ಅದು 2019 ರ ಡಿಸಂಬರ್ ತಿಂಗಳು ಲೋಕಸಭೆಯಲ್ಲಿ CAA ಅಂಗೀಕಾರವಾಯಿತು. ಇದರ ಬೆನ್ನಿಗೇ ತಲೆ ಬಿಸಿ ಹೆಚ್ಚಾದ ಕಾಂಗ್ರೆಸ್ ಹಾಗೂ ಎಡ ಪಕ್ಷಗಳಿಗೆ ಏನಾದರೂ ಮಾಡಬೇಕಲ್ಲ ಎಂದು ಯೋಚನೆ ಮಾಡಿ ಸುಳ್ಳು ಸುದ್ಧಿಗಳನ್ನು ಹಬ್ಬಿಸುವ ಕೆಲಸ ಮಾಡತೊಡಗಿದರು. ಮುಸಲ್ಮಾನರನ್ನು ದೇಶದಿಂದ ಹೊರಗೆ ಹಾಕುತ್ತಾರೆ, ನಿಮಗೆ ಈ ದೇಶದಲ್ಲಿ ಉಳಿಗಾಲವಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿ ಸರ್ಕಾರದ ವಿರುದ್ಧ ದೊಂಬಿ ಏಳಿಸುವ ತಂತ್ರ ಮಾಡಿ ಮಜಾ ತೆಗೆದುಕೊಳ್ಳುವ ಕೆಲಸ ಮಾಡಿತು.
ಕರ್ನಾಟಕದ ಮಂಗಳೂರಿನಿಂದ ಹಿಡಿದು ದೆಹಲಿಯವರೆಗೂ ಸಾಕಷ್ಟು ಕಡೆಗಳಲ್ಲಿ ಹಿಂಸಾಚಾರಗಳು ನಡೆದವು. ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ನಾವೇನೂ ಹೊಸದಾಗಿ ಹೇಳಬೇಕಾಗಿಲ್ಲ.
ದೇಶದ ರಾಜಧಾನಿ ದೆಹಲಿಯಲ್ಲಿ ಪೌರತ್ವದ ಹೆಸರಿನಲ್ಲಿ ನಡೆದ ಹಿಂಸಾಚಾರದಲ್ಲಿ 53 ಮಂದಿಯ ಜೀವಹಾನಿ ಆಯಿತು. ಈ ಕೃತ್ಯ ದೇಶದ್ರೋಹವಲ್ಲದೆ ಮತ್ತೇನು.? ದೆಹಲಿ ಧಂಗೆಗೆ ಬೇರೆ ಬೇರೆ ರಾಷ್ಟ್ರಗಳಿಂದ ಹಣ ಬಂದದ್ದನ್ನು ಹಲವಾರು ಪತ್ರಿಕೆಗಳು ವರದಿ ಮಾಡಿವೆ ಹಾಗೂ ಪೋಲೀಸರು ಸಹ ತಮ್ಮ ಚಾರ್ಜ್ ಶೀಟ್ ನಲ್ಲಿಯೂ ಉಲ್ಲೇಖ ಮಾಡಿದ್ದಾರೆ. ಅಂದರೆ ದೇಶ ವಿರೋಧಿ ಕೃತ್ಯ ಮಾಡಲು ಫಾರಿನ್ ಫಂಡಿಂಗ್ ಬರುತ್ತದೆ ಎಂದರೆ ಅರ್ಥವೇನು?. CAA ಕಾಯ್ದೆಯನ್ನು ನೆಪವಾಗಿಸಿಕೊಂಡು ದೇಶ ವಿರೋಧಿ ಕೃತ್ಯ ಮಾಡಿದರಷ್ಟೇ, ಎಲ್ಲದಕ್ಕಿಂತಾ ಹೆಚ್ಚಾಗಿ ನಮ್ಮ ದೇಶದ ಕೆಲವು ರಾಜಕೀಯ ಪಕ್ಷಗಳೇ ಇದರಲ್ಲಿ ಭಾಗಿಯಾಗಿದ್ದು ಇನ್ನೂ ವಿಷಾದನೀಯ ಸಂಗತಿ. ನಮ್ಮ ಮನೆಗೆ ಅತಿಥಿಯಾಗಿ ಒಂದೆರಡು ದಿನ ಯಾರಾದರೂ ಬಂದುಳಿದರೆ ಸಮಸ್ಯೆಯಿಲ್ಲ. ಆದರೆ ಅವರೇ ನಮ್ಮ ಮನೆಯನ್ನು ಆಕ್ರಮಿಸಿ ನಮ್ಮನ್ನೇ ಹೊರದಬ್ಬಿದರೆ?. ಈ ರೀತಿ ದೇಶದಲ್ಲಿ ಅಕ್ರಮವಾಗಿ ವಲಸೆ ಬಂದು ಇಲ್ಲಿನ ಸೌಲತ್ತುಗಳನ್ನು ಪಡೆದು ಇಲ್ಲಿನವರನ್ನೇ ಹೊರ ಹಾಕುವ ಪರಿಸ್ಥಿತಿ ಬರಬಾರದು ಎಂಬುದಕ್ಕೊಸ್ಕರ ನಮಗೆ CAA ಬೇಕೇ ಬೇಕು.
ಇನ್ನು ಇದೀಗ ಹೊಸ ರೈತ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಹೊಸ ರೈತ ಮಸೂದೆ ರೈತರಿಗೆ ವರವೇ ಹೊರತು ಶಾಪವಲ್ಲ. ರೈತ ಎಲ್ಲಿ ಬೇಕಾದರಲ್ಲಿ ಹೆಚ್ಚಿನ ಬೆಲೆಗೆ ತನ್ನ ಬೆಳೆಯನ್ನು ಮಾರಬಹುದು ಎಂಬುದು ವರವೇ ಶಾಪವೇ?. ಸಣ್ಣ ಮಕ್ಕಳಿಗೆ ಕೇಳಿದರೂ ಇದು ವರವೇ ಎನ್ನುತ್ತಾರೆ ಹೊರತು ಶಾಪ ಎನ್ನುವುದಿಲ್ಲ. CAA ಗಲಾಟೆಯ ನಂತರ ಕಾಂಗ್ರೆಸ್ ಹಾಗೂ ಎಡಚರರು ರೈತರನ್ನು ತನ್ನ ದಾಳವಾಗಿ ಬಳಸಿಕೊಳ್ಳುತ್ತಿದೆ. ಹೋದ ಬಾರಿ ಹೇಗೆ CAA ಯಲ್ಲಿ ಗಲಾಟೆ ಆಯಿತೋ, ಅದೇ ರೀತಿ ಇಂದು ದೆಹಲಿಯಲ್ಲಿ ಗಲಾಟೆ ನಡೆಯುತ್ತಿದೆ. ಸಾವಿರಾರು ಟ್ರ್ಯಾಕ್ಟರ್ಗಳು ದೆಹಲಿಯಲ್ಲಿ ಬೇಕಾಬಿಟ್ಟಿ ಓಡಾಟ ನಡೆಸುತ್ತಿವೆ.
ಪೊಲೀಸರ ಮೇಲೆ ಟ್ರ್ಯಾಕ್ಟರ್ಗಳನ್ನು ಹತ್ತಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಯಾವ ಸೀಮೆಯ ಪ್ರತಿಭಟನೆ? ಪ್ರತಿಭಟಿಸಲು ರೀತಿ ರಿವಾಜು ಇಲ್ಲವೇ? ಗಣತಂತ್ರ ದಿನದ ಪರೇಡ್ ಮುಗಿದ ಕೆಲವೇ ಹೊತ್ತಿನಲ್ಲಿ ಕೆಂಪು ಕೋಟೆಯ ಬಳಿ ಮುತ್ತಿಕ್ಕಿ ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವ ಜಾಗದಲ್ಲಿ ರೈತರಿಗೆ ಸಂಬಂಧವೇ ಇಲ್ಲದ ಧ್ವಜ ಹಾರಿಸುವುದು ಎಷ್ಟು ಸರಿ!?
ಆದರೆ ಇದರಿಂದ ಮುಖ್ಯವಾಗಿ ಪ್ರಯೋಜನ ಪಡೆಯುತ್ತಿರುವುದು ಮಾತ್ರ ಕಾಂಗ್ರೆಸ್ ಹಾಗೂ ಎಡ ಪಕ್ಷಗಳೇ. ಅಟಲ್ ಜಿ ಒಮ್ಮೆ ಹೇಳಿದ್ದರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿನಿಂತ ಅಧಿಕಾರದಲ್ಲಿ ಇರದೇ ಇದ್ದಾಗ ಅವರ ಉಪಟಳ ಹೆಚ್ಚು ಎಂದು. ಅದೀಗ ಅಕ್ಷರಶಃ ಸತ್ಯ ಎನಿಸುತ್ತಿದೆ. ರೈತ ಮಸೂದೆಯಲ್ಲಿರುವ ಒಂದೆರಡು ಅಂಶವನ್ನು ಸರಿಯಾಗಿ ವಿಶ್ಲೇಷಣೆ ಮಾಡಿ ಎಂದರೆ ಕಾಂಗ್ರೆಸ್ನ ಓರ್ವನಿಗೂ ವಿಶ್ಲೇಷಿಸಲು ಬರುವುದಿಲ್ಲ ಕಾಣುತ್ತದೆ. ಆದರೆ ಸುಳ್ಳು ಸುದ್ಧಿಯನ್ನು ಮಾತ್ರ ಯಥೇಚ್ಛವಾಗಿ ಹರಡುತ್ತಿದೆ!
ಈ ದೇಶ ವಿರೋಧಿ ಶಕ್ತಿಗಳನ್ನು ನಾವು ಮಣಿಸಬೇಕಾದರೆ ನಮಗಿರುವದು ಒಂದೇ ದಾರಿ. ಪ್ರಧಾನಿ ಮೋದಿ ಸರ್ಕಾರದ ಯಾವುದೇ ಕಾಯ್ದೆ ಇರಲಿ ಅದು ಈಗಿನ ರೈತ ಮಸೂದೆ ಆಗಿರಬಹುದು ಅಥವಾ ಮುಂದೆ ಬರುವ ಏಕ ರೂಪ ನಾಗರಿಕ ಸಂಹಿತೆ ಇರಬಹುದು, ಆ ಕಾಯ್ದೆಗಳನ್ನು ಜನರಿಗೆ ಎಲ್ಲಾ ಮಾಧ್ಯಮಗಳ ಮೂಲಕ ತಲುಪಿಸುವ ಕೆಲಸ ಮಾಡಬೇಕಿದೆ. ನಾವು ಪ್ರಧಾನಿ ಮೋದಿಯನ್ನ ಆಯ್ಕೆ ಮಾಡಿದರೆ ಸಾಲದು, ಜೊತೆಗೆ ಈ ಕೆಲಸವನ್ನು ಮಾಡಿದರೆ ಮಾತ್ರ ದೇಶವನ್ನು ವಿಶ್ವಗುರುವಾಗಿ ನೋಡಲು ಸಾಧ್ಯ.
– ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.