂದರೆ, ದೇಶದ ಸರ್ವಾಂಗೀಣ ಅಭಿವೃದ್ಧಿ ಮತ್ತು ಪ್ರಗತಿಯತ್ತ ನಿಸ್ವಾರ್ಥ ಸೇವೆ.
source: rightlog
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.