News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಳಿನ್ ಕುಮಾರ್ ಕಟೀಲ್ ಜನಸಾಮಾನ್ಯರ ಸಂಸದ : ಶಾಸಕ ಸಂಜೀವ ಮಠಂದೂರು

ಮಂಗಳೂರು : ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಇದು ವಿಷಾದನೀಯ. ನಳಿನ್ ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಒಬ್ಬ ನಿಷ್ಕಳಂಕ ಸಂಸದರಾಗಿದ್ದಾರೆ. ಯಾವುದೇ ಭ್ರಷ್ಟಾಚಾರವಿಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ ಸಾಕಷ್ಟು ಅನುದಾನಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಅವರು ಅಡಿಕೆ ಬೆಳೆಗಾರರ ಹಿತರಕ್ಷಣೆ ಸೇರಿದಂತೆ ಜನಸಾಮಾನ್ಯರ ಉನ್ನತಿಗೆ ಶ್ರಮಿಸುತ್ತಿದ್ದಾರೆ.

ಸದಾ ಜನಸಾಮಾನ್ಯರ ಜೊತೆ ಬೆರೆಯುವ ಸಂಸದರಾಗಿದ್ದುಕೊಂಡು ಈಗಾಗಲೇ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಮಾನವರಹಿತ ರೈಲ್ವೆ ಕ್ರಾಸಿಂಗ್ ತೆರವು, ಮೀನುಗಾರರಿಗೆ ನೆರವು, ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರಧನ ನೀಡಿಕೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ, ಜಿಲ್ಲೆಯಲ್ಲಿ ಅತಿಹೆಚ್ಚು ಜನರಿಗೆ ಮುದ್ರಾ ಯೋಜನೆ ಸಾಲ, ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ನೀಡಿಕೆ, ಜನಧನ್ ಯೋಜನೆಯಂತಹ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾಗಿದ್ದಾರೆ.

ಅವರ ಅಭಿವೃದ್ಧಿ ಯೋಜನೆಗಳಲ್ಲಿ , 2014-15 ನೇ ಸಾಲಿನಿಂದ 2017-18 ನೇ ಸಾಲಿನ ವರೆಗೆ ಒಟ್ಟು 8075 ಮಂದಿ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ 81.66 ಕೋ.ರೂ.ಗಳ ಅನುದಾನ ಬಿಡುಗಡೆಯಾಗಿದೆ. ಪ್ರಧಾನಮಂತ್ರಿ ಜನಧನ್ ಯೋಜನೆಯಡಿ 3,88,179 ಖಾತೆಗಳನ್ನು ತೆರೆದು ಒಟ್ಟು 3,11,919 ರೂಪೇ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 90571 ಮಂದಿ ಫಲಾನುಭವಿಗಳಿಗೆ 1380.23 ಕೋ.ರೂ.ಗಳ ಸಾಲ ನೆರವು ಲಭಿಸುವಂತೆ ಮಾಡಲಾಗಿದೆ. ಸ್ಟಾರ್ಟ್‌ಅಪ್ ಇಂಡಿಯಾದಡಿ 139 ಫಲಾನುಭವಿಗಳಿಗೆ 27.63 ಕೋ.ರೂ.ಸಾಲ ಲಭಿಸುವಂತಾಗಿದೆ.

ಇದೇ ರೀತಿ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ 1,33,254 ಖಾತೆಗಳನ್ನು ತೆರೆದು 159 ಮಂದಿಗೆ 3.15 ಕೋ.ರೂ.ಗಳ ನೆರವು ಲಭಿಸಿದೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 3,69,747 ಖಾತೆಗಳನ್ನು ತೆರೆದು ಈಗಾಗಲೇ 66 ಮಂದಿಗೆ 1.28 ಕೋ.ರೂ.ನೆರವು ಲಭಿಸಿದೆ.ಅಟಲ್ ಪಿಂಚಣಿ ಯೋಜನೆಯಡಿ 15,667 ಖಾತೆಗಳನ್ನು ತೆರೆಯಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ 74,144 ಖಾತೆಗಳನ್ನು ತೆರೆಯಲಾಗಿದ್ದರೆ, ಅಟಲ್ ಪಿಂಚಣಿ ಯೋಜನೆಯಿ 871 ಖಾತೆಗಳು, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ 661 ಮಂದಿಗೆ 28.02 ಕೋ.ರೂ.ಸಹಾಯಧನ ಬಿಡುಗಡೆಯಾಗಿದೆ. ಉಜ್ವಲಾ ಯೋಜನೆಯಡಿ ದ.ಕ.ಜಿಲ್ಲೆಯಲ್ಲಿ ಈ ವರೆಗೆ 12,792 ಮಂದಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ದ.ಕ.ಜಿಲ್ಲೆಯ 232 ಗ್ರಾಮ ಪಂಚಾಯತ್‌ಗಳಿಗೆ ಆಪ್ಟಿಕ್ ಫೈಬರ್ ಸಂಪರ್ಕ ಕಲ್ಪಿಸಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಡಿ ರಾಷ್ಟ್ರೀಯ ಉಚ್ಚತಮ ಶಿಕ್ಷಾ ಅಭಿಯಾನದಡಿ ದ.ಕ.ಜಿಲ್ಲೆಯ ಏಳು ಕಾಲೇಜುಗಳಿಗೆ 14 ಕೋ.ರೂ.ಹಾಗೂ ಮಂಗಳೂರು ವಿವಿಗೆ 20 ಕೋ.ರೂ.ಗಳ ಅನುದಾನ ಬಿಡುಗಡೆಯಾಗಿದೆ. ಕೇಂದ್ರ ಸರಕಾರ ಲೀನ ಸಂಸ್ಥೆಗಳ ಸಿ.ಎಸ್.ಆರ್.ನಿಯಿಂದ ಜಿಲ್ಲೆಗೆ 25 ಕೋ.ರೂ.ಗಳಿಗೂ ಅದಿಕ ಅನುದಾನ ಲಭಿಸುವಂತೆ ಮಾಡಿದ್ದಾರೆ.

ರೈಲ್ವೆ ಇಲಾಖೆಯಿಂದ ರೈಲ್ವೆ ಮೇಲ್ಸೇತುವೆ, ಕೆಳಸೇತುವೆ, ರೈಲ್ವೆ ನಿಲ್ದಾಣ ಅಭಿವೃದ್ಧಿ ಸೇರಿದಂತೆ 1,243 ಕೋ.ರೂ., ಅನುದಾನ ಬಿಡುಗಡೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಕಾರದಡಿ 7,646 ಕೋ.ರೂ., ದ.ಕ.ಜಿ.ಪಂ.ಗೆ 346 ಕೋ.ರೂ., ಆರೋಗ್ಯ ಕ್ಷೇತ್ರಕ್ಕೆ 22 ಕೋ.ರೂ., ಶಿಕ್ಷಣ ಇಲಾಖೆಯ ಮೂಲಕ ಸರ್ವಶಿಕ್ಷಾ ಅಭಿಯಾನ,(6.28 ಕೋ.ರೂ.), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (29 ಕೋ.ರೂ.), ಅಕ್ಷರ ದಾಸೋಹ (92.43 ಕೋ.ರೂ.), ಉನ್ನತ ಶಿಕ್ಷಣ (34 ಕೋ.ರೂ.), ನವಮಂಗಳೂರು ಬಂದರು ಅಭಿವೃದ್ಧಿಗೆ 15 ಕೋ.ರೂ., ಬಂದರು ಮತ್ತು ಮೀನುಗಾರಿಕಾ ಜೆಟ್ಟಿ ಅಭಿವೃದ್ಧಿಗೆ 250 ಕೋ.ರೂ., ಗ್ರಾಮೀಣ ನೀರು ಸರಬರಾಜು ಯೋಜನೆಗೆ 85 ಕೋ.ರೂ., ನಗರ ನೀರು ಸರಬರಾಜಿಗೆ 40 ಕೋ.ರೂ., ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 64 ಕೋ.ರೂ., ಮಂಗಳೂರು ಮಹಾನಗರಪಾಲಿಕೆ (ಸ್ಮಾರ್ಟ್ ಸಿಟಿ-ಅಮೃತ್ ಯೋಜನೆ)-161.82 ಕೋ.ರೂ., ನಬಾರ್ಡ್ ಮೂಲಕ 42 ಕೋ.ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 24.75 ಕೋ.ರೂ., ಕೃಷಿ ಮತ್ತು ತೋಟಗಾರಿಕೆಗೆ 26.32 ಕೋ.ರೂ., ಪ್ರವಾಸೋದ್ಯಮ ಮತ್ತು ಬೀಚ್ ಅಭಿವೃದ್ಧಿಗೆ 33.36 ಕೋ.ರೂ.,ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿಗೆ 17.50ಕೋ.ರೂ., 14ನೇ ಹಣಕಾಸು ಆಯೋಗದಡಿ ಮುನ್ಸಿಪಾಲಿಟಿಗಳಿಗೆ 41.12 ಕೋ.ರೂ., ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗೆ 296.91 ಕೋ.ರೂ., ಇಂಧನ ಇಲಾಖೆ ಮೂಲಕ 40.80 ಕೋ.ರೂ.,ಕೇಂದ್ರ ರಸ್ತೆ ನಿಧಿಯಿಂದ 143 ಕೋ.ರೂ., ರಾಷ್ಟ್ರೀಯ ಹೆದ್ದಾರಿ ಇಲಾಖೆ-ಮಂಗಳೂರು ವಿಭಾಗಕ್ಕೆ 4367 ಕೋ.ರೂ., ಭಾರತೀಯ ಸಂಚಾರ ನಿಗಮಕ್ಕೆ 27.45ಕೋ.ರೂ. ಸೇರಿದಂತೆ ಒಟ್ಟು ಜಿಲ್ಲೆಗೆ 15,125 ಕೋ.ರೂ.ಗಳಿಗೂ ಅಕ ಮೊತ್ತ ಬಿಡುಗಡೆಯಾಗುವಂತೆ ಮಾಡುವಲ್ಲಿ ನಳಿನ್ ಅಹರ್ನಿಶಿ ದುಡಿದಿದ್ದಾರೆ.

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರದ ಮೇಲೆ ಒತ್ತಡ ತಂದು ಕಳಪೆ ಅಡಿಕೆ ಆಮದು ಮೇಲೆ ಸುಂಕ ಹೆಚ್ಚಳ ಮಾಡುವಂತೆ ಮಾಡುವಲ್ಲಿ ಅವರು ನಿರಂತರ ಪ್ರಯತ್ನಿಸಿದವರು.

ಪಂಪ್‌ವೆಲ್ ವೃತ್ತ ಮತ್ತು ಉಳ್ಳಾಲದಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಮುಗಿಸುವಂತೆ ಹೆದ್ದಾರಿ ಅಭಿವೃದ್ಧಿ ಗುತ್ತಿಗೆದಾರರಿಗೆ ಅಂತಿಮ ಗಡು ನೀಡಿರುವ ನಳಿನ್ ಕುಮಾರ್ ಇದನ್ನು ಪೂರ್ಣಗೊಳಿಸಿ ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಪ್ರಾಮಾಣಿಕ ರಾಜಕಾರಣಿಯಾಗಿ, ಜನಸಾಮಾನ್ಯರ ಜನಪ್ರತಿನಿದಿಯಾಗಿ ಕೆಲಸ ಮಾಡಬೇಕೆಂಬ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ನಳಿನ್ ಕುಮಾರ್ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಮಾದರಿಯಾಗಿಸಲು ಯತ್ನಿಸುತ್ತಿದ್ದಾರೆ.ಈಗಾಗಲೇ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬಳ್ಪ ಎಂಬ ಕುಗ್ರಾಮವನ್ನು ಆಯ್ದುಕೊಂಡು ಅದರ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ.

ಅಲ್ಲದೆ ಮೋದಿ ಸರಕಾರದ ಭಾರತ್ ಮಾಲಾ ಯೋಜನೆಯಡಿ ಮಂಗಳೂರು-ಬೆಂಗಳೂರು ಹೈಸ್ಪೀಡ್ ಎಕ್ಸ್‌ಪ್ರೆಸ್ ರಾಷ್ಟ್ರೀಯ ಹೆದ್ದಾರಿ 1,18,000 ಕೋ.ರೂ.ಯೋಜನೆ ಡಿ.ಪಿ.ಆರ್.ಹಂತದಲ್ಲಿದೆ. ಸಾಗರ ಮಾಲಾ ಯೋಜನೆಯಡಿ ಮಂಗಳೂರು ಹಳೆಬಂದರು-ಬೇಂಗ್ರೆ-ತಣ್ಣೀರು ಬಾವಿ ಮೂಲಕ ನವ ಮಂಗಳೂರು ಬಂದರು ಬಳಿ ರಾಷ್ಟ್ರೀಯ ಹೆದ್ದಾರಿ 75 ನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 1300 ಕೋ.ರೂ.ಗಳ ಪ್ರಸ್ತಾವನೆ ಮಾಡಲಾಗಿದೆ. ಕೂಳೂರು -ಬೈಕಂಪಾಡಿ 10 ಪಥ ಕಾಂಕ್ರಿಟೀಕರಣ ರಸ್ತೆ, ಪ್ಲಾಸ್ಟಿಕ್ ಪಾರ್ಕ್ (5೦೦ಕೋ.ರೂ.ಪ್ರಸ್ತಾವನೆ), ಕೋಕನೆಟ್ ಪಾಕ್ (1೦೦೦ಕೋ.ರೂ.ಪ್ರಸ್ತಾವನೆ), ವಿಶೇಷ ಕೃಷಿ ವಲಯ ಸ್ಥಾಪನೆಗಾಗಿಯೂ ಅವರು ಶ್ರಮಿಸುತ್ತಿದ್ದು , ಸಾಮಾನ್ಯ ಜನರೊಂದಿಗೆ ಬೆರೆಯುವ ಒಬ್ಬ ಯುವ ಉತ್ಸಾಹಿ ಸಂಸದನಾಗಿ ತನ್ನ ಶಕ್ತಿಮೀರಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿರುವುದನ್ನು ಸಹಿಸದ ಅವರ ಕೆಲವು ರಾಜಕೀಯ ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡುವುದರ ಮೂಲಕ ಅಪಪ್ರಚಾರ ಮಾಡುವುದು ವಿಷಾದನೀಯ. ಜನತೆ ಹಾಗೂ ಕಾರ್ಯಕರ್ತರು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸಿದ್ದು, ಅವರ ವಿರುದ್ಧ ಮಾಡುವ ಅಪಪ್ರಚಾರವನ್ನು ಜನ ನಂಬಲಾರರು ಎಂದು ದ.ಕ.ಜಿಲ್ಲಾ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top