ರಾಯಚೂರು: ಬೇಸಿಗೆಯಲ್ಲಿಯೂ ರೋಗಿಗಳಿಗೆ ವಿದ್ಯುತ್ ತೊಂದರೆಯಿಂದ ತಪ್ಪಿಸಲು ಆರೋಗ್ಯ ಕೇಂದ್ರವೊಂದು ದಿನದ 24 ಗಂಟೆಗಳ ಕಾಲ ವಿದ್ಯುತ್ ಸೌಲಭ್ಯ ಒದಗಿಸಿದ್ದು ರಾಜ್ಯಕ್ಕೆ ಮಾದರಿಯಾಗಿದೆ.
ಬೇಸಿಗೆ ಎಂದರೆ ನೆನಪಿಗೆ ಬರೋದು ಹೈ.ಕ ಭಾಗದ ಜಿಗಳು. ಅದರಲ್ಲೂ ರಾಯಚೂರು ನಲ್ಲೂ ವಿದ್ಯುತ್ ತಯಾರಿಸುವ ಎರಡು ಪ್ರಮುಖ ಕೇಂದ್ರಗಳಿದ್ದರೂ ವಿದ್ಯುತ್ಗೆ ಬರ. ಬೇಸಿಗೆಯಲ್ಲಿ ಇಲ್ಲಿ ಅಡ್ಡಾಡುವುದೇ ಕಷ್ಟಕರ.
ಬಿಸಿಲಿನ ಬೇಗೆಗೆ ಚರ್ಮ ರೋಗದಿಂದ ಬಳಲುವ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆಯಿಂದ ಪರಿತಪಿಸುವ ಸ್ಥಿತಿ ಬೇರೆ ಇತ್ತು. ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಪ್ರಾಥಮಿಕ ಆರೋಗ್ಯ ಕೇಂದ್ರವೊಂದು ಕೇಂದ್ರಕ್ಕೆ ಸಂಪೂರ್ಣವಾಗಿ ಸೌರ ವಿದ್ಯುತ್ ಅಳವಡಿಸಿದೆ.
ರಾಯಚೂರು ತಾಲ್ಲೂಕಿನ ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಲಾರ್ ಅಳವಡಿಸುವ ಮೂಲಕ ರೋಗಿಗಳನ್ನು ವಿದ್ಯುತ್ ತೊಂದರೆಯಿಂದ ದೂರ ಮಾಡಲಾಗಿದೆ. ಆಸ್ಪತ್ರೆಯಲ್ಲಿ ದಿನದ 24 ಘಂಟೆ ಸೇವೆ ಸಿಗುತ್ತದೆ. ಬೇಸಿಗೆ ಕಾಲವಾದ್ದರಿಂದ ಜಿಲ್ಲೆಯಲ್ಲಿ ವಿದ್ಯುತ್ ಕೊರತೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸೋಲಾರ್ ಅಳವಡಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ಆಸ್ಪತ್ರೆಯಲ್ಲಿನ ಗರ್ಭಿಣಿಯರಿಗೆ ಸ್ಕ್ಯಾನಿಂಗ್, ಶಿಶುಗಳಿಗೆ ಫೋಟೋಥೆರಪಿ, ಇತರ ವೈದ್ಯಕೀಯ ಪರೀಕ್ಷೆ ಮತ್ತು ಆರೋಗ್ಯ ಸಂಬಂಧಿಸಿದ ಪರೀಕ್ಷೆಗಳಿಗೆ ವಿದ್ಯುತ್ ಕಡಿತದಿಂದ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಇದೀಗ ಸೋಲಾರ್ ವಿದ್ಯುತ್ನಿಂದ ಇದೆಲ್ಲ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಗ್ರಾಮೀಣ ಭಾಗದ ರೋಗಿಗಳ ಚಿಕಿತ್ಸೆಗೆ ಇದು ವರದಾನವಾಗಿದೆ. ಸಕಾಲಕ್ಕೆ ವೈದ್ಯಕೀಯ ಸೇವೆ ನೀಡಲು ಸೌರ ವಿದ್ಯುತ್ತನ್ನು ಮುಂಬರುವ ದಿನಗಳಲ್ಲಿ ಎ ಪ್ರಾಥಮಿಕ ಕೇಂದ್ರಗಳಿಗೆ ವಿಸ್ತರಿಸುವ ಗುರಿಯೂ ಇದೆ ಎಂದು ಜಿ ಆರೋಗ್ಯಾಧಿಕಾರಿ ಡಾ.ನಾರಾಯಣಪ್ಪ ಹೇಳಿದ್ದಾರೆ.
– ಪ್ರಲ್ಹಾದ ಕುಲಕರ್ಣಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.