ಆ್ಯಪ್ ಆಧಾರಿತ ಯೋಜನೆಗೆ ಸರ್ಕಾರೀ ಸಹಭಾಗಿತ್ವ
ಬೆಂಗಳೂರು : ತುರ್ತುರಕ್ತ ರೋಗಿಗಳಿಗಿನ್ನು ರಿಲೀಫ್. ಬೆರಳ ತುದಿಯಲ್ಲೇ ಇದೀಗ ರಕ್ತ ಪಡೆಯಬಹುದು. ನಗರದ ಐರಿಲೀಫ್ ಸಂಸ್ಥೆಯೊಂದು ಆ್ಯಪ್ ಆಧಾರಿತ ತುರ್ತು ರಕ್ತ ನೀಡುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಈ ಯೋಜನೆಗೆ ಸರ್ಕಾರೀ ಸಹಭಾಗಿತ್ವ ಸಿಕ್ಕಿದೆ. ಆರೋಗ್ಯ ಪೂರ್ಣರಕ್ತವನ್ನು ರೋಗಿಗಳು ಆ್ಯಪ್ ಮೂಲಕ ನೀವಿರುವಲ್ಲೇ ನಿರಾಳವಾಗಿ ಪಡೆದುಕೊಳ್ಳಬಹುದಾಗಿದೆ. ತುರ್ತು ಸೇವೆಗಳು ಸೂಕ್ತ ಸಮಯದಲ್ಲಿ ಅದೆಷ್ಟೋ ಜನರಿಗೆ ಸಿಗುವುದಿಲ್ಲ. ಆದರೆ ಐರಿಲೀಫ್ ಸಂಸ್ಥೆ ರೋಗಿಯ ಅಗತ್ಯದ ಬ್ಲಡ್ ಅನ್ನು ಸೂಕ್ತ ಸಮಯದಲ್ಲಿ ಒದಗಿಸುವ ಅಪರೂಪದ ಸೇವೆ ನೀಡಲು ಸಜ್ಜುಗೊಂಡಿದೆ.
ತುರ್ತು ಸ್ಥಿತಿಯಲ್ಲಿ ಯಾರಿಗೂ ರಕ್ತದ ಕೊರತೆ ಎದುರಾಗಬಾರದು ಎಂಬ ಕಾರಣಕ್ಕೆ ಐರಿಲೀಫ್ ರಕ್ತನಿಧಿ ವ್ಯವಸ್ಥೆಯನ್ನೂ ತನ್ನ ಆದ್ಯತಾ ಕ್ಷೇತ್ರವಾಗಿ ಮಾಡಿಕೊಂಡಿದೆ. ನಗರದಲ್ಲಿರುವ ರಕ್ತನಿಧಿ ಕೇಂದ್ರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಐರಿಲೀಫ್, ಆಯಾ ಸಂದರ್ಭದಲ್ಲಿನ ರಕ್ತದ ಸಂಗ್ರಹದ ಬಗ್ಗೆ ನಿಖರ ಮಾಹಿತಿ ಒದಗಿಸುತ್ತದೆ. ಸೂಕ್ತ ರಕ್ತವನ್ನು ಯಾವ ರಕ್ತನಿಧಿಯಿಂದ ಪಡೆಯಬಹುದು ಎಂಬುದಕ್ಕೆ ಐರಿಲೀಫ್ ತನ್ನ ಮೊಬೈಲ್ ಆ್ಯಪ್ ಮೂಲಕ ಮಾರ್ಗದರ್ಶನ ನೀಡುತ್ತದೆ. ನೀವು ಮಾಡಬೇಕಿರುವುದು ಇಷ್ಟೇ, ಗೂಗಲ್ ಪ್ಲೇ ಸ್ಟೋರ್ನಿಂದ ಐರಿಲೀಫ್ ಆ್ಯಪ್ ಅನ್ನು ಇನ್ಟಾಲ್ ಮಾಡಿಕೊಳ್ಳಿ. ನಿಮ್ಮ ರಕ್ತ ಗುಂಪಿಗೆ ಬೇಡಿಕೆ ಇಟ್ಟಲ್ಲಿ ನೀವಿರುವಲ್ಲಿಗೇ ರಕ್ತವನ್ನು ತಂದು ನೀಡಲಾಗುತ್ತದೆ. ರಕ್ತದಾನಿಗಳನ್ನು ಗುರುತಿಸುವುದು ಸಹ ಐರಿಲೀಫ್ನಿಂದ ಬಹಳ ಸುಲಭ. ರಕ್ತದಾನಕ್ಕೆ ಮುಂದೆ ಬರುವ ದಾನಿಗಳ ವಿವರಗಳನ್ನು ಐರಿಲೀಫ್ ಹೊಂದಿರುತ್ತದೆ. ಇಂತಹ ನೋಂದಾಯಿತ ದಾನಿಗಳಿಗೆ ತಕ್ಷಣ ಸಂದೇಶ ರವಾನಿಸುತ್ತದೆ. ದಾನಿಗಳ ಗೋಪ್ಯತೆಯನ್ನು ಕಾಪಾಡುತ್ತಲೇ ಸೂಕ್ತ ಸಮಯಕ್ಕೆ ರಕ್ತವನ್ನು ಒದಗಿಸುವ ಸೇವೆಯನ್ನು ಐರಿಲೀಫ್ ಮಾಡಲಿದೆ.
ಆಪ್ ಆಂಬುಲೆನ್ಸ್ :
ಆಂಬುಲೆನ್ಸ್ಗೂ ಈಗ ಆ್ಯಪ್ ಭಾಗ್ಯ. ಐರಿಲೀಫ್ನ ಆಂಬುಲೆನ್ಸ್ ಸೇವೆ ಅತ್ಯಂತ ತ್ವರಿತ ಮತ್ತು ಸುಲಭವಾಗಿ ಸಿಗುವಂತಹ ಸೇವೆ. ತುರ್ತು ಸ್ಥಿತಿಯಲ್ಲಿ ಸೂಕ್ತ ಆಸ್ಪತ್ರೆಯನ್ನು ಯಾವುದೇ ಸಮಯದಲ್ಲಿ ಆಯ್ಕೆ ಮಾಡುವುದು ಐರಿಲೀಫ್ನಿಂದ ಸಾಧ್ಯವಾಗಲಿದೆ. ಅತ್ಯಂತ ಗರಿಷ್ಠ ಪ್ರಮಾಣದ ಗುಣಮಟ್ಟದೊಂದಿಗೆ ಆಸ್ಪತ್ರೆಗೆ ಸಾಗಿಸುವ ಸೌಲಭ್ಯ ಲಭ್ಯ. ಸೂಕ್ತ ಅರ್ಹತೆ ಮತ್ತು ಪ್ರಮಾಣಪತ್ರ ಗಳಿಸಿಕೊಂಡವರಿಂದಲೇ ತುರ್ತು ಸೇವೆ. ಸಂಚಾರದಟ್ಟಣೆ ನಿವಾರಿಸಿ ತ್ವರಿತವಾಗಿ ಆಸ್ಪತ್ರೆಗೆ ಆಂಬುಲೆನ್ಸ್ ತಲುಪುವಂತೆ ಮಾಡುವ ವ್ಯವಸ್ಥಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಐರಿಲೀಫ್ ಹೊಂದಿದೆ. ಇದರಿಂದ ಬೇಗನೆ ಆಸ್ಪತ್ರೆಗೆ ತಲುಪಿ, ತಕ್ಷಣ ಚಿಕಿತ್ಸೆ ಪಡೆಯುವುದು ಸಾಧ್ಯವಾಗುತ್ತದೆ. ಇದರ ಜತೆಗೆ ರೋಗಿಗಳ ಬಂಧುಗಳು ಆಂಬುಲೆನ್ಸ್ ಸಾಗುತ್ತಿರುವ ಹಾದಿಯನ್ನು ನೋಡುತ್ತ ಆಸ್ಪತ್ರೆ ತಲುಪುವುದನ್ನು ಗಮನಿಸುತ್ತ ಇರಬಹುದು.
ಔಷಧ ಮಾರಾಟ ಮಾಡುವವರ ಮತ್ತು ಕೊಳ್ಳುವವರ ನಡುವಿನ ಕೊಂಡಿಯಾಗಿಯೂ ಐರಿಲೀಫ್ ಕೆಲಸ ಮಾಡುತ್ತದೆ. ಆ್ಯಪ್ ಮೂಲಕ ಅಥವಾ ವೈದ್ಯರ ಸೂಚನೆಯಂತೆ ಔಷಧ ಮಳಿಗೆಯನ್ನು ಸಂಪರ್ಕಿಸಲಾಗುತ್ತದೆ. ಕೆಲವೊಮ್ಮೆ ನಿಮಗೆ ಮನೆಯಿಂದ ಹೊರಡಲು ಸಾಧ್ಯವಾಗದಿದ್ದರೆ ಔಷಧವನ್ನು ನಿಮ್ಮ ಮನೆ ಬಾಗಿಲಿಗೇ ತಂದೊಪ್ಪಿಸುವ ಕೆಲಸವನ್ನೂ ಮಾಡಲಾಗುತ್ತದೆ.
ಐರಿಲೀಫ್ ಒದಗಿಸುವ ಮನೆ ಕಾಳಜಿ ಸೇವೆ ನಿಮಗೆ ಮನೆಯಿಂದಲೇ ಹಲವಾರು ಸೇವೆಗಳನ್ನು ಬುಕ್ ಮಾಡುವುದಕ್ಕೆ ಅವಕಾಶ ಕಲ್ಪಿಸುತ್ತದೆ. ಪ್ರಯೋಗಾಲಯ ಪರೀಕ್ಷೆ, ದಾದಿಯರ ಸೇವೆ, ಬಾಡಿಗೆಗೆ ವೈದ್ಯಕೀಯ ಸಲಕರಣೆಗಳಂತಹ ಸೇವೆಗಳನ್ನು ಮನೆಯೊಳಗೆ ಇದ್ದುಕೊಂಡೇ ನಿಮ್ಮ ಸೂಕ್ತ ಸಮಯಕ್ಕೆ ತಕ್ಕಂತೆ ಪಡೆಯಬಹುದು. ದೂರವಾಣಿ ಮೂಲಕ ಸಲಹೆ ಪಡೆಯುವುದು ಮತ್ತು ಇಮೇಲ್ ಮೂಲಕ ವರದಿ ರವಾನಿಸುವ ಸೇವೆಯನ್ನೂ ಸಂಸ್ಥೆ ಒದಗಿಸುತ್ತದೆ. ನಿಮ್ಮ ಮನೆಯಲ್ಲಿ ಯಾರಾದರೂ ವೃದ್ಧರು ಆರೈಕೆ ಪಡೆಯುತ್ತಿದ್ದರೆ, ಕಾಲಕಾಲಕ್ಕೆ ಅವರು ಎಂತಹ ಔಷಧ ತೆಗೆದುಕೊಳ್ಳಬೇಕು ಮತ್ತು ಎಂತಹ ಇತರ ಆರೈಕೆ ಮಾಡಿಕೊಳ್ಳಬೇಕು ಎಂಬುದನ್ನು ನೆನಪಿಸುವಂತಹ ಆ್ಯಪ್ ಸೌಲಭ್ಯವನ್ನೂ ಸಂಸ್ಥೆ ಹೊಂದಿದೆ. ನಿಮ್ಮದೇ ಧ್ವನಿಯೊಂದಿಗೆ, ಔಷಧಗಳ ಚಿತ್ರ ಸಹಿತ ಸೂಕ್ತ ಮಾರ್ಗದರ್ಶನವನ್ನು ರೋಗಿಗೆ ನೀಡಬಹುದು. ಒಟ್ಟಾರೆ ಆ್ಯಪ್ ಆಧಾರಿತ ಈ ವ್ಯವಸ್ಥೆಗಳು ಆರೋಗ್ಯ ಕ್ಷೇತ್ರದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
App Download link : https://goo.gl/vqublM
ಹೆಚ್ಚಿನ ಮಾಹಿತಿಗಾಗಿ 8884024449 ಸಂಪರ್ಕಿಸಲು ಕೋರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.