ಮೆಲ್ಬೋರ್ನ್: ಇಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 27 ರನ್ಗಳಿಂದ ಪರಾಭವಗೊಳಿಸಿ ಸರಣಿ ತನ್ನದಾಗಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಆರಂಭಿಕರಾದ ಶಿಖರ್ ಧವನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅಮೋಘ ಆಟದಿಂದ ನಿಗದಿತ 20 ಓವರ್ಗಳಲ್ಲಿ 184 ರನ್ ಪೇರಿಸಿತು. ಧವನ್ 42, ರೋಹಿತ್ ಶರ್ಮಾ 60 ಹಾಗೂ ಕೊಹ್ಲಿ 59 ರನ್ ಬಾರಿಸಿದರು. ಬೌಲರ್ಗಳಾದ ಜಡೇಜಾ, ಹಾಗೂ ವೇಗಿ ಜಸ್ಪ್ರೀತ್ ಭುಮ್ರಾಹ್ 2 ವಿಕೆಟ್ ಕಿತ್ತರೆ, ಅಶ್ವಿನ್, ನೆಹ್ರಾ, ಹಾರ್ದಿಕ್ ಪಾಂಡ್ಯಾ ತಲಾ 1 ವಿಕೆಟ್ ಪಡೆದರು.
ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಉತ್ತಮ ಆರಂಭದ ಹೊರತಾಗಿ 8 ವಿಕೆಟ್ ನಷ್ಟಕ್ಕೆ 157ರನ್ ಪೇರಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಪರ ನಾಯಕ ಫಿಂಚ್ 78 ಹಾಗೂ ಮಾರ್ಷ್ 23 ರನ್ ಬಾರಿಸಿದರು.
?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.