News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೇರಳ: ಸಿಪಿಎಂ ಬೆದರಿಕೆಗೆ ಸೆಡ್ಡು, ಶಾಖೆಯಲ್ಲಿ ಸ್ವಯಂಸೇವಕರ ಉಪಸ್ಥಿತಿ ಹೆಚ್ಚಳ

ಅರವಾಂಚಲ್‌: ಅಕ್ಟೋಬರ್ 1 ರಂದು ಕೇರಳದ ಕಣ್ಣೂರು ಜಿಲ್ಲೆಯ ಅರವಾಂಚಲ್‌ನಲ್ಲಿರುವ ಆರ್‌ಎಸ್‌ಎಸ್ ಶಾಖೆಯಲ್ಲಿ ಸ್ವಯಂಸೇವಕರು ಎರಡು ಪಟ್ಟು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕಸಿಪಿಎಂಗೆ ಟಕ್ಕರ್‌ ನೀಡಿದ್ದಾರೆ. ಸಿಪಿಎಂ ಕಾರ್ಯಕರ್ತರು ಶಾಖೆಯ ಮೇಲೆ ದಾಳಿ ಮಾಡಿ ಅದನ್ನು ಕಾರ್ಯ ನಿರ್ವಹಿಸದಂತೆ ತಡೆಯಲು ಪ್ರಯತ್ನಿಸಿದ ಘಟನೆ ನಡೆದಿದ್ದು. ಆದರೆ ಸ್ವಯಂಸೇವಕರು ಅವರ ಪ್ರಯತ್ನವನ್ನು ತಮ್ಮ ಇಚ್ಛಾಶಕ್ತಿಯ ಮೂಲಕ ವಿಫಲಗೊಳಿಸಿದ್ದಾರೆ. ಸೆಪ್ಟೆಂಬರ್ 30 ರಂದು ಸುಮಾರು 15 ಸ್ವಯಂಸೇವಕರ ಉಪಸ್ಥಿತರಿದ್ದರು, ಮರುದಿನ 50 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು.

ಸೆಪ್ಟೆಂಬರ್ 30 ರ ಸಂಜೆ, ಪಯ್ಯನ್ನೂರ್ ಸಂಘ ಜಿಲ್ಲೆಯ ಚೆರುಪುಳ ಖಂಡ್‌ನ ಅರವಂಚಲ್‌ನಲ್ಲಿರುವ ಆರ್‌ಎಸ್‌ಎಸ್ ಶಾಖೆಯ ಮೇಲೆ ಸಿಪಿಎಂ ಗೂಂಡಾಗಳು ದಾಳಿ ನಡೆಸಿದರು. ಈ ಸ್ಥಳವು ಕಣ್ಣೂರು ಕಂದಾಯ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಡಿವೈಎಫ್‌ಐ ಗೂಂಡಾಗಳಾದ ನಿತಿನ್ ಸಿದ್ಧಾರ್ಥ್ ಮತ್ತು ಶರತ್ ನೇತೃತ್ವದ ಗೂಂಡಾಗಳು ಬಾಲ ಸ್ವಯಂಸೇವಕರು ಭಾಗವಹಿಸುತ್ತಿದ್ದ ಶಾಖೆಯ ಮೇಲೆ ದಾಳಿ ಮಾಡಿದರು.

ವರದಿಗಳ ಪ್ರಕಾರ, ಸಿಪಿಎಂ ಗೂಂಡಾಗಳು ಸಂಘಸ್ಥಾನಕ್ಕೆ ಪ್ರವೇಶಿಸಿ, ಸ್ವಯಂಸೇವಕರ ಮೇಲೆ ಕೂಗಾಡಿ, ಶಾಖೆಯನ್ನು ಅಲ್ಲಿ ನಡೆಸಲು ‘ಅನುಮತಿಸುವುದಿಲ್ಲ’ ಎಂದು ಹೇಳಿ ಸ್ಥಳದಿಂದ ಹೊರಹೋಗುವಂತೆ ಕೇಳಿಕೊಂಡಿದ್ದರಯ. ಸ್ವಯಂಸೇವಕರು ಸಂಘಸ್ಥಾನದಲ್ಲಿದ್ದಾಗ, ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಿದರು. ಆಗ ಶಾಖೆಯಲ್ಲಿ ಸ್ವಯಂಸೇವಕರ ಬಲ ಸುಮಾರು 15 ರಷ್ಟಿತ್ತು. ಆದರೆ ಘಟನೆ ನಡೆದ ಮರುದಿನ ಅಕ್ಟೋಬರ್‌ 1 ರಂದು ಈ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ.

ಸ್ವಯಂಸೇವಕರು ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ಎರಡೂ ಕಡೆಯ ಕಾರ್ಯಕರ್ತರನ್ನು ಒಳಗೊಂಡ ಸಭೆಯನ್ನು ನಡೆಸಿದ್ದಾರೆ.

ಸಭೆಯಲ್ಲಿ, ಸಿಪಿಎಂ ಗೂಂಡಾಗಳು ಶಾಖೆ ಆ ಸ್ಥಳದಲ್ಲಿ ಕಾರ್ಯನಿರ್ವಹಿಸಬಾರದು ಎಂದು ವಾದಿಸಿದರು. ಆದಾಗ್ಯೂ, ದೇಶದ ಇತರ ಭಾಗಗಳಲ್ಲಿ ಶಾಖೆಗಳು ಕಾರ್ಯನಿರ್ವಹಿಸಲು ಸಾಧ್ಯವಾದರೆ, ಅರವಂಚಲ್‌ನಲ್ಲಿಯೂ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ ಎಂದು ಸ್ವಯಂಸೇವಕರು ಪ್ರತಿಪಾದಿಸಿದರು. ಪೊಲೀಸರು ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬ ವರದಿಗಳಿವೆ.

ಅದೇ ಜಿಲ್ಲೆಯ ಪನುಂಡದಿಂದ ಮತ್ತೊಂದು ಘಟನೆ ವರದಿಯಾಗಿದೆ. ಅಲ್ಲಿನ ಸ್ವಯಂಸೇವಕರ ಮನೆಯ ಆವರಣದಲ್ಲಿ ಶಾಖೆ ನಡೆಸಲಾಗುತ್ತದೆ. ಸೆಪ್ಟೆಂಬರ್ 30 ರ ರಾತ್ರಿ, ಸಿಪಿಎಂ ಗೂಂಡಾಗಳು ಆವರಣದಲ್ಲಿರುವ ಶೆಡ್ ಅನ್ನು ಸುಟ್ಟುಹಾಕಿದ್ದಾರೆಂದು ವರದಿಯಾಗಿದೆ. ಈ ಘಟನೆಯನ್ನು ಆ ಪ್ರದೇಶದಲ್ಲಿ ಭಯ ಹುಟ್ಟಿಸುವ ಮತ್ತು ಮನೆ ಮಾಲೀಕರು ಮತ್ತು ಇತರ ಸ್ವಯಂಸೇವಕರು ಶಾಖೆಯನ್ನು ಮುಂದುವರಿಸದಂತೆ ನಿರುತ್ಸಾಹಗೊಳಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top