ನವದೆಹಲಿ: ಭಾರತಕ್ಕೆ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡುವುದರಲ್ಲಿ ಯಾವುದೇ ವಿಳಂಬಗಳನ್ನು ಮಾಡುವುದಿಲ್ಲ, ನಿಗದಿತ ಅವಧಿಯ ವೇಳೆಗೆ ವಿಮಾನಗಳು ಭಾರತದ ಕೈ ಸೇರಲಿದೆ ಎಂದು ಫ್ರಾನ್ಸ್ ಭರವಸೆ ನೀಡಿದೆ.
ಭಾರತ ಆರ್ಡರ್ ನೀಡಿದ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಲು ನಿಗದಿಯಾದ ವೇಳಾಪಟ್ಟಿಯನ್ನು ನಾವು ಗೌರವಿಸುತ್ತೇವೆ ಮತ್ತು ಅದರಂತೆಯೇ ವಿಮಾನಗಳನ್ನು ಪೂರೈಕೆ ಮಾಡುತ್ತೇವೆ ಎಂದು ಫ್ರೆಂಚ್ ರಾಯಭಾರಿ ಇಮ್ಯಾನ್ಯುವಲ್ ಲೆನೈನ್ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
58,000 ಕೋಟಿ ರೂಪಾಯಿಗಳಿಗೆ 36 ಶಸ್ತ್ರಸಜ್ಜಿತ ರಫೆಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದವು 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಏರ್ಪಟ್ಟಿದೆ. ಇದು ಅಂತರ್-ಸರಕಾರಿ ಒಪ್ಪಂದವಾಗಿದೆ.
ಈಗಾಗಲೇ ಒಂದು ರಫೆಲ್ ಯುದ್ಧ ವಿಮಾನವನ್ನು ಫ್ರಾನ್ಸ್ ಭಾರತಕ್ಕೆ ಹಸ್ತಾಂತರ ಮಾಡಿದೆ. ಆದರೆ ವಿಮಾನ ಭಾರತಕ್ಕೆ ಆಗಮಿಸಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಫೆಲ್ ಯುದ್ಧ ವಿಮಾನಕ್ಕೆ ಭಾರತೀಯ ಸಂಸ್ಕೃತಿಯಂತೆ ಪೂಜೆಗಳನ್ನು ಸಲ್ಲಿಸಿದ್ದಾರೆ.
ಭಾರತೀಯ ವಾಯುಸೇನೆಯ ಫೈಟರ್ ಪೈಲೆಟ್ಗಳು ಫ್ರಾನ್ಸಿನಲ್ಲಿ ರಫೆಲ್ ಯುದ್ಧ ವಿಮಾನವನ್ನು ಹಾರಿಸುವ ತರಬೇತಿಯನ್ನು ಪಡೆಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.