×
Home About Us Advertise With s Contact Us

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಲ್ಲಡ್ಕ :  ದಿನಾಂಕ 5-6-2018 ರಂದು ಶ್ರೀರಾಮ ಪ್ರೌಢಶಾಲಾ ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್‍ಯಕ್ರಮ ನೆರವೇರಿತು. ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಮಾತನಾಡಿ ಪರಿಸರದ ಸೊಬಗನ್ನು ಕೇವಲ ಆಸ್ವಾದಿಸಿ ಸಂತೋಷ ಪಡುವುದರ ಜೊತೆ ಪ್ರತಿಯೊಬ್ಬನೂ ಪರಿಸರ ಉಳಿಸಿ ಬೆಳೆಸುವ ಕಾರ್‍ಯವನ್ನು ನಡೆಸಬೇಕು. ಸ್ವಚ್ಛ ಪರಿಸರವನ್ನು ಕಾಪಾಡಿ ಉತ್ತಮ ಆರೋಗ್ಯ ಪಡೆಯಬೇಕು ಎಂದು ತಿಳಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ| ಪ್ರಭಾಕರ ಭಟ್‌ ಇವರು ವಿದ್ಯಾಕೇಂದ್ರದ ಕೇಂದ್ರ ಕಚೇರಿ ರಾಜೇಂದ್ರದ ಸೌಧದ ಪಕ್ಕದಲ್ಲಿ ಗಿಡ ನೆಡುವ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ವಿಶ್ವನಾಥ ಪ್ರಭು, ಅಧ್ಯಕ್ಷರು ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ, ಶ್ರೀಮತಿ ವಸಂತಿ, ಮುಖ್ಯ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್‍ಯಕ್ರಮದಲ್ಲಿ ಶ್ರೀ ರಕ್ಷಾ,  ದುರ್ಗಾವತಿ ಸ್ವಾಗತಿಸಿ, ಶಿಪಾಲಿ ಭರತ ವಂದಿಸಿ, ಸುಶ್ಮಿತಾ  ಭರತ ನಿರೂಪಿಸಿದಳು.

 

Recent News

Back To Top
error: Content is protected !!