ಬಂಟ್ವಾಳ: ರಾಜ್ಯ ಸರಕಾರ ಸುಳ್ಳು ಪ್ರಚಾರಗಳ ಮೂಲಕ ಜನಸಾಮಾನ್ಯರನ್ನು ವಂಚಿಸಿದೆ ವಿನಃ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಜನರ ಭಾವನೆಗಳಿಗೆ ಸ್ಪಂದಿಸಲು ವಿಫಲವಾಗಿದೆ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು ಹೇಳಿದರು. ಅವರು ಭಾರತೀಯ ಜನತಾಪಾರ್ಟಿ ಕಛೇರಿ ಮಂಗಳೂರು ಇಲ್ಲಿ ಎಸ್.ಸಿ. ಜಿಲ್ಲಾ ಮೋರ್ಚಾ ಪದಗ್ರಹಣ ಮತ್ತು ಕಾರ್ಯಕಾರಿಣಿ ಸಭೆಗೆ ಭಾಗವಹಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ರಾಜ್ಯ ಸರಕಾರದ ವಿರೋಧಿ ನೀತಿ ಧೋರಣೆಯಿಂದಾಗಿ ಸಾಧ್ಯವಾಗುತ್ತಿಲ್ಲ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಗ್ರಾಮಗಳು ರಾಮರಾಜ್ಯವಾಗಬೇಕಾದರೆ ಕೇಂದ್ರ ಸರಕಾರದ ಸವಲತ್ತುಗಳು ಎಲ್ಲರಿಗೂ ತಲುಪುವಂತಾಗಬೇಕು. ಆ ನಿಟ್ಟಿನಲ್ಲಿ ಎಸ್.ಸಿ ಮೋರ್ಚಾ ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರಲು ಸಂಘಟನೆಯನ್ನು ಬಲಪಡಿಸಿ, ಎಸ್ಸಿ ಮಹಿಳೆಯರು ಸಂಘಟಿತರಾಗಿ ಜನಾಂಗಕ್ಕೆ ಸಿಗುವ ಸೌಲಭ್ಯವನ್ನು ಸಾಧ್ಯ ವಾಗುವ ರೀತಿಯಲ್ಲಿ ನನ್ನ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್ಸಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು ಮಾತನಾಡಿ ಅಧಿಕಾರವನ್ನು ಸರ್ವಾಧಿಕಾರ ಎಂದು ಭಾವಿಸಬೇಡಿ, ಜನರಿಗೆ ಅನ್ಯಾಯವಾದಾಗ ಅಧಿಕಾರವನ್ನು ನ್ಯಾಯಯುತವಾಗಿ ಬಳಸಿ ಜನರ ಪ್ರೀತಿ ವಿಶ್ವಾಸ ಗಳಿಸಿ ಯಶಸ್ಸು ನಮ್ಮದಾಗುತ್ತದೆ, ಪಕ್ಷಕ್ಕೂ ಒಳಿತಾಗುತ್ತದೆ ಎಂದರು. ಮೋರ್ಚಾದ ಮೂಲಕ ನಾವು ಬೆಳಯುವ ಇನ್ನೋಬ್ಬರನ್ನು ಬೆಳೆಸುವ ಅಮೂಲಕ ಪಕ್ಷ ಸಂಘಟನೆಯನ್ನು ಮಾಡುವ ಎಂದು ಹೇಳಿದರು. 2014-15 ರಲ್ಲಿ ಸಮಾಜಕಲ್ಯಾಣ ಇಲಾಖೆಗೆ ರಾಜ್ಯ ಸರಕಾರದಿಂದ ಮಂಜೂರಾದ ಹಣದಲ್ಲಿ ರೂ. 10೦ ಕೋಟಿ ಉಪಯೋಗಿಸದೆ ವಾಪಸು ಹೋಗಿದೆ. ಇದರ ವಿರುದ್ದ ಹೋರಾಟ ಮಾಡಲು ನಾವು ರೂಪುರೇಷೆಗಳನ್ನು ಸಿದ್ದ ಪಡಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ಬಿ.ಜೆ.ಪಿ. ಜಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರು ಮಾತನಾಡಿ ಭೂಮಂಡಲದಲ್ಲಿ ಅದ್ಬುತವಾದ ರಾಷ್ಟ್ರವಾಗಿ ನಿರ್ಮಾಣಮಾಡಲು ಕನಸು ಕಾಣುತ್ತಿರುವ ಮೋದಿ ಅವರ ಚಿಂತನೆಗೆ ನಾವು ಕಟಿ ಬದ್ದರಾಗೋಣ, ಮಹಾನ್ ವ್ಯಕ್ತಿಗಳ ಜೀವನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳೋಣ ಎಂದರು. ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವ ಕೊಟ್ಟಾಗ ಇನ್ನೊಬ್ಬನನ್ನು ಅವಲಂಬಿಸುವ ಅಗತ್ಯ ಬರುವುದಿಲ್ಲ, ಆ ಮೂಲಕ ದೇಶದ ಕ್ರಾಂತಿಕಾರಕ ಬದಲಾವಣೆ ಸಾಧ್ಯ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ಮಾತನಾಡಿ ರಾಜಕೀಯವಾಗಿ ಬೆಳೆಸುವ ಉದ್ದೇಶದಿಂದ ಪಕ್ಷ ಎಲ್ಲರನ್ನು ಗುರುತಿಸಿ ಅವಕಾಶ ನೀಡಿದೆ. ಪಕ್ಷ ನೀಡಿರುವ ಜವಾಬ್ದಾರಿ ಹುದ್ದೆ ಅಲ್ಲ ಎನ್ನುವುದನನ್ನು ಸ್ಪಷ್ಟವಾಗಿ ತಿಳಿದುಕೊಂಡು ಜವಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯೋಣ ಎಂದರು.
ವೇದಿಕೆಯಲ್ಲಿ ಎಸ್ಸಿ ಮೋರ್ಚಾ ಉಡುಪಿ ಜಿಲ್ಲಾ ಉಪಾಧ್ಯಕ್ಷ ವೈ.ಸೇಸು, ರಾಜ್ಯ ಕಾರ್ಯಕರಿಣಿ ಸದಸ್ಯ ವಸಂತ ಉಪಸ್ಥಿತರಿದ್ದರು. ಎಸ್ಸಿ ಮೋರ್ಚಾ ಕಾರ್ಯದರ್ಶಿ ವಿನಯ ನೇತ್ರಾ ಸ್ವಾಗತಿಸಿ, ಡಿ.ಎಸ್.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.