ಮುಂಬಯಿ: ಆಕೆಯ ದಿನಚರಿ ಬೆಳಿಗ್ಗೆ 5 ಗಂಟೆಗೆ ಆರಂಭವಾಗುತ್ತದೆ, ಹಳೆ ಎಲೆಕ್ಟ್ರಾನಿಕ್ ವಸ್ತುಗಳನ್ನು, ಪ್ಲಾಸ್ಟಿಕ್, ಬಾಟಲ್ಗಳನ್ನು ಹೆಕ್ಕುವುದು ಮತ್ತು ಅದನ್ನು ಗುಜರಿ ಅಂಗಡಿಗೆ ಮಾರಾಟ ಮಾಡುವುದು ಆಕೆಯ ಕಾಯಕ.
ಮಧ್ಯಾಹ್ನದವರೆಗೆ ತನ್ನ ಮಾಮೂಲಿ ಕಾರ್ಯವನ್ನು ಮಾಡುವ54 ವರ್ಷದ ಸೊಜಲ್ ಯಶವಂತ್ ಭಲೆರಾವ್ ಮಧ್ಯಾಹ್ನದ ಬಳಿಕ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಾಳೆ. ಬೇರೆ ರಾಜಕಾರಣಿಗಳ ಪರವಾಗಿ ಅಲ್ಲ, ಸ್ವತಃ ತನಗಾಗಿಯೇ ಆಕೆಯ ಪ್ರಚಾರ ಮಾಡುತ್ತಾಳೆ. ಈಕೆ ಕಲ್ಯಾಣ್ ದೊಂಬಿವ್ಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ವಾರ್ಡ್ ನಂ.73ರಲ್ಲಿ ಇವರು ಸ್ಪರ್ಧಿಸಿದ್ದಾರೆ. ನವೆಂಬರ್ 1ರಂದು ಇಲ್ಲಿ ಚುನಾವಣೆ ನೆರವೇರಲಿದೆ.
ತನ್ನ ಪ್ರದೇಶದಲ್ಲಿ ನೈರ್ಮಲ್ಯದ ಕೊರತೆ ಆಕೆಯನ್ನು ಚುನಾವಣೆಗೆ ಸ್ಪರ್ಧಿಸುವಂತೆ ಪ್ರೇರೆಪಿಸಿತು. ಗೆದ್ದ ಬಳಿಕ ಈ ಪ್ರದೇಶದ ಶೌಚಾಲಯಗಳಿಗೆ ಬಾಗಿಲು ಮಾಡಿಸಬೇಕು, ಮಕ್ಕಳ ಮಾರಣಹೋಮಕ್ಕೆ ಕಾರಣವಾಗುತ್ತಿರುವ, ಡೆಂಗ್ಯೂ ರೋಗ ಸೃಷ್ಟಿಸುತ್ತಿರುವ ಗಠರಗಳನ್ನು ಮುಚ್ಚಬೇಕು ಎಂಬುದು ಈಕೆಯ ಗುರಿಯಾಗಿದೆ.
ಕೇವಲ ಮೂರನೇ ತರಗತಿ ಓದಿರುವ ಸೊಜಲ್ ಕಳೆದ 30 ವರ್ಷಗಳಿಂದ ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ನಿಂತ ಅವರಿಗೆ ಆರ್ಥಿಕವಾಗಿ ಸಹಾಯ ಮಾಡುವವರು ಯಾರೂ ಇಲ್ಲ. ಚಿಂದಿ ಆಯ್ದು ಬಂದ ಹಣದಿಂದಲೇ ಸರಳ ಪ್ರಚಾರವನ್ನು ಮಾಡುತ್ತಿದ್ದಾರೆ. ಹಣವನ್ನು ಕೂಡಿಟ್ಟು ಚುನಾವಣೆ ಸ್ಪರ್ಧಿಸಲು ರೂ.2,500ಡಿಪೋಸಿಟ್ ಕಟ್ಟಿದ್ದಾರೆ.
ಅವರ ವಿರುದ್ಧ ನಿಂತಿರುವವರೆಲ್ಲರೂ ಶ್ರೀಮಂತರು ಆದರೂ ಅವರ ನಡುವೆ ನಾನು ಆರಿಸಿ ಬರುತ್ತೇನೆ ಎಂಬ ನಂಬಿಕೆ ಅವರಿಗಿದೆ. ಶ್ರೀಮಂತರು ಎಂದಿಗೂ ಸ್ಲಮ್ನಲ್ಲಿ ವಾಸಿಸಲ್ಲ, ನಮ್ಮ ಕಷ್ಟ ಅವರಿಗಳಿಗೆ ಗೊತ್ತಿಲ್ಲ. ಹೀಗಾಗಿ ಜನ ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಅವರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.