ನವದೆಹಲಿ: ಈ ವರ್ಷದ ಫೆಬ್ರವರಿವರೆಗೆ ಅಟಲ್ ಪಿಂಚಣಿ ಯೋಜನೆಯಡಿ 57 ಸಾವಿರ ಲಕ್ಷ ರೂಪಾಯಿಗಳನ್ನು ವಿತರಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ವಿಷಯ ತಿಳಿಸಿದ್ದಾರೆ. ಅಟಲ್ ಪಿಂಚಣಿ ಯೋಜನೆ 2015 ರ ಮೇ 9 ರಂದು ಪ್ರಾರಂಭವಾದ ಸರ್ಕಾರಿ ಯೋಜನೆಯಾಗಿದ್ದು, 2015 ರ ಜೂನ್ 1 ರಿಂದ ಜಾರಿಗೆ ಬಂದಿತು ಎಂದು ಅವರು ಹೇಳಿದರು.
ಇದು 18 ರಿಂದ 40 ವರ್ಷದೊಳಗಿನ ಭಾರತದ ಎಲ್ಲಾ ನಾಗರಿಕರಿಗೆ ಮುಕ್ತವಾಗಿದೆ, ಆದರೆ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದುವುದು ಅವಶ್ಯಕ. ಯೋಜನೆಯ ಪ್ರಯೋಜನಗಳು ಚಂದಾದಾರರಿಗೆ 60 ವರ್ಷ ದಾಟಿದ ನಂತರ ಸಿಗುತ್ತದೆ ಮತ್ತು ಯೋಜನೆಯಡಿ ಐದು ಪಿಂಚಣಿ ಯೋಜನೆಗಳು ಲಭ್ಯವಿದ್ದು, ಒಂದು ಸಾವಿರದಿಂದ ಐದು ಸಾವಿರ ರೂಪಾಯಿಗಳವರೆಗೆ ಪಿಂಚಣಿ ಸಿಗಲಿದೆ.
2015 ರ ಜೂನ್ 1 ರಿಂದ 2016 ರ ಮಾರ್ಚ್ 31 ರವರೆಗೆ ಈ ಯೋಜನೆಯಲ್ಲಿ ಸೇರ್ಪಡೆಗೊಂಡ ಚಂದಾದಾರರಿಗೆ ಕೇಂದ್ರ ಸರ್ಕಾರವು ಒಟ್ಟು ಕೊಡುಗೆಯಲ್ಲಿ 50 ಪ್ರತಿಶತ ಅಥವಾ ವಾರ್ಷಿಕ ಒಂದು ಸಾವಿರ ರೂಪಾಯಿ ನೀಡಿ ಸಹಕರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.