ಹೌದು ಇಂತಹದ್ದೊಂದು ಪ್ರಶ್ನೆ ಇತ್ತಿಚಿನ ದಿನಗಳಲ್ಲಿ ಮೂಡುವುದು ಸಹಜವೇ ಆಗಿದೆ. ಪ್ರತೀ ಬಾರಿಯೂ ನಮ್ಮ ಹಬ್ಬಗಳು ಆಚರಣೆಗಳು ಬಂದಾಗಲೇ ಈ ಬುಜಿಗಳಿಗೆ, ಎಡಪಂಥೀಯರಿಗೆ, ಪ್ರಾಣಿ ದಯಾ ಸಂಘ, ವಿಚಾರವಾದಿಗಳಿಗೆ ತೊಂದರೆ ಆಗುವುದು. ಆಗ ಮಾತ್ರ ಅವರಿಗೆ ಪರಿಸರದ ಮತ್ತು ಜನರ ಕಾಳಜಿ ಮೂಡುವುದು. ಉಳಿದ ಸಮಯದಲ್ಲಿ ಇವರು ಕಣ್ಣಿಗೇ ಕಾಣುವುದಿಲ್ಲ. ಅಂದ ಹಾಗೆ ಈ ಬಾರಿ ದೀಪಾವಳಿ ಹತ್ತಿರ ಬರುತ್ತಿರುವ ಹಾಗೆ ಇವರಿಗೆ ಪರಿಸರದ ಬಗ್ಗೆ ಅಪಾರ ಕಾಳಜಿ ಮೂಡಿದೆ ಎಂಬಂತೆ ನಾಟಕವಾಡುತ್ತಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಸಡಗರ ಸಂಭ್ರಮಗಳ ನಡುವೆ ದೀಪಾವಳಿಯ ಸಮಯದಲ್ಲಿ ಸಿಡಿಸಲಾಗುವ ಸಿಡಿಮದ್ದಿನ ಕುರಿತು ಚರ್ಚೆ ಆರಂಭವಾಗಿದೆ. ಹಿಂದುಗಳ ಆಚರಣೆಗಳನ್ನು ಸೈದಾಂತಿಕವಾಗಿ ವಿರೋಧಿಸುತ್ತ ಅದೊಂದು ಮೂಢನಂಬಿಕೆ ಎಂದು ಜನರಲ್ಲಿ ಅಪನಂಬಿಕೆ ಮೂಡಿಸಿ ನಮ್ಮ ಆಚಾರ ಪದ್ದತಿ, ಸಂಸ್ಕೃತಿಗಳನ್ನು ವಿರೋಧಿಸುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವ ಇವರು, ಎಂದಾದರೂ ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸ ಮಾಡಿದ್ದಾಗಲೀ, ಜನರಿಗೆ ಸಹಾಯ ಮಾಡಿದ್ದಾಗಲೀ ಅತ್ಯಂತ ಕಡಿಮೆ.
ಇವರ ಮಾತಿನ ಮೂಲಕವೇ ನೋಡುವುದಾದರೆ ವರ್ಷಕ್ಕೆ ಮೂರು ದಿನ ಪಟಾಕಿ ಸಿಡಿಸಿದರೆ ಪರಿಸರದಲ್ಲಿ ಮಾಲಿನ್ಯವುಂಟಾಗಿ ಅದರಿಂದ ಅನೇಕರಿಗೆ ತೊಂದರೆ ಆಗುತ್ತದೆ ಎನ್ನುವ ಇವರು ವಾಹನಗಳಿಂದ ಬರುವ ಹೊಗೆಯಿಂದ ಉಂಟಾಗುವ ತೊಂದರೆಯ ಬಗ್ಗೆ ಏಕೆ ಮೌನವಹಿಸಿದ್ದಾರೆ, ವರ್ಷವಿಡೀ ಕಾರ್ಖಾನೆಗಳಿಂದ ಬರುವ ಹೊಗೆಯಬಗ್ಗೆ ಏಕೆ ಮಾತಾಡುತ್ತಿಲ್ಲ. ವಾಯುಮಾಲಿನ್ಯ ನಿಯಂತ್ರಣ ಮಂಡಲಿ ಇತ್ತಿಚೆಗೆ ನೀಡಿರುವ ಹೇಳಿಕೆಯ ಪ್ರಕಾರ ಎರಡು ದಿನ ಬೆಂಗಳೂರಿನಲ್ಲಿ ನಿರಂತರ ಪ್ರಯಾಣಿಸಿದರೆ ಕ್ಯಾನ್ಸರ್, ಆಸ್ತಮಾದಂತಹ ರೋಗಗಳು ಬರುವುದು ನಿಶ್ಚಿತ. ಇದು ಕೇವಲ ಬೆಂಗಳೂರು ಒಂದರದ್ದೇ ವರದಿ. ಇನ್ನು ದೇಶವಿಡೀ ತೆಗೆದುಕೊಂಡು ನೋಡುವುದಾದರೆ ಈಗಾಗಲೇ ಓಜೋನ್ ಪದರವು ಕರಗುತ್ತಿದ್ದು ವಾಯು ಮಾಲಿನ್ಯದ ಏರಿಕೆ ಶೇಕಡ 55% ರಷ್ಟು ಹೆಚ್ಚಾಗಿದೆ. ಅದೂ ವರ್ಷದ 365 ದಿನ ಆಡುವ ಗಾಳಿಗೆ ಇಷ್ಟು ಸಮಸ್ಯೆ ಉಂಟಾಗುತ್ತಿರುವಾಗ ಇವರು ಏಕೆ ಸುಮ್ಮನಿರುವರು. ಆಗ ಎಲ್ಲಿ ಹೋಗಿತ್ತು ಇವರ ಪರಿಸರದ ಬಗ್ಗೆ ಕಾಳಜಿ.
ಇದನ್ನು ನೋಡಿದಾಗ ಅವರು ಮಾಡುತ್ತಿರುವುದು ಶುದ್ಧ ನಾಟಕ, ಹಿಂದುಗಳ ಬಗ್ಗೆ ಇರುವ ಅಸಹಿಷ್ಣುತೆ ಎನ್ನಬಹುದಲ್ಲವೇ; ಇನ್ನು ಪಟಾಕಿಗಳ ಬಗ್ಗೆ ಹೇಳೋದಾದರೆ ಪಟಾಕಿ ಸಿಡಿಸುವುದು ಕೇವಲ ಹಿಂದುಗಳಲ್ಲ. ಕೇವಲ ದೀಪಾವಳಿಯ ಸಮಯದಲ್ಲಲ್ಲ. ಹೊಸವರ್ಷದ ಆಚರಣೆಯೇ ಆಗಿರಬಹುದು, ಮಧ್ಯರಾತ್ರಿ ಪಟಾಕಿ ಹೊಡೆದು ಕುಡಿದು ಕುಣಿದು ಕುಪ್ಪಳಿಸಿದರೂ ಯಾರೂ ಏನೂ ಹೇಳುವುದಿಲ್ಲ. ವಿರೋಧಿಸುವುದಿಲ್ಲ. ರಾಜಕೀಯ ವ್ಯಕ್ತಿಗಳ ಹುಟ್ಟಿದ ದಿನ, ಅವರು ಚುನಾವಣೆಯಲ್ಲಿ ಗೆದ್ದಾಗ, ಹಲವಾರು ಸಮಾವೇಶಗಳಲ್ಲಿ ಪಟಾಕಿಯನ್ನು ಹೊಡೆದಾಗ ಯಾರೂ ವಿರೋಧಿಸುವುದಿಲ್ಲ. ಹಾಗೆಯೇ, ಈ ಕಪಟ ನಾಟಕಕಾರರು ಹಬ್ಬಗಳ ಆಚರಣೆಯಲ್ಲಿ ಅಮಾಯಕ ಪ್ರಾಣಿಗಳ ಮಾರಣ ಹೋಮ ಮಾಡುವುದನ್ನು ಯಾರೂ ವಿರೋಧಿಸುವುದಿಲ್ಲ. ಒಂದು ಅವರಿಗೆ ಅನ್ಯರನ್ನು ವಿರೋಧಿಸಲು ಭಯವಿರಬೇಕು ಅಥವಾ ಸಿಗುವ ಸಂಭಾವನೆ ಗಂಜಿ ಮುಂದೆ ನಿಲ್ಲುವುದೋ ಎಂಬ ಕಾರಣವಿರಬೇಕು.
ವಿದೇಶದಿಂದ ಬರುವ ಹಣ, ನಮ್ಮ ದೇಶದ ಸಂಪ್ರದಾಯಗಳನ್ನು ಬೈದರೆ ಸಿಗುವ ಬಿರುದು, ಸನ್ಮಾನ, ಬಹುಮಾನಗಳು ಇವರಿಗೆ ದೇಶದ್ರೋಹಿಗಳನ್ನಾಗಿ ಮಾಡಿದೆ. ಇದಕ್ಕೆ ಕುಮ್ಮಕ್ಕು ಕೊಡುವ ಹಾಗೇ OMG, PK ನಂತಹ ಚಲನಚಿತ್ರಗಳು ಬೇರೇ, ಇವುಗಳನ್ನು ಲೆಕ್ಕಿಸದೇ ಹಿಂದುಗಳು ಒಂದುಗೂಡಿ ಈ ವಿಚಾರವಾದಿಗಳನ್ನು, ಬುಜಿಗಳನ್ನು, ದೇಶದ್ರೋಹಿಗಳನ್ನು ವಿರೋಧಿಸಬೇಕಾಗಿದೆ. ನಮ್ಮ ಹಬ್ಬ ಆಚರಣೆಗಳ ಬಗ್ಗೆ ಮಾತನಾಡಿದಾಗ ಅದನ್ನು ಪ್ರತೀ ಹಿಂದುವೂ ವಿರೋಧಿಸಬೇಕಾಗಿದೆ. ಶೇ. 76 ರಷ್ಟು ಇರುವ ನಾವು ಹಲವಾರು ವರ್ಷದಿಂದ ಅನುಭವಿಸಿಕೊಂಡು ಬಂದಿರುವ ತುಷ್ಟೀಕರಣ ಹಾಗು ಅಲಿಪ್ತನೀತಿಯಿಂದ ಇತ್ತ ಸರಿದು ನಮ್ಮ ಧರ್ಮದ ಹಿತಕ್ಕಾಗಿ ಎದ್ದು ನಿಂತು ಧ್ವನಿಯೆತ್ತಬೇಕಾಗಿರುವ ಸಮಯ ಕೂಡಿ ಬಂದಿದೆ.
ಬನ್ನಿ ಒಂದುಗೂಡೋಣ ಹಿಂದು ಧರ್ಮವನ್ನು ನಮ್ಮ ಸಂಸ್ಕೃತಿಯನ್ನು, ನಮ್ಮ ಆಚರಣೆಯನ್ನು ಯಾರೂ ಹಾಳುಮಾಡದಂತೆ ನಾಶಮಾಡದಂತೆ ನೋಡಿಕೊಂಡು ಮತ್ತೆ ತಾಯಿ ಭಾರತಿ ಜಗದ್ಗುರುವಿನ ಸ್ಥಾನವನ್ನು ಅಲಂಕರಿಸುವ ಹಾಗೆ ಮಾಡೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.