News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 11th November 2026

×
Home About Us Advertise With s Contact Us

ಢಾಕಾದ ಸ್ಲಂ ತೋರಿಸಿ ಭಾರತ ಎನ್ನುತ್ತಿರುವ ಚೀನಿ ವ್ಲಾಗರ್‌ಗಳು: ಕ್ರಮಕ್ಕೆ ಆಗ್ರಹ

ನವದೆಹಲಿ: ಢಾಕಾದ ಕೊಳೆಗೇರಿ ಪ್ರದೇಶಗಳಲ್ಲಿ ತಿಂಗಳುಗಟ್ಟಲೆ ಚಿತ್ರೀಕರಣ ನಡೆಸಿ, ಆ ಸ್ಥಳಗಳನ್ನು ಭಾರತದ ರಾಜಧಾನಿ ನವದೆಹಲಿಯ ಭಾಗಗಳೆಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ಸ್ಟ್ರೀಮ್ ಮಾಡುತ್ತಿರುವ ಚೀನೀ ವ್ಲಾಗರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತವು ಬಾಂಗ್ಲಾದೇಶವನ್ನು ಒತ್ತಾಯಿಸಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ತಮ್ಮ ಸಚಿವಾಲಯದ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಈ ಘಟನೆಯನ್ನು “ದುರದೃಷ್ಟಕರ” ಎಂದು ಬಣ್ಣಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು, “ಯಾವುದೇ ದೇಶದ ಬಗ್ಗೆ ತಪ್ಪಾದ ಚಿತ್ರಣವನ್ನು ನೀಡಲು ನಡೆಸುವ ಇಂತಹ ಪ್ರಯತ್ನಗಳು ದುರದೃಷ್ಟಕರ,” ಎಂದು ಹೇಳಿದ್ದಾರೆ.

“ಢಾಕಾವನ್ನು ದೆಹಲಿ ಎಂದು ಬಿಂಬಿಸಲು ನಡೆಸುವ ಇಂತಹ ಪ್ರಯತ್ನಗಳು, ಸುಳ್ಳು ನಿರೂಪಣೆಗಳನ್ನು ಹರಡುವವರ ಹಾಗೂ ಅವರ ಹಿಂದೆ ಇರುವವರ ವಿಶ್ವಾಸಾರ್ಹತೆಯನ್ನೇ ಕುಂದಿಸುತ್ತವೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ,” ಎಂದು ಜೈಸ್ವಾಲ್ ಹೇಳಿದ್ದಾರೆ.

ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಚೀನೀ ವ್ಲಾಗರ್‌ಗಳು ಮತ್ತು ಲೈವ್‌ಸ್ಟ್ರೀಮರ್‌ಗಳು ಢಾಕಾದ ಬಡ ಬಡಾವಣೆಗಳಲ್ಲಿ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದು, ಆ ಸ್ಥಳಗಳನ್ನು ನವದೆಹಲಿಯ ಭಾಗಗಳೆಂದು ಸುಳ್ಳಾಗಿ ಬಿಂಬಿಸುತ್ತಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top