×
Home About Us Advertise With s Contact Us

ಶ್ರೀನಿವಾಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ನಿವಾರಣಾ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

ಮಂಗಳೂರು : ಮುಕ್ಕದಲ್ಲಿರುವ ಶ್ರೀನಿವಾಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ರೋಗ ನಿವಾರಣೆ ಮತ್ತು ಜಾಗೃತೆಯನ್ನು ಮೂಡಿಸುವ ಸಲುವಾಗಿ ಕ್ಯಾನ್ಸರ್ ವಸ್ತು ಸಂಗ್ರಹಾಲಯವನ್ನು ಕೇಂದ್ರ ಸರಕಾರದ ಸನ್ಮಾನ್ಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಸಚಿವರಾದ ಅನಂತಕುಮಾರ್ ಹೆಗಡೆಯವರು ಉದ್ಘಾಟಿಸಿದರು.

ಕಾಲೇಜಿನ ಮುಖ್ಯಸ್ಥರಾದ ಡಾ. ಮನೋಜ್ ವರ್ಮಾರವರು ಸಚಿವರನ್ನು ಸ್ವಾಗತಿಸಿದರು ಹಾಗೂ ಈ ವಸ್ತು ಸಂಗ್ರಹಾಲಯದ ಪ್ರಾಮುಖ್ಯತೆಯನ್ನು ಸಚಿವರಿಗೆ ಮತ್ತು ನೆರೆದ ಸಮಸ್ತರಿಗೆ ವಿವರಿಸಿದರು. ಕ್ಯಾನ್ಸರ್­ನ ಸುಮಾರು 55-60% ರೋಗಗಳು ಬಾಯಿಯ ಕ್ಯಾನ್ಸರ್ ಗೆ ಸಂಬಂಧಿಸಿದ್ದು, ಜನರಿಗೆ ಇದರ ಕುರಿತು ಮಾಹಿತಿ ಅತ್ಯಗತ್ಯವಾಗಿದೆ ಎಂದು ಡಾ. ಮನೋಜ್ ವರ್ಮಾರವರು ತಿಳಿಸಿದರು.

ದಂತ ವೈದ್ಯಕೀಯ ಕಾಲೇಜಿನ 9 ವಿಭಾಗಗಳು ವಿನ್ಯಾಸಗೊಳಿಸಿ ನಿರೂಪಿಸಿದ ಕ್ಯಾನ್ಸರ್ ವಸ್ತು ಸಂಗ್ರಹಾಲಯವನ್ನು ಕೇಂದ್ರ ಸಚಿವರು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಕಾಲೇಜಿನ ದಂತ ವೈದ್ಯರು ನ್ಯಾನೋ ತಂತ್ರಜ್ಞಾನದ ಮೂಲಕ ಸಂಶೋಧನೆ ಮಾಡಿ ಕ್ಯಾನ್ಸರ್ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಕಾಲೇಜಿನ ಸಂಶೋಧನೆಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಸಹಕಾರವನ್ನು ನೀಡುವ ಭರವಸೆ ನೀಡಿದರು.

ಎ ಜೆ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ರೀಡರ್ ಡಾ. ಶುಭನ್ ಆಳ್ವಾರವರು ಅತಿಥಿಗಳಾಗಿ ಭಾಗವಹಿಸಿದರು ಹಾಗೂ ಕ್ಯಾನ್ಸರ್ ನಿವಾರಣೆ ಮಾಹಿತಿಯನ್ನೊಳಗೊಂಡ ಕರಪತ್ರವನ್ನು ಬಿಡುಗಡೆಗೊಳಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಸಿಎ ಎ ರಾಘವೇಂದ್ರ ರಾವ್, ಸಹ ಕುಲಪತಿಗಳಾದ ಡಾ. ಎ ಶ್ರೀನಿವಾಸ್ ರಾವ್, ಉಪಕುಲಪತಿಗಳಾದ ಡಾ. ಪಿ ಎಸ್ ಐತಾಳ್, ಅಸೋಸಿಯೇಟ್ ಡೀನ್ ಡಾ. ಲಾವಣ್ಯಾ ವರ್ಮಾ, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮೋಹಿನಿಯಾಟ್ಟಂ ನೃತ್ಯದ ಮೂಲಕ ಸಚಿವರನ್ನು ಸ್ವಾಗತಿಸಿದರು. ಡಾ. ನತಾಶಾ ಅಮ್ಮನ್ನ ಮತ್ತು ಡಾ. ಶಿಹಾನ್ ಡಿಸೋಜಾರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

 

Recent News

Back To Top
error: Content is protected !!