ನವದೆಹಲಿ: ಭಾರತೀಯ ಸೇನೆಯ ವೈದ್ಯರು ಪೂರ್ವ ಲಡಾಖ್ ಪ್ರದೇಶದ ಫಾರ್ವರ್ಡ್ ಸರ್ಜಿಕಲ್ ಸೆಂಟರ್ನಲ್ಲಿ 16,000 ಅಡಿಗಳಷ್ಟು ಎತ್ತರದಲ್ಲಿ ಸೈನಿಕನ ಅಪ್ಪೆಂಡಿಕ್ಸ್ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ತೆಗೆದುಹಾಕಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಅಕ್ಟೋಬರ್ 28 ರಂದು ಲೆಫ್ಟಿನೆಂಟ್ ಕರ್ನಲ್, ಮೇಜರ್ ಮತ್ತು ಕ್ಯಾಪ್ಟನ್ ಶ್ರೇಣಿಯ ವೈದ್ಯರ ತಂಡವು ತೀವ್ರ ತುರ್ತು ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಹವಾಮಾನ ವೈಪರೀತ್ಯದಿಂದಾಗಿ ಅಪ್ಪೆಂಡಿಕ್ಸ್ ಪೀಡಿತ ಸೈನಿಕನನ್ನು ಹೆಲಿಕಾಫ್ಟರ್ ಮೂಲಕ ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಪ್ರತಿಕೂಲ ಪರಿಸ್ಥಿತಿಯ ನಡುವೆ ಶಸ್ತ್ರಚಿಕಿತ್ಸೆ ಕಾರ್ಯವಿಧಾನವನ್ನು ನಿರ್ವಹಿಸುವುದು ಅಗತ್ಯವಾಗಿತ್ತು.
ಈ ಶಸ್ತ್ರಚಿಕಿತ್ಸೆ ನಡೆದ ಫಾರ್ವರ್ಡ್ ಸರ್ಜಿಕಲ್ ಕೇಂದ್ರದ ಜೊತೆಗೆ, ಭಾರತೀಯ ಸೇನೆಯು ಈ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಕ್ಷೇತ್ರ ಆಸ್ಪತ್ರೆಗಳನ್ನು ಸಹ ಹೊಂದಿದೆ. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ವಿಶೇಷ ಚಿಕಿತ್ಸೆಯನ್ನು ನೀಡುವ ಸಂಪೂರ್ಣ ಸಾಮರ್ಥ್ಯವನ್ನು ಇದು ಹೊಂದಿದೆ.
ಹಿಮಾವೃತ ಪ್ರದೇಶದ ಕಾರಣದಿಂದಾಗಿ ಸೈನಿಕರು ಆಗಾಗ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಸೇನಾ ವೈದ್ಯರು ಅವರ ಚಿಕಿತ್ಸೆಗೆ ಸದಾ ಸಿದ್ಧರಾಗಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.