ಮಂಗಳೂರು : ಅನೇಕ ಗೊಂದಲಗಳ ನಡುವೆ ಧರ್ಮಸ್ಥಳ ಶಾಂತಿವನದ ಪ್ರಕೃತಿ ಚಿಕಿತ್ಸೆಯ ಒತ್ತಡಕ್ಕೆ ಮಣಿದು ಫೆಬ್ರವರಿ 2018 ೮ರ ಸಿದ್ದರಾಮಯ್ಯನವರ ಮತ್ತು ಜುಲೈ 2018 ರ ಕುಮಾರಸ್ವಾಮಿಯವರ ಬಜೆಟ್ಗಳ ಸಾಂದರ್ಭಿಕ ಅನುಕೂಲಗಳ ಹೂರಣ ಹಾಗೂ ಅಪವಿತ್ರ ಮೈತ್ರಿಯ ’ಸಾಂಧರ್ಬಿಕ ಶಿಶು’ವೇ ಈ ಬಜೆಟ್. ಮಾನ್ಯ ಮುಖ್ಯಮಂತ್ರಿಗಳು ಈ ಹಿಂದೆ ತಿಳಿಸಿದಂತೆ ’ಸಾಂಧರ್ಬಿಕ ಶಿಶು’ವಿನ ಭವಿಷ್ಯವೇ ಒಂದು ವರ್ಷ. ಇಂತಹ ’ಶಿಶು’ ತೀವ್ರ ಸುಶ್ರೂಷಾ ಘಟಕದಲ್ಲಿರುವ ಈ ಸಂದರ್ಭದಲ್ಲಿ ಈ ಬಜೆಟ್ ಎಷ್ಟು ಪ್ರಸ್ತುತ ಎನ್ನುವುದು ಯಕ್ಷಪ್ರಶ್ನೆ.
ಅಧಿಕಾರ ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ವಾಣಿಜ್ಯ ಬ್ಯಾಂಕುಗಳು ಸೇರಿದಂತೆ ರೈತರ ಎಲ್ಲಾ ಸಾಲಮನ್ನಾ ಎನ್ನುವ ’ಕುಮಾರ’ನ ಘೋಷಣೆ’ ಉತ್ತರಕುಮಾರ’ನ ಪೌರುಷವಾಗಿರುವುದು ವಾಸ್ತವ. ಸರಕಾರದ ಅಯುಷ್ಯವೇ ಒಂದು ವರ್ಷವೆಂದು ಹೇಳಿದ ಮುಖ್ಯಮಂತ್ರಿಗಳು, ರೂ.34 ಸಾವಿರಕೋಟಿ ಸಾಲವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ಮನ್ನಾಗೊಳಿಸುವ ಭರವಸೆ ನೀಡಿರುವುದೇ ಹಾಸ್ಯಾಸ್ಪದ.
ಈ ಬಜೆಟ್ ಕರಾವಳಿ ಮತ್ತು ಮಲೆನಾಡನ್ನು ಸಂಪೂರ್ಣವಾಗಿ ಕಡೆಗಣಿಸಿ ರಾಜಕೀಯವಾಗಿ ತನ್ನ ಸಂಕುಚಿತ ಮನೋಭಾವವನ್ನು ಪ್ರತಿಬಿಂಬಿಸಿರುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಕೇವಲ ಹಳೆ ಮೈಸೂರಿಗೆ ಸೀಮಿತವಾಗಿರುವುದು ಈ ಬಜೆಟಿನಿಂದ ಸ್ಪಷ್ಟವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡದಿರುವುದು ಆಶ್ಚರ್ಯ ಹಾಗೂ ಇದು ಭವಿಷ್ಯದ ದೃಷ್ಟಿಯಲ್ಲಿ ಮಾರಕ.
2000 ದವರೆಗೆ ಪ್ರಾರಂಭವಾದ ಕನ್ನಡ ಮಾಧ್ಯಮಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಭವಿಷ್ಯ ಅಸ್ಪಷ್ಟವಾಗಿದೆ. ಬಹು ನಿರೀಕ್ಷಿತ ಕಾಲ್ಪನಿಕ ಸಮಸ್ಯೆ ಪರಿಹಾರ, ಶಿಕ್ಷಕರ ವೇತನ ತಾರತಮ್ಯದ ಗೊಂದಲ ನಿವಾರಣೆ, ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ, ಕನ್ನಡ ಮಾದ್ಯಮ ಶಾಲೆಗಾಳ ಸ್ಥಿತಿಗತಿಗಳ ಸುಧಾರಣೆಗೆ ತೀವ್ರ ಅಗತ್ಯ ಕ್ರಮಗಳು, ವರ್ಗಾವಣೆ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿಯೇ ಉಳಿದಿರುವುದು ದುರಂತ.
ಯಾವುದೇ ದೂರದೃಷ್ಟಿಯಿಲ್ಲದ, ಯಾರನ್ನೂ ಖುಷಿಪಡಿಸದ, ಅಪವಿತ್ರ ಮೈತ್ರಿಯ ಸಮ್ಮಿಶ್ರ ಸರಕಾರದ ಹೊಂದಾಣಿಕೆಯ ಬಜೆಟನ್ನು ರಾಜ್ಯದ ಜನತೆ ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.