ಮಂಗಳೂರು : ದಿನಾಂಕ 7-8-2018 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮಂಗಳೂರು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಚಾರ & ಅಕ್ರಮಗಳ ತನಿಖೆಗೆ ಆಗ್ರಹಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಒಂದೆರಡೂ ಅಧಿಕಾರಿಗಳು ತಮ್ಮದೇ ದುಷ್ಟಕೂಟವನ್ನು ರಚಿಸಿಕೊಂಡು ವಿಶ್ವವಿದ್ಯಾಲಯದ ಸಂಪನ್ಮೂಲಗಳನ್ನು ಬಾಚಿ ಬಾಚಿ ದೋಚಿ ಕೊಳ್ಳೆ ಹೊಡೆಯುವಂತಿರುವುದು ಪ್ರಜ್ಞಾವಂತ, ವಿದ್ಯಾವಂತ ಜಿಲ್ಲೆಗಳಿಗೆ ಮಾಡಿದ ಅವಮಾನ. ತಮ್ಮ ಸ್ವಾರ್ಥವನ್ನು ಈಡೇರಿಸುವುದಕ್ಕೋಸ್ಕರ ದುಷ್ಟಕೂಟವನ್ನು ರಚಿಸಿಕೊಂಡು ಜೊತೆಗೆ ಕೆಲವು ರಾಜಕಾರಿಣಿಗಳನ್ನು ಓಲೈಸಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವುದು ಇತ್ತಿಚಿಗೆ ಗಮನಕ್ಕೆ ಬಂದಿದೆ. ಲಕ್ಷಾಂತರ ಬಡ ವಿದ್ಯಾರ್ಥಿಗಳು ಮತ್ತು ಅವರನ್ನು ಹೆತ್ತವರು ಕಷ್ಟಪಟ್ಟು ಬೆವರು ಸುರಿಸಿ ಕಟ್ಟಿದ ಶುಲ್ಕವನ್ನು ನಾನಾ ಯೋಜನೆಗಳ ಹೆಸರಿನಲ್ಲಿ ಲೂಟಿ ಮಾಡುತ್ತಿರುವರು. ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳ ತನಿಖೆ ಶೀಘ್ರವೇ ಆಗಬೇಕು ಎಂದು ಈ ಸಂದರ್ಭ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಾತ್ವಿಕ, ಮಣಿಕಂಟ, ವಿಕಾಸ್, ಸಾಯಿಲ್ ರಾಹುಲ್, ಭರತ, ಅಭೀ, ಶ್ರೇಯಸ್, ರಕ್ಷಿತ್, ಶರುಲ್ (ಕಾರ್ಯದರ್ಶಿ), ಶೀತಲ್, ಕಿರಣ, ಬಸವೇಶ, ವಿದ್ಯಾರ್ಥಿನಿಯರಾದ ಬಿಂದು, ರಿಶಾ, ಸುಮಿತ್ರಾ, ತೃಪ್ತಿ, ವಿನಯಲಕ್ಮಿ ಶ್ರೇಯ ಸೇರಿದಂತೆ ಸುಮಾರು 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.