ಪುತ್ತೂರು : ಬಲ್ನಾಡು ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪುತ್ತೂರು ನಗರಸಭಾ ಸದಸ್ಯರು, ನಗರ ಪ್ರಮುಖರ ಸಭೆಯು ಭಾನುವಾರ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ಎಸ್. ಅಪ್ಪಯ್ಯ ಮಣಿಯಾಣಿ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಪಕ್ಷದ ಸ್ಥಾನೀಯ ಸಮಿತಿಯ ರಚನೆ ಹಾಗೂ ಮುಂದಿನ ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ವಿಭಾಗ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಪುತ್ತೂರು ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್ ಮುಂತಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ರಾಜೇಶ್ ಬನ್ನೂರು, ವಿಶ್ವನಾಥ ಗೌಡ ಬನ್ನೂರು, ವಿನಯ ಭಂಡಾರಿ, ಚಂದ್ರಸಿಂಗ್, ರಾಮಣ್ಣ ಗೌಡ ಹಲಂಗ, ಹರೀಶ್ ನಾಯ್ಕ್ ಪಡ್ಡಾಯೂರು, ಸುಜೀಂದ್ರ ಪ್ರಭು, ಯಶೋಧಾ ಹರೀಶ್ ಪೆರಿಯತ್ತೋಡಿ, ವನಿತ ಕೆ.ಟಿ., ದಯಾನಂದ ಕೆ, ಅಶೋಕ್ ಹಾರಾಡಿ, ಹರೀಶ್ ಆಚಾರ್ಯ ಬೀರಮಲೆ, ಗಣಪತಿ ನಾಯಕ್, ಎಚ್. ಉದಯ ಕುಮಾರ್, ಸುಂದರನಾಥ ಕೇಪುಳು, ಶ್ವೇತಾ ನಾಯಕ್, ಪ್ರಕಾಶ್ ಕೆಲ್ಲಾಡಿ, ಜಯಪ್ರಕಾಶ್, ಮನೋಹರ ಕಲ್ಲೇಗ, ಪ್ರಶಾಂತ ಅಜೇಯನಗರ, ರತ್ನಾಕರ ರೈ ಕೆಳಗಿನಮನೆ, ಬಾಲಕೃಷ್ಣ ಮಾಲ್ತೋಟ್ಟು, ಯುವರಾಜ ಪೆರಿಯತ್ತೋಡಿ, ಜಯಾನಂದ ಕುಲಾಲ್, ದಿನೆಶ್ ಕರ್ಮಲ, ವಿಜಯ ಪಡೀಲು, ಅಶೋಕ್ ಕುಂದ್ರುಕೋಟೆ, ಭಾಸ್ಕರ ಮುಂತಾದವರು ಉಪಸ್ಥಿತರಿದ್ದರು. ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.