ನವದೆಹಲಿ : ಡಿಜಿಟಲ್ ಪಾವತಿಯನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭೀಮ್ ಆ್ಯಪ್ನಲ್ಲಿನ ನಗದು ಪುರಸ್ಕಾರ ಯೋಜನೆಯ ಲಾಭ ಪಡೆಯುವಂತೆ ಯುವಕರಿಗೆ ಕರೆ ನೀಡಿದ್ದಾರೆ.
ಭಾರತ್ ಇಂಟರ್ಫೇಸ್ ಫಾರ್ ಮನಿ (ಭೀಮ್) ಆಪ್ನ್ನು ನಗದು ವರ್ಗಾವಣೆಗಾಗಿ ಬಳಸುವಂತೆ ಇತರರನ್ನು ಯಾರು ಉತ್ತೇಜಿಸುತ್ತಾರೋ ಅವರಿಗಾಗಿ ಕ್ಯಾಶ್ ರಿವಾರ್ಡ್ ನೀಡುವ ಯೋಜನೆಯನ್ನು ಆರಂಭಿಸಲಾಗಿದೆ.
ರಿವಾರ್ಡ್ ಇದು ಆಗಸ್ಟ್ 14 ರ ವರೆಗೆ ಚಾಲ್ತಿಯಲ್ಲಿರಲಿದೆ. ಇದರಿಂದ ಯುವಕರು ಪ್ರಯೋಜನವನ್ನು ಪಡೆಯಬಹುದು ಎಂದರು.
ಈ ಯೋಜನೆಯಡಿ ಭೀಮ್ ಆ್ಯಪ್ನ್ನು ಇತರರಿಗೆ ಪರಿಚಯಿಸುವ ಮೂಲಕ ಪ್ರತಿ ಬಾರಿ ತಲಾ 10 ರೂ. ಗಳಿಸಬಹುದು ಎಂದರು.
ಯುವ ಪೀಳಿಗೆಯ ಬಹುತೇಕರು ಉಚಿತ ನಗದು ವರ್ಗಾವಣೆ ಪಡೆಯುತ್ತಿದ್ದಾರೆ. ಯುವ ಪೀಳಿಗೆಗೆ ನಗದಿನ ಅವಶ್ಯಕತೆ ಇಲ್ಲ. ಯುವ ಪೀಳಿಗೆ ಡಿಜಿಟಲ್ ಪೇಮೆಂಟ್ನಲ್ಲಿ ನಂಬಿಕೆ ಇಟ್ಟಿದೆ ಎಂದು ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.