ಕಾಸರಗೋಡು (ಬಾಯಾರು): ಕೇರಳ ರಾಜ್ಯದಲ್ಲಿರುವ ಕಮ್ಯುನಿಸ್ಟ್ ಸರಕಾರವು ಸಂಘಪರಿವಾರ ಹಾಗೂ ಭಾಜಪದ ಕಾರ್ಯಕರ್ತರ ಮೇಲೆ ದ್ವೇಷದ ನೀತಿಯನ್ನು ಅನುಸರಿಸುತ್ತಿದೆ. ಆದರೆ ಈ ದೌರ್ಜನ್ಯಕ್ಕೆ ಸಂಘಪರಿವಾರ ಮುಂದಿನ ದಿನಗಳಲ್ಲಿ ಸೂಕ್ತವಾದ ಉತ್ತರ ನೀಡಲಿದೆ ಎಂದು ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಸುನಿಲ್ ಪಿ. ಆರ್. ಹೇಳಿದರು. ನಿರಪರಾಧಿ ಯುವಕರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಕೇಸ್ ಹಾಕಿ ದ್ವೇಷದ ರಾಜಕೀಯ ನಡೆಸುವ ಕೇರಳದ ಸರಕಾರದ ನೀತಿಯನ್ನು ಖಂಡಿಸಿ ಯುವಮೋರ್ಚಾ ತಾರೀಕು 9/10/2016 ಸಂಜೆ 4 ಗಂಟೆಗೆ ಬದಿಯಾರಿನಿಂದ ಮುಳಿಗದ್ದೆಯವರೆಗೆ ಪ್ರತಿಭಟನಾ ಮೆರವಣಿಗೆಯ ನಂತರ ಮುಳಿಗದ್ದೆಯಲ್ಲಿ ನಡೆದ ಸಭೆಯಲ್ಲಿ ಮಾತಾನಾಡುತ್ತಾ ಕೇರಳ ಪೋಲೀಸರು ಕಮ್ಯುನಿಸ್ಟ್ ಸರಕಾರದ ಕೈಗೊಂಬೆಯಾಗಿ ಸಂಘಪರಿವಾರದ ಕಾರ್ಯಕರ್ತರ ಮೇಲೆ ಅನಗತ್ಯವಾದ ಕೊಲೆಯತ್ನ ಎಂಬ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ಹಾಕಿದ್ದಾರೆ. ಪೋಲೀಸರು ರಾಜ್ಯದ ಎಲ್ಲಾ ವರ್ಗದ ಜನರು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿದು, ಕಮ್ಯುನಿಸ್ಟ್ ಏಜಂಟ್ ರಂತೆ ವರ್ತಿಸುವುದನ್ನು ಬಿಡಬೇಕು. ತಕ್ಷಣವೇ ಕೊಲೆ ಯತ್ನದ ಸೆಕ್ಷನ್ನನ್ನು ಹಿಂದೆ ತೆಗೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ಯುವ ಮೋರ್ಚಾ ಮುಂದಾಗಲಿದೆ. ಯಾವುದೇ ಕಾರಣಕ್ಕಾಗಿ ಅನ್ಯಾಯವನ್ನು ಸಹಿಸುವುದಿಲ್ಲ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಹೇಶ್ವರ ಕೆ.ವಿ, ಯುವಮೋರ್ಚಾ ಮಂಡಲ ಕಾರ್ಯದರ್ಶಿ ಸ್ವಪ್ನ, ಪೈವಳಿಕೆ ಪಂಚಾಯತ್ ಬಿಜೆಪಿ ಅಧ್ಯಕ್ಷ ಸದಾಶಿವ ಚೇರಾಲ್, ಪೈವಳಿಕೆ ಪಂಚಾಯತ್ ಬಿಜೆಪಿ ಕಾರ್ಯದರ್ಶಿ ಸುಬ್ರಮಣ್ಯ ಭಟ್, ಹರಿಣಾಕ್ಷ ಬದಿಯಾರು, ಪ್ರವೀಣ ಚಂದ್ರ ಬಲ್ಲಾಳ್, ಯುವಮೋರ್ಚಾ ಮಂಡಲ ಕಾರ್ಯದರ್ಶಿ ಬಾಲಕೃಷ್ಣ ಬಂದ್ಯೋಡು, ಧನರಾಜ್ ಪ್ರತಾಪನಗರ, ಯುವಮೋರ್ಚಾ ಪೈವಳಿಕೆ ಮಂಡಲ ಅಧ್ಯಕ್ಷ ಧನರಾಜ್, ಭಾಜಪ ರಾಜ್ಯ ಸಮಿತಿ ಸದಸ್ಯೆ ಸರೋಜ ಆರ್.ಬಲ್ಲಾಳ್, ವಿಹಿಂಪ ಪ್ರಖಂಡ ಕಾರ್ಯದರ್ಶಿ ದಿನೇಶ ಚೆರುಗೋಳಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.