ಮಂಗಳೂರು : ಇಂಡೋನೇಷಿಯಾದಲ್ಲಿ ಅಂತರ್ರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ಕರ್ನಾಟಕದಿಂದ ಏಕೈಕ ಯುವನಾಯಕ, ಸಾಮಾಜಿಕ ಕಾರ್ಯಕರ್ತರಾಗಿರುವ ರಘುವೀರ್ ಸೂಟರ್ಪೇಟೆಯವರು ಆಯ್ಕೆಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇದು ಕರ್ನಾಟಕ ಮಾತ್ರವಲ್ಲದೆ ಮಂಗಳೂರಿನ ಜನತೆಯೂ ಹೆಮ್ಮೆಪಡುವಂತಹ ಸಂತಸದ ವಿಷಯವಾಗಿದೆ.
ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ನೆಹರು ಯುವ ಕೇಂದ್ರವು ಭಾರತದಿಂದ ಯುವಕರನ್ನು ಆಯ್ಕೆಮಾಡಿದ್ದು ಕರ್ನಾಟಕದ ರಘುವೀರ್ ಸೂಟರ್ಪೇಟೆಯವರು ಆಯ್ಕೆಯಾಗಿದ್ದರು.
ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಆಶ್ರಯದಲ್ಲಿ ಆಯೋಜಿಸಲ್ಪಡುವ ಅಂತರ್ರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮವು ಇಂಡೋನೇಷಿಯಾದ ಜಕಾರ್ತದಲ್ಲಿ 17-11-2017 ರಿಂದ 18-12-2017 ರ ಒಂದು ತಿಂಗಳವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಇಂಡೋನೇಷಿಯಾ ಯುವ ಮತ್ತು ಸ್ವಯಂ ಸೇವಕತೆಯ ಸಮಾನ ಮತ್ತು ವಿಭಿನ್ನ ಭೂದೃಶ್ಯ ಇಂಡೋನೇಷಿಯಾದಲ್ಲಿನ ಸ್ವಯಂ ಸೇವಕರ ಸಾಂಪ್ರದಾಯಿಕ ಸ್ವರೂಪ ಮತ್ತು ಸಾಂಸ್ಕೃತಿಕ, ಇತ್ತೀಚಿನ ಯುವ ನೇತೃತ್ವದ ಸ್ವಯಂ ಸೇವಕತೆಯ ವಿವಿಧ ನಾವೀನ್ಯತೆಗಳು, ಎರಡೂ ದೇಶಗಳಲ್ಲಿನ ಸ್ವಯಂ ಸೇವಕತೆಯ ಉತ್ತಮ ಆಚಾರಗಳು ಮತ್ತು ಮೂಲಭೂತ ಸೌಕರ್ಯಗಳ ಸುಧಾರಣೆಗಳ ಶಿಫಾರಸ್ಸುಗಳ ಬಗ್ಗೆ ಚರ್ಚಿಸಲು ಹಾಗೂ ಯುವ ಸಂಘಟನೆಗಳನ್ನು ಬಲಪಡಿಸಲು ಭಾರತ ದೇಶದ ಕಾರ್ಯಕ್ರಮಗಳ ಜೊತೆ ಸಮ್ಮಿಳಿತಗೊಳಿಸಲು ಭಾರತದ ಪ್ರತಿನಿಧಿಯಾಗಿ ಯುವನಾಯಕ, ಸಾಮಾಜಿಕ ಕಾರ್ಯಕರ್ತರಾಗಿರುವ ರಘುವೀರ್ ಸೂಟರ್ಪೇಟೆ ಇವರು ಭಾಗವಹಿಸಿರುತ್ತಾರೆ.
ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ನೆಹರೂ ಯುವ ಕೇಂದ್ರವು ಭಾರತದಿಂದ 5 ಮಂದಿ ಯುವಕರನ್ನು ಆಯ್ಕೆ ಮಾಡಿದ್ದು. ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ – ಇಂಡೋನೇಷಿಯಾ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಭಾರತ ಮತ್ತು ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಜಂಟಿಯಾಗಿ ಯುವ ಸಬಲೀಕರಣ ಮತ್ತು ಸ್ವಯಂ ಸೇವಕತ್ವದ ಬಗ್ಗೆ ವಿಚಾರ ವಿನಿಮಯದ ಪ್ರೋತ್ಸಾಹದ ಬಗ್ಗೆ ಈ ಕಾರ್ಯಕ್ರಮವು ಒಂದು ತಿಂಗಳ ಕಾಲ ನಡೆಯಿತು.
ಉತ್ತಮ ಸಂಘಟಕ, ವಾಗ್ಮಿ, ಸಾಮಾಜಿಕ ಕಾರ್ಯಕರ್ತರೂ, ತುಳಿತಕ್ಕೊಳಗಾದ ಜನರ ಧ್ವನಿಯಾಗಿ ಸೇವೆ ನಿರ್ವಹಿಸುತ್ತಾ ಯುವ ನಾಯಕರಾಗಿ ಗುರುತಿಸಿಕೊಂಡಿರುವ ರಘುವೀರ್ ಸೂಟರ್ಪೇಟೆಯವರು ಕಳೆದ 9 ವರ್ಷಗಳಿಂದ ಯುವ ಸಬಲೀಕರಣದ ಕುರಿತು ಅನೇಕ ಕಾರ್ಯಕ್ರಮಗಳನ್ನು ಯಶ್ವಸಿಯಾಗಿ ಸಂಘಟಿಸಿರುವುದನ್ನು ಗಮನಿಸಿ ಭಾರತ ಸರಕಾರವು ಅರ್ಹವಾಗಿ ಇವರನ್ನು ಆಯ್ಕೆಗೊಳಿಸಿರುವುದು ಯುವ ಸಮುದಾಯಕ್ಕೆ, ನಮ್ಮ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಸಂದಿರುವ ಗೌರವವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಉತ್ತಮ ಎನ್.ಸಿ.ಸಿ. ಕೆಡೆಟ್ ಪ್ರಶಸ್ತಿ, ಮಂಗಳೂರಿನ ಎನ್.ವೈ.ಸಿ. (ನ್ಯಾಷನಲ್ ಯೂತ್ ಕಾರ್ಡ್) ಆಗಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರದೊಂದಿಗೆ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಅವರ ಸಂಪೂರ್ಣ ಶ್ರಮದಾಯಕ ಕೆಲಸವು ಈ ಅಂತರಾಷ್ಟ್ರೀಯ ಕಾರ್ಯಕ್ರಮ ಅರ್ಹತೆಯನ್ನು ಪಡೆಯಲು ಅವರಿಗೆ ಸಹಕಾರಿಯಾಗಿರುವುದು.
ರಘುವೀರ್ ಸೂಟರ್ಪೇಟೆಯವರು ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಉತ್ತಮ ಎನ್.ಸಿ.ಸಿ ಕ್ಯಾಡೆಟ್ ಪ್ರಶಸ್ತಿಯನ್ನು ಪಡೆದಿರುವರು. ಮಂಗಳೂರಿನ ಎನ್.ವೈ.ಸಿ (ನ್ಯಾಷನಲ್ ಯೂತ್ ಕಾರ್ಪ್) ಆಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರದ. ನೆಹರೂ ಯುವ ಕೇಂದ್ರದೊಂದಿಗೆ ಸೇವೆಯನ್ನು ನಿರ್ವಹಿಸಿರುವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.