ಬದಿಯಡ್ಕ: ಅಟಲ್ಜೀ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ಎ.17 ಶುಕ್ರವಾರ ಸಂಜೆ 9 ಕ್ಕೆ ಬದಿಯಡ್ಕ ಬಸ್ಸು ನಿಲ್ದಾಣ ಪರಿಸರದಲ್ಲಿ ಜರಗಲಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಲೋಕಾರ್ಪಣೆ ಗೈಯ್ಯುವರು.
ಮಧುಕರ ರೈ ಕೊರೆಕಾನ ಅಧ್ಯಕ್ಷತೆವಹಿಸುವರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ, ಕರ್ನಾಟಕದ ಮಾಜಿ ಶಾಸಕ ಮೋನಪ್ಪ ಭಂಡಾರಿ, ಕ್ಯಾಂಪ್ಕೋ ನಿರ್ದೇಶಕ ಐತ್ತಪ್ಪ ಶೆಟ್ಟಿ ಕಡಾರು, ಜಿಲ್ಲಾ ಪಂಚಾಯತು ಸದಸೈ ಪ್ರಮಿಳಾ ಸಿ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆರ್.ಎಸ್.ಎಸ್. ಸಂಘ ಚಾಲಕ್ ದಿನೇಶ್ ಮಡಪ್ಪುರ, ಹಿಂದೂ ಐಕ್ಯ ವೇದಿಕೆ ಜಿಲ್ಲಾ ಅಧ್ಯಕ್ಷ ಕರುಣಾಕರನ್ ಮಾಸ್ತರ್, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ, ಬಿ.ಎಂ.ಎಸ್ ನೇತಾರ ಕೇಶವ.ಎ. ಅಲ್ಲದೆ ರಾಮಪ್ಪ ಮಂಜೇಶ್ವರ, ಸುಧಾಮ ಗೋಸಾಡ, ಅನಿಲ್ ಪುಂಡೂರು, ಹರೀಶ್ ನಾರಂಪಾಡಿ, ಮಂಜುನಾಥ ಮಾನ್ಯ, ಲಕ್ಷ್ಮಣ ಪ್ರಭು ಕರಿಂಬಿಲ ಮೊದಲಾದವರು ಶುಭಾಶಂಸನೆ ಗೈಯ್ಯುವರು.
ಸಮಾಜದಲ್ಲಿ ದೀನ ದಲಿತರ ನೆರವಿಗಾಗಿ ರೂಪೀಕರಿಸಿರುವ ಅಟಲ್ಜೀ ಸೇವಾ ಟ್ರಸ್ಟ್ ಹಲವು ಸೇವಾ ಕಾರ್ಯಗಳ ಯೋಜನೆಯಲ್ಲಿದೆ. ಸ್ವಾತಂತ್ರ ನಂತರದ ಭಾರತವನ್ನು ಆಳಿ ಜಗತ್ತಿನ ಮನ್ನಣೆ ಗಳಿಸಿದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರಿಗೆ ಕೇಂದ್ರ ಸರಕಾರವು ಇತ್ತೀಚೆಗೆ ಭಾರತ ರತ್ನ ನೀಡಿ ಅವರನ್ನು ಗೌರವಹಿಸಿತು. ಇದೇ ವೇಳೆ ಅವರ ಹೆಸರಿನಲ್ಲಿ ಬದಿಯಡ್ಕದಲ್ಲಿ ಅಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಜ್ಜನ ಬಾಂಧವರು ಹೆಚ್ಚಿನ ಸಂಖೈಯಲ್ಲಿ ಬಂಧು ಈ ಸೇವಾ ಕಾರ್ಯದ ಶುಭಾರಂಭಕ್ಕೆ ಸಹಕಾರ ನೀಡಬೇಕೆಂದು ಟ್ರಸ್ಟ್ ಅಧ್ಯಕ್ಷ ಜ್ಞಾನದೇವ ಶೆಣೈ, ಪ್ರಧಾನ ಕಾರ್ಯದರ್ಶಿ ಮಹೇಶ ವಳಕುಂಜ ವಿನಂತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.