ಮತಾಂತರ ಮಾಫಿಯಾದ ಕೈಗೊಂಬೆಯಂತೆ ಆಂಧ್ರಪ್ರದೇಶ ಸರ್ಕಾರ ನಡೆದುಕೊಳ್ಳುತ್ತಿದೆ. ಮಕ್ಕಳ ಬ್ರೈನ್ವಾಶ್ ಮಾಡುವ ಕೆಲಸ ಎಳವೆಯಿಂದಲೇ ಆರಂಭಗೊಂಡಿದೆ. ತೆಲುಗು ಅಂಗನವಾಡಿ ಪಠ್ಯಪುಸ್ತಕದಲ್ಲಿ ಮಸೀದಿ ಮತ್ತು ಚರ್ಚ್ ಚಿತ್ರಗಳನ್ನು ಹಾಕಿ ದೇವಸ್ಥಾನಗಳನ್ನು ಕಡೆಗಣಿಸಿರುವುದೇ ಇದಕ್ಕೆ ಸಾಕ್ಷಿ.
ಈ ಪುಸ್ತಕಗಳನ್ನು ಆಂಧ್ರಪ್ರದೇಶ ಶಿಕ್ಷಣ ಇಲಾಖೆ ಮುದ್ರಿಸಿ, ಪ್ರಕಟಿಸಿದೆ ಮತ್ತು ವಿತರಿಸಿದೆ. ಅಂದರೆ ಇವರುಗಳು ಪುಸ್ತಕಗಳಲ್ಲಿ ದೇವಾಲಯಗಳು ಮತ್ತು ಹಿಂದೂಗಳಿಲ್ಲದ ಭಾರತವನ್ನು ಆಶಿಸುತ್ತಿದ್ದಾರೆಯೆ? ಈ ಕೃತ್ಯವನ್ನು ಮಿಷನರಿ-ಇಸ್ಲಾಮಿಕ್ ಕೈಗೊಂಬೆ ಆಡಳಿತವು ಯುವ ಮನಸ್ಸನ್ನು ವಿಷಪೂರಿತಗೊಳಿಸುವ ಅಪರಾಧ ಪ್ರಯತ್ನವೆಂದೇ ನೋಡಬೇಕಾಗುತ್ತದೆ.
ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಹಿಂದೂ ಹೆಸರನ್ನು ಕೇವಲ ಆಂಧ್ರ ಸಿಎಂ ಆಗುವ ಸಲುವಾಗಿ ಇನ್ನೂ ಇರಿಸಿಕೊಂಡಿದ್ದಾರೆ. ಆದರೆ ಅವರ ನಂಬಿಕೆ ಕ್ರೈಸ್ಥ ಧರ್ಮದ್ದು, ಅವರ ನಿಷ್ಠೆ ವ್ಯಾಟಿಕನ್ಗೆ. ಮತಾಂತರ ಮಾಫಿಯಾದ ಕೈಗೊಂಬೆಯಾಗಿ ಅವರು ಆಡಳಿತ ನಡೆಸುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಇದೆ.
2020 ರಲ್ಲಿ ಆಂಧ್ರದಲ್ಲಿ100 ಕ್ಕೂ ಹೆಚ್ಚು ದೇವಾಲಯದ ಕಳ್ಳತನ ಮತ್ತು ಅಪವಿತ್ರಗೊಳಿಸಿದ ಪ್ರಕರಣಗಳು ವರದಿಯಾಗಿವೆ ಮತ್ತು ಇಂತಹ ಪ್ರಕರಣಗಳು ಸ್ಥಿರವಾಗಿ ಹೆಚ್ಚುತ್ತಿವೆ. ಆಂಧ್ರ ಸರ್ಕಾರವು ಕ್ರಿಶ್ಚಿಯನ್ನರಿಗೆ ಹೆಚ್ಚಿನ ಚರ್ಚುಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ. ದೇಗುಲಗಳಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕಿಂಚಿತ್ತು ಪ್ರಯತ್ನವನ್ನೂ ಅದು ನಡೆಸುತ್ತಿಲ್ಲ.
ವದಂತಿಗಳ ಪ್ರಕಾರ ಈಗಾಗಲೇ 25% ಸ್ಥಳಿಯ ಜನಸಂಖ್ಯೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದು, ಇದು ಕೇವಲ ಕಾಗದಗಳಲ್ಲಿ ಹಿಂದೂ ಆಗಿ ಉಳಿದಿದೆ. ಮತಾಂತರ ಮಾಫಿಯಾ ಬಡ ಹಿಂದೂಗಳು ಮತ್ತು ಎಸ್ಸಿ/ಎಸ್ಟಿ ಜನರನ್ನು ಹೆಚ್ಚು ಟಾರ್ಗೆಟ್ ಮಾಡಿ ಮತಾಂತರ ಮಾಡುತ್ತಿದೆ. ಹೀಗೆ ಮತಾಂತರವಾದವರಿಗೆ ಸರ್ಕಾರ ಮತ್ತು ವ್ಯಾಟಿಕನ್ನಿಂದ ಹಲವು ಸೌಲಭ್ಯಗಳು ದೊರೆಯುತ್ತಿವೆ. ಹಿಂದೂ ಹೆಸರನ್ನು ಹಾಗೆಯೇ ಇಟ್ಟುಕೊಂಡು ಇವರುಗಳು ಚರ್ಚ್ ಪ್ರಾರ್ಥನೆಗಳಲ್ಲಿ, ಹಬ್ಬಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ. ಹಿಂದೂ ದೇವರನ್ನು ಕಡೆಗಣಿಸುತ್ತಾರೆ.
ಜಗನ್ ಕುಟುಂಬದಲ್ಲಿ ಮತಾಂತರ ಇತ್ತೀಚೆಗೆ ಪ್ರಾರಂಭವಾದ ವ್ಯವಸ್ಥೆಯಲ್ಲ. ಜಗನ್ ಅವರ ಅಜ್ಜ-ಅಜ್ಜಿಯರ ಅವಧಿಯಿಂದಲೂ ಇದು ಮುಂದುವರೆದುಕೊಂಡು ಬಂದಿದೆ. ಅವರಿಬ್ಬರೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿದ್ದರು. ಜಗನ್ ಅವರ ತಂದೆ, ವೈಎಸ್ಆರ್ ಅವರು ಸೋನಿಯಾ ಗಾಂಧಿ ಮತ್ತು ಆಂಧ್ರ ಮುಖ್ಯಮಂತ್ರಿಯ ಆಪ್ತ ಸಭಾಪತಿಯಾಗಿದ್ದರು. ಜಗನ್ ಅವರ ಸಹೋದರಿ, ಶರ್ಮಿಳಾ ಒಬ್ಬ ಕ್ರಿಶ್ಚಿಯನ್ ಆಗಿದ್ದಾರೆ ಮತ್ತು ಮತಾಂತರಿ ಅನಿಲ್ ಅವರನ್ನು ಮದುವೆಯಾಗಿದ್ದಾರೆ. ರಾಜ್ಯದ ಗೃಹ ಸಚಿವರು ಕ್ರಿಶ್ಚಿಯನ್ ಮತ್ತು ಅನೇಕ ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಮತಾಂತರಿಗಳು.
ಜಗನ್ ಅವರ ತಾಯಿ ವಿಜಯಮ್ಮ ಅವರು ಯಾವಾಗಲೂ ಬೈಬಲ್ ಅನ್ನು ಹೊತ್ತೊಯ್ಯುತ್ತಾರೆ ಮತ್ತು 2019 ರಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಅದನ್ನು ಹಿಡಿದಿದ್ದರು. ಜಗನ್ ಸ್ವತಃ “ನಾನು ನನ್ನ ಬೈಬಲ್ ಅನ್ನು ಪ್ರಾರ್ಥಿಸುತ್ತೇನೆ ಮತ್ತು ಓದುತ್ತೇನೆ” ಎಂದು ಹೇಳಿದ್ದಾರೆ. ಈ ಮೂಲಕ ತನ್ನ ಉದ್ದೇಶಗಳನ್ನು ಎಲ್ಲರಿಗೂ ಸ್ಪಷ್ಟವಾಗಿ ತಿಳಿಸಿದ್ದಾರೆ. ಸಿಎಂ ಆದ ನಂತರ ಅವರು ಇತರರೊಂದಿಗೆ ಸೇರಿಕೊಂಡು ಯೇಸುವಿನ ಜನ್ಮಸ್ಥಳವೆಂದು ಭಾವಿಸಲಾದ ಬೆಥ್ಲಹ್ಯಾಮ್ಗೆ ಭೇಟಿ ನೀಡಿದ್ದರು. ಅವರು ಯುಎಸ್ ಪ್ರವಾಸದ ವೇಳೆ ಅವರು ಭಾರತೀಯ ಸಾಂಪ್ರದಾಯಿಕ ರೀತಿಯಲ್ಲಿ ದೀಪಗಳನ್ನು ಬೆಳಗಿಸಲು ಇಷ್ಟಪಡಲಿಲ್ಲ ಮತ್ತು ‘ಎಲೆಕ್ಟ್ರಾನಿಕ್ ಡಯಾಸ್’ ಆಯ್ಕೆ ಮಾಡಿದ್ದಾರೆ. ಇದು ಅವರ ವ್ಯಾಟಿಕನ್ ಪ್ರೇರಿತ ಮನಸ್ಥಿತಿಗೆ ಉದಾಹರಣೆ.
ತಿರುಪತಿಗೆ ಸಂಚರಿಸುವ ಇತ್ತೀಚಿನ ಸರ್ಕಾರಿ ಬಸ್ ಟಿಕೆಟ್ಗಳಲ್ಲಿ ಮತಾಂತರ ಮಾಫಿಯಾದ ಗುರುತುಗಳನ್ನು ಮುದ್ರಿಸಿರುವುದು ಕಾಕತಾಳೀಯವಲ್ಲ. ಇದರಲ್ಲಿ ತೆಲುಗಿನಲ್ಲಿ ಆಂಧ್ರಪ್ರದೇಶದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜೆರುಸಲೆಮ್ಗೆ ತೀರ್ಥಯಾತ್ರೆ ನಡೆಯುತ್ತಿದೆ. ಇದನ್ನು ಕ್ರಿಶ್ಚಿಯನ್ನರಿಗಾಗಿ ಮಾಡಲಾಗುತ್ತಿತ್ತು ಮತ್ತು ಒಬ್ಬರ ಇಡೀ ಕುಟುಂಬದೊಂದಿಗೆ ಕನಿಷ್ಠ ವೆಚ್ಚದಲ್ಲಿ ಪ್ರಯಾಣವನ್ನು ಕೈಗೊಳ್ಳಬಹುದು ಎಂದು ಬರೆಯಲಾಗಿತ್ತು. ಇದಕ್ಕೆ ರಾಜ್ಯವು ಸಾಕಷ್ಟು ಆರ್ಥಿಕ ಸಹಾಯವನ್ನು ಕೂಡ ನೀಡುತ್ತದೆ.
ಇಂತಹ ಸರ್ಕಾರಿ ಪ್ರಾಯೋಜಿತ ಮತಾಂತರ ಮಾಫಿಯಾದ ವಿರುದ್ಧ ಜನ ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆ ಪರಿಸ್ಥಿತಿ ಗಂಭೀರವಾಗಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.