News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 10th November 2026

×
Home About Us Advertise With s Contact Us

ಭಾರತದ ಜಲ ನಿರ್ವಹಣಾ ಯಶಸ್ಸನ್ನು ಶ್ಲಾಘಿಸಿದ ವಿಶ್ವ ಬ್ಯಾಂಕ್

ನವದೆಹಲಿ: ಭಾರತದ ಜಲ ನಿರ್ವಹಣಾ ಉಪಕ್ರಮಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾದರಿಯಾಗಿ ಹೊರಹೊಮ್ಮಿವೆ. ವಿಶ್ವ ಬ್ಯಾಂಕ್‌ನ ಜಲ ವಿಭಾಗದ ಜಾಗತಿಕ ನಿರ್ದೇಶಕರಾದ ಸರೋಜ ಕುಮಾರ್ ಝಾ ಅವರು, ಭಾರತದ ಪ್ರಗತಿಯನ್ನು ಒಂದು ಗಮನಾರ್ಹ ಯಶೋಗಾಥೆ ಎಂದು ಬಣ್ಣಿಸಿದ್ದಾರೆ.

2026ರ ವಿಶ್ವಸಂಸ್ಥೆಯ ಜಲ ಸಮ್ಮೇಳನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ‘ಜಲ ಜೀವನ್ ಮಿಷನ್’, ‘ನಮಾಮಿ ಗಂಗೆ’ ಮತ್ತು ‘ಸ್ವಚ್ಛ ಭಾರತ ಮಿಷನ್’ನಂತಹ ಉಪಕ್ರಮಗಳನ್ನು ಶ್ಲಾಘಿಸಿದ್ದಾರೆ.

‘ಜಲ ಜೀವನ್ ಮಿಷನ್’ ಮೂಲಕ ಏಳು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ 80 ಕೋಟಿ  ಜನರಿಗೆ ಸುಧಾರಿತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು. ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಪ್ರಯತ್ನಗಳು ಹಾಗೂ ಸುಮಾರು 900 ಅಣೆಕಟ್ಟುಗಳ ಸುರಕ್ಷತೆಯನ್ನು ಬಲಪಡಿಸುವ ಕ್ರಮಗಳನ್ನೂ ಅವರು ಮೆಚ್ಚಿಕೊಂಡರು.

ಡಿಸೆಂಬರ್ 8 ರಿಂದ 10 ರವರೆಗೆ ಅಬುಧಾಬಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ, ಭಾರತವು ತನ್ನ ಅನುಭವಗಳನ್ನು ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳಬೇಕೆಂದು  ಝಾ ಮನವಿ ಮಾಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top