ಲಾಹೋರ್: ಇಸ್ಲಾಮಾಬಾದ್ ಜೈಲಿನಲ್ಲಿರುವ 26/11ರ ಮುಂಬಯಿ ದಾಳಿಯ ಮಾಸ್ಟರ್ಮೈಂಡ್ ಝಾಕಿಯುರ್ ರೆಹಮಾನ್ ಲಖ್ವಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಲಾಹೋರ್ ಹೈಕೋರ್ಟ್ ಪಾಕಿಸ್ಥಾನ ಸರ್ಕಾರಕ್ಕೆ ಗುರುವಾರ ಸೂಚಿಸಿದೆ.
ಭಾರತದ ಒತ್ತಡದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದ ಮೇರೆಗೆ ಪಾಕಿಸ್ಥಾನ ಲಖ್ವಿಯನ್ನು ಜೈಲಿನಲ್ಲಿ ಇಟ್ಟಿತ್ತು. ಆದರೆ ಆತನ ವಿರುದ್ಧ ಸರಿಯಾದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸುವಲ್ಲಿ ಪಾಕ್ ವಿಫಲವಾಗಿದೆ. ಹೀಗಾಗೀ ನ್ಯಾಯಾಧೀಶ ಮೊಹಮ್ಮದ್ ಅನ್ವರುಲ್ ಹಕ್ ಆತನನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೂಲಗಳ ಪ್ರಕಾರ ಇಂದು ಅಥವಾ ನಾಳೆ ಲಖ್ವಿಯನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಲಖ್ವಿ ಮುಂಬಯಿ ದಾಳಿಯ ಪ್ರಮುಖ ಆರೋಪಿಯಾಗಿದ್ದಾನೆ. ಈತನ ವಿರುದ್ಧದ ಹಲವಾರು ಸಾಕ್ಷ್ಯಾಧಾರಗಳನ್ನು ಭಾರತ ಪಾಕಿಸ್ಥಾನಕ್ಕೆ ಸಲ್ಲಿಸಿದೆ. ಆದರೂ ಆತನ ಆರೋಪವನ್ನು ಸಾಬೀತುಪಡಿಸುವಲ್ಲಿ ಪಾಕ್ ವಿಫಲವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.