ಚೆರಾ ವಂಶಸ್ಥ ಶ್ರೀ ಸ್ವಾತಿ ತಿರುನಲ್ ರಾಮ ವರ್ಮ ತ್ರಿವಂಕೂರು ರಾಜಮನೆತನದ ರಾಜ. 1829ರಿಂದ 1846ರವರೆಗೆ ಈತ ರಾಜ್ಯಾಡಳಿತ ನಡೆಸಿದ್ದ.
ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಈತ ಸ್ವತಃ ಒರ್ವ ಸಂಗೀತಗಾರ. 400ಕ್ಕೂ ಅಧಿಕ ಸಂಗೀತಗಳನ್ನು ರಚಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ತನ್ನ ಕಾಲದ ಹಲವಾರು ಸಂಗೀತಗಾರರಿಗೆ ಈತ ತನ್ನ ಆಸ್ಥಾನದಲ್ಲಿ ಆಶ್ರಯ ಕಲ್ಪಿಸಿದ್ದ.
ಕರ್ನಾಟಿಕ್ ಸಂಗೀತದಲ್ಲಿ ಈತನಿಗೆ ಅಪಾರ ಒಲವಿತ್ತಾದರೂ, ಇತರ ಸಂಗೀತಗಾರರನ್ನು ಹಿಂದೂಸ್ಥಾನಿ ಸಂಗೀತ ಕಲಿಯುವಂತೆ ಪ್ರೇರೇಪಿಸುತ್ತಿದ್ದ.
ಪದ್ಮನಾಭ ಪಾಹಿ, ದೇವ ದೇವ, ಸರ್ಸಿಜನಾಭ, ಶ್ರೀ ರಾಮನ ವಿಬೋ ಈತನ ಪ್ರಮುಖ ರಚನೆಗಳು.
ಇಷ್ಟೇ ಅಲ್ಲದೇ ಈತ ಸಂಸ್ಕೃತ, ಹಿಂದಿ, ಮರಾಠಿ, ಮಲಯಾಳಂ, ತೆಲುಗು, ಕನ್ನಡ, ಬಂಗಾಳಿ, ತಮಿಳು, ಒರಿಯ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದ.
1813ರ ಎಪ್ರಿಲ್ 16ರಂದು ರಾಮ ವರ್ಮ ಜನಿಸಿದ್ದು, ಈತನ 175ನೇ ಜನ್ಮ ವರ್ಷಾಚರಣೆಯ ಸ್ಮರಣಾರ್ಥ ಅಂಚೆ ಇಲಾಖೆಯು 2-5-1988ರಲ್ಲಿ ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಿತ್ತು.
courtesy: Stamp Today Group (Sri Jaganath Mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.