ಭವ್ಯ ಭಾರತದ ಕಲೆ, ವಾಸ್ತು ಶಿಲ್ಪ, ಇತಿಹಾಸ, ಪರಂಪರೆ ಹಾಗೂ ರಹಸ್ಯಗಳಿಗೆ ಬೆಳಕು ಚೆಲ್ಲುವ ವಿನೂತನ ಪುಸ್ತಕ ‘ಗ್ಲೋರಿಯಸ್ ಭಾರತ್’
ಮಂಗಳೂರು: ಪ್ರಸ್ತುತ ನಮ್ಮ ದೇಶದಲ್ಲಿ ಇತಿಹಾಸ ಪಠ್ಯ ಪುಸ್ತಕವೆಂದರೆ ಕೇವಲ ಯುದ್ಧ, ಭೌಗೋಳಿಕ ಮಾಹಿತಿಯನ್ನು ಮಾತ್ರವೇ ಒಳಗೊಂಡಿದ್ದು ಭಾರತರ ಮೂಲೆ ಮೂಲೆಗಳಲ್ಲಿರುವ ಐತಿಹಾಸಿಕ, ಸಾಂಸ್ಕೃತಿಕ ಭೌಗೋಳಿಕ ರಹಸ್ಯಗಳು, ಪ್ರಾಚೀನ ವಿಜ್ಞಾನ ಇತ್ಯಾದಿ ಸೇರಿದಂತೆ ದೇಶದ ಶ್ರೇಷ್ಠತೆಯನ್ನು ಬಿಂಬಿಸುವ ವಿಷಯಗಳು ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ. ದೇಶದಲ್ಲಿನ ಇಂತಹ ಅಭೂತಪೂರ್ವ ಸಂಗತಿಗಳು, ಸ್ಥಳಗಳ ಮಾಹಿತಿಯು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಮಾಜಿ ಸಚಿವರಾದ ಶ್ರೀಯುತ ಕೃಷ್ಣ ಜೆ. ಪಾಲೆಮಾರ್ ಅವರ ಆಸಕ್ತಿಗೆ ಪೂರಕವಾಗಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನಾಂಗದಲ್ಲಿ ದೇಶ, ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಜ್ಞಾನವನ್ನು ಒಳಗೊಂಡಂತೆ, ದೇಶಾಭಿಮಾನವನ್ನು ವೃದ್ಧಿಸುವ ಸಲುವಾಗಿ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸಲಹೆಗಾರರಾದ ಅನಂತ್ ಪ್ರಭು ಜಿ. ಅವರು ’ಗ್ಲೋರಿಯಸ್ ಭಾರತ್’ ಎಂಬ ಪುಸ್ತಕವನ್ನು ರಚಿಸಿರುತ್ತಾರೆ. ಇದರ 5000 ಪ್ರತಿಗಳನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಐದು ಜಿಲ್ಲೆಗಳ ವಿವಿಧ ಶಾಲೆಗಳಿಗೆ ವಿತರಿಸಲಾಗುವುದು. 2019 ಕ್ಕೆ 25,000 ಪ್ರತಿಗಳನ್ನು ಪ್ರಕಟಿಸಿ ಕರ್ನಾಟಕದ ಯುವಜನತೆಗೆ ಹಂಚುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.
ಇದೇ ಪುಸ್ತಕದಲ್ಲಿ ಪ್ರಕಟವಾದ 111 ವಿಷಯಗಳಿಗೆ ಸಂಬಂಧಿಸಿದ ಆಯ್ದ ವಿಷಯಗಳ ಮೇಲೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಎಲ್ಲಾ 9 ಮತ್ತು 10 ನೆಯ ತರಗತಿಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯಾ ಜಿಲ್ಲೆಗಳಲ್ಲಿ ನಡೆಸಲಾಗುವುದು. ಈ ಪುಸ್ತಕವನ್ನು ಎಲ್ಲಾ ಶಾಲೆಗಳಿಗೆ ಶೀಘ್ರದಲ್ಲಿ ತಲುಪಿಸಲಾಗುವುದು. ಇದು ವೈಯಕ್ತಿಕ ಸ್ಪರ್ಧೆಯಾಗಿದ್ದು, ವಿಜೇತರಿಗೆ ಪ್ರಥಮ-5000, ದ್ವಿತೀಯ -3000, ತೃತೀಯ-2000 ರೂಪಾಯಿಗಳ ನಗದು ಬಹುಮಾನದೊಂದಿಗೆ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಈ ಸ್ಪರ್ಧೆಗೆ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವಂತೆ ಪೋಷಕರು ಹಾಗೂ ಶಿಕ್ಷಕರು ಪ್ರೇರೇಪಿಸಬೇಕೆಂದು ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಉಪನ್ಯಾಸಕರಾದ ಶ್ರೀ ಅಜಿತ್ ರೈಯವರನ್ನು 0824 2210300/ 8197498709 ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.