ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶ್ರೀ ಗುರು ಗೋಬಿಂದ್ ಸಿಂಗ್ ಅವರ ಪ್ರಕಾಶ್ ಪೂರಭ್ ಶುಭ ಸಂದರ್ಭದಲ್ಲಿ ಸಾಹಿಬ್ ಜಾದಾ ಜೋರಾವರ್ ಸಿಂಗ್ ಮತ್ತು ಸಾಹಿಬ್ ಜಾದಾ ಫತೇಹ್ ಸಿಂಗ್ ಅವರು ಹುತಾತ್ಮರಾದ ದಿನದ ಸ್ಮರಣಾರ್ಥ ಈ ವರ್ಷದಿಂದ ಡಿಸೆಂಬರ್ 26ನ್ನು ‘ವೀರ್ ಬಾಲ್ ದಿವಸ್’ (ವೀರ ಬಾಲಕರ ದಿನ) ಎಂದು ಆಚರಿಸಲಾಗುತ್ತದೆ ಎಂದು ಘೋಷಿಸಿದರು.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಶ್ರೀ ಗುರು ಗೋಬಿಂದ್ ಸಿಂಗ್ ಅವರ ಪ್ರಕಾಶ ಪೂರಬ್ನ ಪವಿತ್ರ ದಿನವಾದ ಇಂದು, ಈ ವರ್ಷದಿಂದ ಮೊದಲ್ಗೊಂಡು ಡಿಸೆಂಬರ್ 26 ರಂದು ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುವುದು ಎಂದು ತಿಳಿಸಲು ಹೆಮ್ಮೆಪಡುತ್ತೇನೆ. ಇದು ಸಾಹೀಬ್ ಜಾದೇಗಳ ಶೌರ್ಯಕ್ಕೆ ಮತ್ತು ಅವರ ನ್ಯಾಯ ಶೋಧನೆಗೆ ಸೂಕ್ತ ಗೌರವವಾಗಿದೆ ಎಂದಿದ್ದಾರೆ.
‘ವೀರ್ ಬಾಲ್ ದಿವಸ್’ ಅನ್ನು ಸಾಹಿಬ್ ಜಾದಾ ಜೋರಾವರ್ ಸಿಂಗ್ ಮತ್ತು ಸಾಹಿಬ್ ಜಾದಾ ಫತೇಹ್ ಸಿಂಗ್ ಅವರನ್ನು ಗೋಡೆಯಲ್ಲಿ ಜೀವಂತವಾಗಿ ಸಮಾಧಿ ಮಾಡಿದ ಕಾರಣದಿಂದ ಹುತಾತ್ಮರಾದ ದಿನವಾಗಿದೆ. ಈ ಇಬ್ಬರು ಶ್ರೇಷ್ಠರು ಧರ್ಮದ ಉದಾತ್ತ ತತ್ವಗಳಿಂದ ವಿಮುಖರಾಗುವ ಬದಲು ಸಾವಿಗೆ ಶರಣಾದರು.
ಮಾತಾ ಗುರುಜಿ, ಶ್ರೀ ಗುರು ಗೋಬಿಂದ್ ಸಿಂಗ್ ಮತ್ತು 4 ಸಾಹಿಬ್ ಜಾದೆಗಳ ಶೌರ್ಯ ಮತ್ತು ಆದರ್ಶಗಳು ಲಕ್ಷಾಂತರ ಜನರಿಗೆ ಚೈತನ್ಯ ನೀಡುತ್ತವೆ. ಅವರು ಎಂದೂ ಅನ್ಯಾಯಕ್ಕೆ ತಲೆಬಾಗಲಿಲ್ಲ. ಅವರು ಸಮಗ್ರ ಮತ್ತು ಸಾಮರಸ್ಯದ ಜಗತ್ತನ್ನು ಕಲ್ಪಿಸಿಕೊಂಡಿದ್ದರು. ಅವರ ಬಗ್ಗೆ ಹೆಚ್ಚಿನ ಜನರು ತಿಳಿದುಕೊಳ್ಳುವುದು ಇಂದಿನ ಅಗತ್ಯವಾಗಿದೆ..” ಎಂದು ಟೀಟ್ ಮಾಡಿದ್ದಾರೆ.
Today, on the auspicious occasion of the Parkash Purab of Sri Guru Gobind Singh Ji, I am honoured to share that starting this year, 26th December shall be marked as ‘Veer Baal Diwas.’ This is a fitting tribute to the courage of the Sahibzades and their quest for justice.
— Narendra Modi (@narendramodi) January 9, 2022
‘Veer Baal Diwas’ will be on the same day Sahibzada Zorawar Singh Ji and Sahibzada Fateh Singh Ji attained martyrdom after being sealed alive in a wall. These two greats preferred death instead of deviating from the noble principles of Dharma.
— Narendra Modi (@narendramodi) January 9, 2022
The bravery and ideals of Mata Gujri, Sri Guru Gobind Singh Ji and the 4 Sahibzades give strength to millions of people. They never bowed to injustice. They envisioned a world that is inclusive and harmonious. It is the need of the hour for more people to know about them.
— Narendra Modi (@narendramodi) January 9, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.