ಭಾರತದ ಅತ್ಯಂತ ಕಿರಿಯ ಅಪ್ರತಿಮ ಮಾತುಗಾರ್ತಿ ಇಶಿತಾ ಕತ್ಯಾಲ್. TEDYouth 2015 ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರನ್ನು ಅಶ್ಚರ್ಯ ಚಕಿತಗೊಳಿಸಿದ್ದಾಳೆ. ತನ್ನ 8ನೇ ಹರೆಯದಲ್ಲೇ ಲೇಖಕಿಯಾಗಿ ಹೊರಹೊಮ್ಮಿದ ಈಕೆ ಈಗ ಎರಡನೇ ಪುಸ್ತಕ ಬರೆಯಲು ಮುಂದಾಗಿದ್ದಾಳೆ.
ಆಕೆಯ ಧ್ವನಿಯಲ್ಲಿ ಒಂದಿಷ್ಟು ಭಯವಿಲ್ಲ. ಪುಣೆ ಮೂಲದ ಇಶಿತಾ ನ್ಯೂಯಾರ್ಕ್ನ ಬ್ರೂಕ್ಲಿನ್ ಮ್ಯೂಸಿಯಂನಲ್ಲಿ ನಡೆದ TEDYouth 2015 ಕಾರ್ಯಕ್ರಮದಲ್ಲಿ ನೂರಾರು ಮಂದಿಯ ಮುಂದೆ ಮಾತನಾಡಿದ್ದಾಳೆ.
TEDYouth ಮಧ್ಯಮ ಮತ್ತು ಪ್ರೌಢ ಶಾಲಾ ಮಕ್ಕಳು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಒಂದು ವೇದಿಕೆಯಾಗಿದೆ. ಪ್ರಪಂಚದಾದ್ಯಂತ ಕಿರಿಯ ಶಾಲಾ ಮಕ್ಕಳು, ಯುವಕರು ತಮ್ಮ ಆಲೋಚನೆಗಳು, ಕಲ್ಪನೆಗಳನ್ನು ಈ ವೇದಿಕೆ ಮೂಲಕ ಪರಸ್ಪರ ಹಂಚಿಕೊಳ್ಳುತ್ತಾರೆ.
ತನ್ನ 7ನೇ ವಯಸ್ಸಿನಲ್ಲೇ ಶಾಲಾ ಅಧಿಕಾರಿಗಳೊಂದಿಗೆ ಅನುಮತಿ ಪಡೆಯುವ ಮೂಲಕ ಹಲವು ಚರ್ಚಾ ಕಾರ್ಯಕ್ರಮಗಳು, ಪೋಸ್ಟರ್ಗಳನ್ನು ತಯಾರಿಸುವ, ಕಾರ್ಯಕ್ರಮಗಳ ಆಯೋಜನೆ, ನಿರ್ವಹಣೆ ಮುಂತಾದ ಚಟುವಟಿಕೆಗಳನ್ನು ನಡೆಸಿದ ಇಶಿತಾ TEDx Bhilwara ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರೊಂದಿಗೆ ನ್ಯೂಯಾರ್ಕ್ನ TEDYouth ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಳು.
ಶಾಲಾ ಚಟುವಟಿಕೆ, ಬರವಣಿಗೆ, ಬ್ಲಾಗಿಂಗ್, ಆಟೋಟಗಳಲ್ಲಿ ಪಾಲ್ಗೊಳ್ಳುತ್ತಿರುವ 10 ವಯಸ್ಸಿನ ಇಶಿತಾ, 2014ರಲ್ಲಿ ಪ್ರಕಟಗೊಂಡಿರುವ ತನ್ನ ಮೊದಲ ಪುಸ್ತಕ ಸಿಮ್ರನ್ಸ್ ಡೈರಿ ಇದರ ಲೇಖಕಿ. ಈ ಪುಸ್ತಕ ಹಾಸ್ಯಮಯವಾಗಿದ್ದು, ಒಬ್ಬ 8 ವರ್ಷದ ಬಾಲಕಿ ತನ್ನ ದಿನನಿತ್ಯದ ಕಾರ್ಯಗಳಾದ ಶಾಲಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವುದು, ಬ್ಲಾಗ್, ಬರವಣಿಗೆ, ಕಿರು ಚರ್ಚೆಗಳು, ಭಾಷಣ ತಯಾರಿ ಇತ್ಯಾದಿಗಳನ್ನು ನಿಭಾಯಿಸುವ ಬಗ್ಗೆ ವಿವರಿಸುತ್ತದೆ.
ಪ್ರಾಣಿಗಳ ಸಾಕಷ್ಟು ಪಾತ್ರಗಳನ್ನು ಹೊಂದಿರುವ ಎರಡನೇ ಪುಸ್ತಕವನ್ನು ಬರೆಯಲು ಆರಂಭಿಸಿರುವ ಇಶಿತಾ, 2016ರ ಎಪ್ರಿಲ್ನಲ್ಲಿ ನಡೆಯಲಿರುವ TEDx ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.