ಗುಜರಾತಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಗೋವರ್ಧನ್ರಾಮ್ ಮಾಧವರಾಮ್ ತ್ರಿಪಾಠಿ ಅವರ ಗೌರವಾರ್ಥ 2016ರ ಎಪ್ರಿಲ್ 27ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು.
19ನೇ ಶತಮಾನ ಅಂತ್ಯದ ಮತ್ತು 20ನೇ ಶತಮಾನ ಆರಂಭದ ಪ್ರಸಿದ್ಧ ಗುಜರಾತಿ ಲೇಖಕ ಇವರಾಗಿದ್ದರು. 1855ರ ಅಕ್ಟೋಬರ್ 20ರಂದು ಜನಿಸಿದ ಇವರು, ತಮ್ಮ ನಾಲ್ಕು ಸಂಪುಟಗಳ ಕಾದಂಬರಿ ’ಸರಸ್ವತೀಚಂದ್ರ’ದಿಂದ ಖ್ಯಾತರಾದರು.
ಮುಂಬಯಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ನಿವೃತ್ತಿಯ ಬಳಿಕ ಹುಟ್ಟೂರು ಗುಜರಾತಿನಲ್ಲಿ ನೆಲೆಸಿದರು. ಗುಜರಾತಿಯಲ್ಲಿ ಹಲವಾರು ಕಾದಂಬರಿಗಳನ್ನು ಬರೆದ ಇವರು ಇಂಗ್ಲೀಷ್ ಪ್ರಾವೀಣ್ಯತೆಯನ್ನೂ ಹೊಂದಿದ್ದರು. ‘ಸ್ಕ್ರ್ಯಾಪ್ ಬುಕ್’ ಎಂಬ ಇಂಗ್ಲೀಷ್ ಕೃತಿಯನ್ನೂ ರಚಿಸಿದ್ದಾರೆ.
1885-1915ರ ಕಾಲವನ್ನು ಗುಜರಾತ್ ಸಾಹಿತ್ಯದಲ್ಲಿ ‘ಗೋವರ್ಧನ ಯುಗ’ ಎಂದೇ ಕರೆಯಲಾಗುತ್ತದೆ.
Courtesy : Stamp Today Group (sri jaganath mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.