ಕೇರಳದಲ್ಲಿ ಶುಕ್ರವಾರ ದೊಡ್ಡ ಅನಾಹುತ ನಡೆದಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಭಾರತೀಯರನ್ನು ಹೊತ್ತು ಬರುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡ ಸಂಭವಿಸಿದ್ದು, ಸುಮಾರು 20 ಮಂದಿ ಮೃತಪಟ್ಟಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ಅನೇಕರು ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನದ ಇಬ್ಬರು ಪೈಲಟ್ ಗಳು ಕೂಡ ಮೃತಪಟ್ಟಿದ್ದಾರೆ. ಇದರ ಮುಖ್ಯ ಪೈಲೆಟ್ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಅವರು ವಾಯುಸೇನೆಯ ಗೌರವಾನ್ವಿತ ಮಾಜಿ ಅಧಿಕಾರಿ ಮತ್ತು ಸಮರ್ಥತೆಗೆ ಹೆಸರಾದವರು. ವಿಮಾನದ ಕೋ ಪೈಲೆಟ್ ಅಖಿಲೇಶ್ ಕುಮಾರ್ ಅವರು ಕೂಡ ಮೃತಪಟ್ಟಿದ್ದಾರೆ.
ಸಾಠೆ ಈ ಹಿಂದೆ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದವರು, ವಾಯುಸೇನೆಯಲ್ಲಿ ಅವರು 1981 ರಿಂದ 22 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್)ನಲ್ಲಿ ಪರೀಕ್ಷಾ ಪೈಲಟ್ ಮತ್ತು ಅಧಿಕಾರಿಯಾಗಿದ್ದ ಅವರು ವಾಯುಪಡೆಯ ಅಕಾಡೆಮಿಯಲ್ಲಿ ‘ಸ್ವಾರ್ಡ್ ಆಫ್ ಹಾನರ್’ ಗಳಿಸಿದವರು ಮತ್ತು ಸ್ಕ್ವಾಡ್ರನ್ ನಾಯಕನಾಗಿ ವಾಯುಪಡೆಯಿಂದ ನಿವೃತ್ತರಾಗಿದ್ದರು.
ಬೋಯಿಂಗ್ 737 ವಿಮಾನವನ್ನು ಹಾರಿಸುವುದರಲ್ಲಿ ಅವರು ನುರಿತರು ಎಂದು ಪರಿಗಣಿಸಲ್ಪಟ್ಟಿದ್ದರು ಮತ್ತು ಅವರು ವಾಯುಪಡೆಯಿಂದ ಹೊರಬಂದ ನಂತರ ವಾಣಿಜ್ಯ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅವರ ಸಂಕ್ಷಿಪ್ತ ಬಯೋ ಆನ್ಲೈನ್ನಲ್ಲಿ ತಿಳಿಸಲಾಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಸ್ಥಳಾಂತರಗೊಳ್ಳುವುದಕ್ಕೂ ಮೊದಲು ಅವರು ಏರ್ ಇಂಡಿಯಾದಲ್ಲಿ ವಾಣಿಜ್ಯ ವೃತ್ತಿ ಪ್ರಾರಂಭಿಸಿದ್ದರು.
1981 ರಲ್ಲಿ ಹೈದರಾಬಾದ್ ಬಳಿಯ ದುಂಡಿಗಲ್ನಲ್ಲಿರುವ ವಾಯುಪಡೆಯ ಅಕಾಡೆಮಿಯಿಂದ ಪದವಿ ಪಡೆದಾಗ ಅವರ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಸ್ವಾರ್ಡ್ ಅಫ್ ಹಾನರ್ ನೀಡಲಾಗಿತ್ತು. ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಮಾಜಿ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ.
ಅವರು 1981 ರಲ್ಲಿ ಐಎಎಫ್ಗೆ ಸೇರಿದ್ದ ಅವರು, ಜೂನ್ 2003 ರಲ್ಲಿ ವಾಯುಸೇನೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಬಳಿಕ ನುರಿತ ಪೈಲಟ್ ಮತ್ತು ಹಲವಾರು ಯುವ ಪೈಲಟ್ಗಳಿಗೆ ಮಾರ್ಗದರ್ಶನವನ್ನೂ ಅವರು ನೀಡಿದ್ದಾರೆ.
ಅವರು ಒಬ್ಬ ಅನುಭವಿ ವೈಮಾನಿಕ ಆಪರೇಟರ್ ಆಗಿದ್ದ ಅವರು, 36 ವರ್ಷಗಳ ಹಾರುವ ಅನುಭವ ಹೊಂದಿದ್ದರು. ಎನ್ಡಿಎಯಿಂದ ಪಾಸ್ ಔಟ್, 58 ನೇ ಕೋರ್ಸ್ನಲ್ಲಿ ಅಗ್ರಸ್ಥಾನ ಮತ್ತು ‘ಸ್ವಾರ್ಡ್ ಆಫ್ ಹಾನರ್’ ಪ್ರಶಸ್ತಿ ಪುರಸ್ಕೃತ ದೀಪಕ್ 2005 ರಲ್ಲಿ ಏರ್ ಇಂಡಿಯಾದೊಂದಿಗೆ ವಾಣಿಜ್ಯ ಪೈಲಟ್ ಆಗಿ ಸೇರುವ ಮೊದಲು 21 ವರ್ಷಗಳ ಕಾಲ ಭಾರತೀಯ ವಾಯುಪಡೆಗೆ ಸೇವೆ ಸಲ್ಲಿಸಿದರು.
ನಿನ್ನೆ ನಡೆದ ವಿಮಾನ ದುರಂತದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಅರ ಅಗಲುವಿಕೆ ವಾಯುಯಾನ ಕ್ಷೇತ್ರಕ್ಕೆ ಆದ ದೊಡ್ಡ ನಷ್ಟ ಎಂದೇ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.