News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಸ್ಸಾಂ: ಅರಣ್ಯವಾಗಿ ಅಭಿವೃದ್ಧಿ ಹೊಂದುತ್ತಿದೆ ಗ್ರಾಮವೊಂದರ ಸರ್ಕಾರಿ ಭೂಮಿ

ಗುವಾಹಟಿ: ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಅಸ್ಸಾಂನ ಧೇಮಾಜಿ ಜಿಲ್ಲೆಯ ಬೋರ್ಡೊಲೋನಿ ಗ್ರಾಮ ಪಂಚಾಯತ್‌ನ ನಿವಾಸಿಗಳು ಮಗುವಾಹೋಲಾದಲ್ಲಿರುವ 1,044 ಬಿಘಾ ಸರ್ಕಾರಿ ಹುಲ್ಲುಗಾವಲು ಭೂಮಿಯನ್ನು ಗ್ರಾಮ ಅರಣ್ಯವನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ.

ಪ್ರಸ್ತಾವಿತ ಮಗುವಾಹೋಲಾ ಗ್ರಾಮ ಅರಣ್ಯವನ್ನು ಧೇಮಾಜಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗುವುದು. ಈ ಪ್ರದೇಶವು ತನ್ನ ಸಮೃದ್ಧ ಜೈವಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದ್ದು, ಜಿಂಕೆಗಳು, ವಿವಿಧ ಜಾತಿಯ ಪಕ್ಷಿಗಳು ಮತ್ತು ವೈವಿಧ್ಯಮಯ ಜಲಚರಗಳಿಗೆ ಆಶ್ರಯ ತಾಣವಾಗಿದೆ.

ಧೇಮಾಜಿಯ ಬೋರ್ಡೊಲೋನಿಯ ಹಸಿರು ಸಿರಿಯ ನಡುವೆ ಮಗುವಾಹೋಲಾ ದನಗಳ ಮೇಯುವ ಪ್ರದೇಶವಿದೆ. ಸ್ಥಳೀಯ ಗ್ರಾಮಸ್ಥರು ಮತ್ತು ವನ್ಯಜೀವಿಗಳ ನಡುವಿನ ಸಹಬಾಳ್ವೆಗೆ ಒಂದು ವಿಶಿಷ್ಟ ಉದಾಹರಣೆಯಾಗಿರುವ ಈ ವಿಶಾಲವಾದ ಹುಲ್ಲುಗಾವಲು ಪ್ರದೇಶವು, ಇದೀಗ ಸಂರಕ್ಷಣೆಯ ಹೊಸ ಅಧ್ಯಾಯದತ್ತ ಸಾಗುತ್ತಿದೆ.

ಸುಮಾರು 1,044 ಬಿಘಾ ಭೂಮಿಯಲ್ಲಿ ಹರಡಿರುವ ಮಗುವಾಹೋಲಾ ಹುಲ್ಲುಗಾವಲು ಪ್ರದೇಶವು ಗೋಹೈನ್ ಚಾಪೊರಿ, ಹತೋರ್ ಖೋಲಾ, ಪುಥಿಮಾರಿ ಮತ್ತು ನಂ. 1 ಬಾರ್‌ಮುಥೋನಿ ಎಂಬ ನಾಲ್ಕು ಗ್ರಾಮಗಳನ್ನು ಒಳಗೊಂಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top