News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st November 2026

×
Home About Us Advertise With s Contact Us

ಕಾಶಿಯಲ್ಲಿ ಭಜನ್ ಕ್ಲಬ್ಬಿಂಗ್: ಮೋದಿ,  ಸಾವಿರಾರು ಜೆನ್‌ ಝಿ ಯುವಕರು ಭಾಗಿ

ವಾರಣಾಸಿ: ನವೆಂಬರ್ 20 ರ ಸಂಜೆ ಕಾಶಿ ಗಂಗಾ ಮಹೋತ್ಸವದ ಹಿನ್ನೆಲೆಯಲ್ಲಿ ನಮೋ ಘಾಟ್‌ನಲ್ಲಿ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮ ನಡೆದಿದ್ದು, ಸಾವಿರಾರು ಜೆನ್‌ ಝಿ ಯುವಕ-ಯುವತಿಯರು ಸೇರಿ ಆಧುನಿಕ ಸಂಗೀತ, ಬೀಟ್‌ಗಳು ಮತ್ತು ಕಾನ್‌ಸರ್ಟ್ ಶೈಲಿಯ ವಾತಾವರಣದಲ್ಲಿ ಭಕ್ತಿ ಭಜನೆಗಳನ್ನು ಹಾಡಿ, ತಾಳ ಹೊಡೆದು, ನೃತ್ಯ ಮಾಡಿ ಸನಾತನ ಸಂಸ್ಕೃತಿಯನ್ನು ಆಚರಿಸಿದರು.
ಕೋಲ್ಕತ್ತಾದ ರಾಘವ್ ಮತ್ತು ಪ್ರಾಚಿ  ಸಹೋದರ-ಸಹೋದರಿ ಜೋಡಿ 90 ನಿಮಿಷಗಳ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಭಜನೆಗಳನ್ನು ಪ್ರಸ್ತುತಪಡಿಸಿದರು. ಸಾಂಪ್ರದಾಯಿಕ ಭಜನೆಗಳನ್ನು ಎಲೆಕ್ಟ್ರಾನಿಕ್ ಬೀಟ್‌ಗಳು, ಆಧುನಿಕ ವ್ಯವಸ್ಥೆ ಮತ್ತು ಲೈಟಿಂಗ್‌ನೊಂದಿಗೆ ಮಿಶ್ರಣ ಮಾಡಿ ಪ್ರದರ್ಶಿಸಲಾಯಿತು. ಯುವಕರು ಭಕ್ತಿ ಮತ್ತು ಆಧುನಿಕತೆಯ ಸಂಗಮವನ್ನು ಅನುಭವಿಸಿದರು.

“ಬಾಬಾ ವಿಶ್ವನಾಥ ನಗರಿ ಕಾಶಿಯಲ್ಲಿ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮವು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ನಮೋ ಘಾಟ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನನ್ನ ಯುವ ಸ್ನೇಹಿತರು ಹೆಚ್ಚು-ಹೆಚ್ಚು ಭಾಗವಹಿಸಿದರು. ಅವರ ಉತ್ಸಾಹ ನೋಡಿ ಸಂತಸವಾಯಿತು!” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top