ವಾರಣಾಸಿ: ಚುನಾವಣೆಯ ಸಂದರ್ಭ ಹಲವು ಆಶ್ವಾಸನೆಗಳನ್ನು ಕೊಟ್ಟು ಗೆದ್ದ ಬಳಿಕ ಆರಿಸಿದ ಜನರನ್ನು, ಕ್ಷೇತ್ರವನ್ನು ಮರೆತ ಶಾಸಕನೊಬ್ಬನಿಗೆ ಉತ್ತರಪ್ರದೇಶದ ಜನ ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ.
ಮುಗಲ್ಸರೈ ಕ್ಷೇತ್ರದ ಬಹುಜನ ಸಮಾಜವಾದಿ ಶಾಸಕ ಬಬ್ಬನ್ ಸಿಂಗ್ ಚೌಹಾಣ್ನನ್ನು ಜನರು ಹಗ್ಗದಿಂದ ಕಟ್ಟಿ ಹಾಕಿ 2 ಗಂಟೆಗಳ ಕಾಲ ಬಂಧಿಸಿಟ್ಟಿದ್ದಾರೆ, ತಮ್ಮ ಕ್ಷೇತ್ರಕ್ಕೆ ಈತ ಬರುತ್ತಿಲ್ಲ, ಮೂಲಸೌಕರ್ಯಗಳ ಕೊರತೆಯ ಬಗ್ಗೆ ಎಷ್ಟು ಸಾರಿ ಮನವಿ ಮಾಡಿಕೊಂಡರೂ ಸ್ಪಂಧಿಸುತ್ತಿಲ್ಲ ಎಂಬ ಆಕ್ರೋಶದಿಂದ ಈ ರೀತಿ ಮಾಡಿದ್ದಾರೆ.
ಶಾಸಕರ ಕಚೇರಿಗೆ ಹಲವಾರು ಬಾರಿ ತೆರಳಿ ಅಗತ್ಯ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದರೂ ಆತ ಕ್ಯಾರೇ ಅಂದಿರಲಿಲ್ಲ, ಅಭಿವೃದ್ಧಿಗೆ ೮೦ ಲಕ್ಷದ ಟೆಂಡರ್ ಜಾರಿಯಾಗಿದ್ದರೂ ಕೂಡ ಅದರ ವಿನಿಯೋಗವಾಗಿಲ್ಲ, ಹೀಗಾಗಿ ಜನರು ಶಾಸಕ ಮತ್ತು ನಗರಸಭಾ ಪ್ರತಿನಿಧಿಯನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಪೊಲೀಸರು ಬಂದು ಇಬ್ಬರನ್ನು ಬಂಧ ಮುಕ್ತಗೊಳಿಸಿದರು.
ಮತ ನೀಡಿ ಆರಿಸಿ ಕಳುಹಿಸುವ ಜನ ಏನೂ ಕಾರ್ಯ ಮಾಡದೇ ಇದ್ದರೆ ತಿರುಗಿ ಬೀಳುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇನ್ನುಳಿದ ಜನಪ್ರತಿನಿಧಿಗಳು ಈ ಘಟನೆಯಿಂದ ಪಾಠ ಕಲಿಯಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.