ಅರ್ಕುಳ ಮಂಗಳೂರು : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದಕ್ಕೆ ಶತಮಾನೋತ್ಸವದ ಸಂಭ್ರಮ, ನೂರು ವರ್ಷ ಪೂರೈಸುವ ಈ ಸಂದರ್ಭದಲ್ಲಿ ಸವಿ ನೆನಪಿಗೆ ವಿಶೇಷವಾದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಮಾನಾಥ್ ರೈ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಮಾಧ್ಯಮದಲ್ಲಿ ಕಲಿಸುತ್ತಿರುವ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಪ್ರೌಢಶಾಲೆ ತರಗತಿಗಳನ್ನ ತೆರೆಯಲು ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಸ್ಥಳೀಯ ಶಾಸಕ ಬಿ. ಎ. ಮೊಯಿದ್ದೀನ್ ಬಾವರವರು ಕನ್ನಡ ಮಾಧ್ಯಮ ಶಾಲೆಗಳಿಗೆ ಇನ್ನು ಹೆಚ್ಚಿನ ಸೌಕರ್ಯಗಳನ್ನು ಒದಗಿಸಿ ಉತ್ತಮ ಶಿಕ್ಷಣ ನೀಡುವಲ್ಲಿ ಸರಕಾರದೊಂದಿಗೆ ಮನವಿ ಮಾಡುವ ಭರವಸೆ ನೀಡಿದರು.
ವೇದಿಕೆಯಲ್ಲಿ ಶಾಲಾ ಆಡಳಿತಮಂಡಳಿ ಸದಸ್ಯರಾದ ಮಂಜುನಾಥ್ ಶೆಣೈ, ಕೃಷ್ಣ ಕುಮಾರ ಪೂಂಜಾ, ತಾಲೂಕ ಪಂಚಾಯತ್ ಸದಸ್ಯ ಅಬ್ದುಲ್ ಸಮದ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಕುಮಾರ್, ಜಯಶ್ರೀ ಭಂಡಾರಿ, ಶತಮಾನೋತ್ಸವ ಸಮಿತಿ ಪದಾಧಿಕಾರಿಗಳಾದ ಮೊಹಮ್ಮದ್ ಯೂಸುಫ್, ರಾಮದಾಸ್ ಕೋಟ್ಯಾನ್ ಮಜಿ, ಸುಂದರ ಶೆಟ್ಟಿ ಕಲ್ಲ ತಡಮೆ, ವಿಶ್ವನಾಥ್ ಶೆಟ್ಟಿ ಕೊಟ್ಟಿಂಜ, ದಾಮೋದರ ಶೆಣೈ, ಚಂದ್ರ ಶೇಖರ ಗಾಂಭೀರ, ರಾಧಾಕೃಷ್ಣ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕರಾದ ಗೋವಿಂದ ಶೆಣೈ ಸ್ವಾಗತಿಸಿದರು, ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗು ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಎ. ಕೆ. ಜಯರಾಮ ಶೇಖ ಪ್ರಾಸ್ತಾವಿಕ ಭಾಷಣ ಮಾಡಿದರು, ದಿನಕರ ಕರ್ಕೇರ ಮಂಟಮೆ ವಂದಿಸಿದರು, ಮುಖ್ಯೋಪಾಧ್ಯಾಯರಾದ ದೇವದಾಸ್ ಕೆ. ಆರ್. ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.