ನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಶನ್ (ಒಆರ್ಒಪಿ) ಯೋಜನೆಯಡಿ ಕೇಂದ್ರ ಕಳೆದ 5ವರ್ಷಗಳಲ್ಲಿ ಸರ್ಕಾರವು 42,700 ಕೋಟಿ ರೂ.ಗಳನ್ನು 20.6 ಲಕ್ಷ ನಿವೃತ್ತ ರಕ್ಷಣಾ ಸಿಬ್ಬಂದಿಗೆ ವಿತರಿಸಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
OROP ಯೋಜನೆ ಅಡಿಯಲ್ಲಿ, ನಿವೃತ್ತರಾದ ಸೇನಾ ಸಿಬ್ಬಂದಿಗಳಿಗೆ ಏಕರೂಪದ ಪಿಂಚಣಿ ನೀಡಲಾಗುತ್ತದೆ.
ನವೆಂಬರ್ 7, 2015 ರಂದು, ಸರ್ಕಾರವು ಒಆರ್ಒಪಿ ಯೋಜನೆಯನ್ನು ಜಾರಿಗೊಳಿಸುವ ಘೋಷಣೆ ಮಾಡಿತ್ತು ಮತ್ತು ಇದು ಜುಲೈ 1, 2014 ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ತಿಳಿಸಿತ್ತು.
“ಒಆರ್ಒಪಿ ಖಾತೆಯ ವಾರ್ಷಿಕ ಪುನರಾವರ್ತಿತ ಖರ್ಚು ಸುಮಾರು 7,123 ಕೋಟಿ ರೂ. ಮತ್ತು ಜುಲೈ 1, 2014 ರಿಂದ ಪ್ರಾರಂಭವಾಗಿ ಸುಮಾರು ಆರು ವರ್ಷಗಳವರೆಗೆ ಒಟ್ಟು ವೆಚ್ಚವು ಸುಮಾರು 42,740 ಕೋಟಿ ರೂ.ಗಳಷ್ಟಿದೆ” ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಒಆರ್ಒಪಿ ಅನುಷ್ಠಾನದಿಂದಾಗಿ 20,6 ಲಕ್ಷ ರಕ್ಷಣಾ ಪಡೆ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರಿಗೆ ಬಾಕಿ 10,795 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.