ನವದೆಹಲಿ: ಕೊರೋನಾವೈರಸ್ ಮಾದರಿಗಳ ಪರೀಕ್ಷೆಯ ವಿಷಯದಲ್ಲಿ ಭಾರತವು ಹೊಸ ಮೈಲುಗಲ್ಲು ಸಾಧಿಸಿದೆ. ಒಂದೇ ದಿನದಲ್ಲಿ ಸುಮಾರು 8.5 ಲಕ್ಷ ಪರೀಕ್ಷೆಗಳ ನಡೆಸಿದೆ . ದಿನಕ್ಕೆ 10 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿಯತ್ತ ದಾಪುಗಾಲಿಡುತ್ತಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆಯ ಗರಿಷ್ಠ 8,48,728 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ಒಟ್ಟು ಪರೀಕ್ಷೆಗಳ ಸಂಖ್ಯೆಯನ್ನು 2.76 ಕೋಟಿಗೆ ತೆಗೆದುಕೊಡು ಹೋಗಿದೆ.
ಭಾರತವು ಆಗಸ್ಟ್ 13ರಂದು ಒಂದೇ ದಿನ 8 ಲಕ್ಷಕ್ಕೂ ಅಧಿಕ ಕೋವಿಡ್-19 ಪರೀಕ್ಷೆಗಳನ್ನು ನಡೆಸಿದ್ದು ನಿಜಕ್ಕೂ ಒಂದು ದಾಖಲೆಯಾಗಿದೆ. ದಿನಕ್ಕೆ ಒಂದು ಮಿಲಿಯನ್ ಪರೀಕ್ಷೆಗಳನ್ನು ನಡೆಸುವುದು ಪ್ರಧಾನಿ ಮೋದಿಯವರ ಗುರಿಯಾಗಿದೆ.
ಭಾರತ ಪ್ರತಿನಿತ್ಯ ಮಿಲಿಯನ್ ಜನಸಂಖ್ಯೆಗೆ 503 ಪರೀಕ್ಷೆಗಳನ್ನು ನಡೆಸುತ್ತಿದೆ, ಇದು ವಿಶ್ವಸಂಸ್ಥೆ ಶಿಫಾರಸ್ಸು ಮಾಡಿರುವುದಕ್ಕಿಂತ ಅಧಿಕ ಪಟ್ಟು ಹೆಚ್ಚು. ವಿಶ್ವಸಂಸ್ಥೆ ತಲಾ ಮಿಲಿಯನ್ಗೆ 140 ಪರೀಕ್ಷೆ ನಡೆಸಲು ಶಿಫಾರಸ್ಸು ಮಾಡಿದೆ.
ಇದುವರೆಗೆ ಭಾರತವು 27.2 ಮಿಲಿಯನ್ ಪರೀಕ್ಷೆಗಳನ್ನು ನಡೆಸಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
“ಟೆಸ್ಟ್, ಟ್ರ್ಯಾಕ್ ಮತ್ತು ಟ್ರೀಟ್” ಕಾರ್ಯತಂತ್ರದ ಯಶಸ್ವಿ ಅನುಷ್ಠಾನಕ್ಕೆ ಒಂದು ಪ್ರಮುಖ ಉತ್ತೇಜನವೆಂದರೆ ದೇಶಾದ್ಯಂತ ರೋಗನಿರ್ಣಯ ಪ್ರಯೋಗಾಲಯಗಳ ನಿರಂತರವಾಗಿ ವಿಸ್ತರಿಸುತ್ತಿರುವ ಜಾಲ. ಆಗಸ್ಟ್ 14 ರ ಹೊತ್ತಿಗೆ ಈ ಜಾಲವು 1,451 ಲ್ಯಾಬ್ಗಳನ್ನು ಹೊಂದಿದ್ದು, ಸರ್ಕಾರಿ ವಲಯದಲ್ಲಿ 958 ಮತ್ತು 493 ಖಾಸಗಿ ಲ್ಯಾಬ್ಗಳನ್ನು ಹೊಂದಿದೆ.
India conducts record high of nearly 8.5 lakh tests in a single day.
On a continues rise, Recovery Rate stands at 71.17%.
Case Fatality Rate further reduced to 1.95%.
Details: https://t.co/FkskiRjq36#StaySafe #IndiaWillWin @ICMRDELHI pic.twitter.com/dL2xpSYy8D
— #IndiaFightsCorona (@COVIDNewsByMIB) August 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.