News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಸ್ಸಾಂ: ಬಿದಿರಿನಿಂದ ತಯಾರಿಸಿದ ಸೈಕಲ್‌ಗಳ ಬಿಡುಗಡೆ

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗುವಾಹಟಿಯ ಸತಿ ರಾಧಿಕಾ ಶಾಂತಿ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿದಿರಿನಿಂದ ತಯಾರಿಸಿದ ಸೈಕಲ್‌ಗಳನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿದರು.

ಪುಣೆ ಮೂಲದ ಬ್ಯಾಂಬೂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಿದಿರಿನಿಂದ ಸೈಕಲ್‌ಗಳನ್ನು ತಯಾರಿಸುವ ನವೀನ ಉಪಕ್ರಮವನ್ನು ಕೈಗೆತ್ತಿಕೊಂಡಿದೆ. ಬಿದಿರಿನ ಸೈಕಲ್ ಉತ್ಪಾದನೆ ಮತ್ತು ಸುಸ್ಥಿರ ಸಾರಿಗೆಯಲ್ಲಿ ಅಸ್ಸಾಂ ಅನ್ನು ದೇಶದಲ್ಲಿ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆರಂಭಿಸಲಾದ ಈ ಯೋಜನೆಯು ಸುಮಾರು 15 ಕೋಟಿ ರೂ.ಗಳ ಹೂಡಿಕೆಯನ್ನು ಒಳಗೊಂಡಿದೆ.

ಈ ಯೋಜನೆಯು ತನ್ನ ಮೊದಲ ವರ್ಷದಲ್ಲಿ 50 ರಿಂದ 100 ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಆರಂಭಿಕ ಹಂತದಲ್ಲಿ, ಕಂಪನಿಯು ಪ್ರತಿ ತಿಂಗಳು ಸುಮಾರು 1,000 ಸೈಕಲ್‌ಗಳನ್ನು ತಯಾರಿಸಲು ಯೋಜಿಸಿದೆ.

ಈ ನವೀನ ಉಪಕ್ರಮವನ್ನು ಶ್ಲಾಘಿಸಿದ ಸಿಎಂ ಶರ್ಮಾ, ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಸೈಕಲ್ ತಯಾರಿಕೆಯಲ್ಲಿ ಬಿದಿರಿನ ಬಳಕೆಯನ್ನು ಒಳಗೊಂಡ ಈ ನವೀನ ಉಪಕ್ರಮವನ್ನು ವೀಕ್ಷಿಸಲು ಸಂತೋಷವಾಗುತ್ತದೆ ಎಂದಿದ್ದಾರೆ. ಪುಣೆ ಮೂಲದ ಕೈಗಾರಿಕಾ ಉದ್ಯಮವು ಈಗಾಗಲೇ ಅಸ್ಸಾಂನ ಬಿದಿರನ್ನು ಬಳಸಿ ಹಲ್ಲುಜ್ಜುವ ಬ್ರಷ್‌ಗಳು ಮತ್ತು ಬಾಚಣಿಗೆಗಳು ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದಿದ್ದಾರೆ.  ಈ ಕಂಪನಿಯು ತನ್ನ ಉತ್ಪನ್ನಗಳನ್ನು ತಯಾರಿಸಲು ಅಸ್ಸಾಂನ ಬಿದಿರನ್ನು ಬಳಸುತ್ತಿರುವುದರಿಂದ, ರಾಜ್ಯ ಸರ್ಕಾರವು ಅಸ್ಸಾಂನಲ್ಲಿ ಉದ್ಯಮವನ್ನು ಸ್ಥಾಪಿಸಲು ಕಂಪನಿಯನ್ನು ಆಹ್ವಾನಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top