
ನವದೆಹಲಿ: ಉತ್ತರಪ್ರದೇಶದ ಚಂದಿನಗರ್ನಲ್ಲಿ ಭಾರತೀಯ ವಾಯುಸೇನೆಯ ಎಲೈಟ್ ಕಮಾಂಡೋಗಳಾದ ಗರುಡ ತಂಡದ ಹೊಸ ಸದಸ್ಯರಿಗೆ ಮೆರೂನ್ ಬೆರೆಟ್ ಪರೇಡ್ ನಡೆಯಿತು. ಈ ವಿಶೇಷ ಸಮಾರಂಭದಲ್ಲಿ 127 ಗರುಡ್ ಕಮಾಂಡೋಗಳು ತಮ್ಮ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಅವರಿಗೆ ಮೆರೂನ್ ಬೆರೆಟ್, ವಿಶೇಷ ಬ್ಯಾಡ್ಜ್ ಮತ್ತು ಗರುಡ್ ಚಿಹ್ನೆಗಳನ್ನು ಪ್ರದಾನ ಮಾಡಲಾಯಿತು.
ಗರುಡ ಕಮಾಂಡೋಗಳು ವಾಯುಸೇನೆಯ ಅತ್ಯಂತ ಶಕ್ತಿಶಾಲಿ ಮತ್ತು ವಿಶೇಷ ತರಬೇತಿ ಪಡೆದ ಘಟಕ. ಇವರು ವಾಯುನೆಲೆ ರಕ್ಷಣೆ, ಉಗ್ರರ ವಿರುದ್ಧ ಕಾರ್ಯಾಚರಣೆ, ಹೋಸ್ಟೇಜ್ ರೆಸ್ಕ್ಯೂ ಮತ್ತು ಇತರ ಗುಪ್ತ ಕಾರ್ಯಾಚರಣೆಗಳನ್ನು ನಡೆಸುತ್ತಾರೆ.
ತುಂಬಾ ಕಠಿಣವಾದ ತರಬೇತಿಯ ನಂತರ ಈ ಧೈರ್ಯಶಾಲಿ ಯುವಕರು ಗರುಡ ಕಮಾಂಡೋಗಳಾಗಿ ಸೇರಿದ್ದಾರೆ. ಈ ಸಾಧನೆಗೆ ಭಾರತೀಯ ವಾಯುಸೇನೆ ಅಭಿನಂದನೆಗಳನ್ನು ಸಲ್ಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



