
ಧಾರವಾಡ: ಧಾರವಾಡ ಜಿಲ್ಲೆಯ 33 ಕ್ಕೂ ಮೇಲ್ಪಟ್ಟ ಹಳ್ಳಿಗಳಿಂದ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ, ಕೃಷ್ಣಜನ್ಮಾಷ್ಟಮಿಯ ಪುಣ್ಯ ಪರ್ವಕಾಲದ ಉತ್ಸವದ ಪ್ರಯುಕ್ತ ಶ್ರೀಮದ್ ಉತ್ತರಾದಿ ಮಠ , ಮಾಳಮಡ್ಡಿ, ಧಾರವಾಡದಲ್ಲಿ ಶನಿವಾರ ಚಿಣ್ಣ ಗೋಪಾಲರ ಕೂಟ ಆಯೋಜಿಸಲಾಯಿತು.
ಶ್ರೀಕೃಷ್ಣ ಗೋಪಿಕೆಯರಂತೆ ಸುಂದರವಾಗಿ ಶೃಂಗರಿಸಿರುವ ಗ್ರಾಮಾಂತರದ ವಿದ್ಯಾರ್ಥಿಗಳು-ಅಕ್ಷರ ಪ್ರಭಾವಂ ಶೈಕ್ಷಣಿಕ ತರಬೇತಿಯಲ್ಲಿರುವ 570 ಮಕ್ಕಳು, ಗ್ರಾಮಾಂತರ ಅಕ್ಷರ ಪ್ರಭಾವಂ ಶಿಕ್ಷಕರು , ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀ ಉತ್ತರಾದಿ ಮಠದ ಪೀಠಾದಿಪತಿಗಳಾದ ಅನಂತ ಶ್ರೀ ಸಂಬೋಧಿತ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹೋಪದೇಶ , ಶ್ರೀ ಕೃಷ್ಣಭಕ್ತಿ , ಜ್ಞಾನ ತುಂಬಿರುವ ಸಂತಸ ಸಾಧಕ ಜೀವನ ಸ್ಫೂರ್ತಿ, ಗ್ರಾಮವಿಕಾಸ , ದೇಶಭಕ್ತಿ ಕುರಿತಾಗಿ ಮಾರ್ಗದರ್ಶನ ಪಡೆದುಕೊಳ್ಳುವುದಕ್ಕಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ದಿನ ಧಾರವಾಡ ಜಿಲ್ಲೆಯ ಗ್ರಾಮಾಂತರದಿಂದ ಸಮಯೋಚಿತವಾಗಿ ಈ ಶೈಕ್ಷಣಿಕ , ಕಲಾತ್ಮಕ ಮತ್ತು ಸಾಮಾಜಿಕ ಕೂಟದಲ್ಲಿ ಭಾಗವಹಿಸಲು ವಿಧಾನ ಸಭಾ ಸದಸ್ಯ ಅರವಿಂದ ಬೆಲ್ಲದ್ ಅವರು ಸಾರಿಗೆ ವ್ಯವಸ್ಥೆ ಒದಗಿಸಿದರು .
ಶ್ರೀ ವಿಷ್ಣು ಹುಕ್ಕೇರಿ , ಕೆ ಇ ಬೋರ್ಡ್ ಶಾಲೆಯ ವಸತಿನೆರವು ನೀಡಿ ಸಹಕರಿಸಿದರು . ಗ್ರಾಮ ಗ್ರಾಮಗಳಿಂದ ಬಂದ ಮಕ್ಕಳು ಫಲ ಸ್ವೀಕಾರ ಮಾಡಿದರು. ಟಿ.ಆರ್ . ಶ್ರೀ ಗುರುಮೂರ್ತಿ ನಾಯಕ್ ನೆರವಿನಲ್ಲಿ ಶ್ರೀ ಕೃಷ್ಣ ದೇವರ ಕಲಾತ್ಮಕ ಚಿತ್ರ ಬಿಡಿಸುವ ಕಾರಾಗಾರ ಮಕ್ಕಳಿಗಾಗಿ ನಡೆಯಿತು . ವಿದ್ಯಾರ್ಥಿಗಳು ವಿಠ್ಠಲ ದೇವರ ಭಜನೆ ಮಾಡಿದರು . ಆರ್.ಎಸ .ಎಸ , ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯರಾಗಿರುವ ಶ್ರೀಧರ ನಾಡಗೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಠ್ಠಲ ಭಜನಾ ಸಹಿತ ಪಾದಯಾತ್ರೆ ಮಕ್ಕಳು ಶ್ರೀಮಠದ ದೇವಾಲಯದತ್ತ ಬೆಳೆಸಿದರು. ರಸ್ತೆಯಲ್ಲಿ ಸಾರ್ವಜನಿಕರೂ ವಿಠ್ಠಲ ಭಜನೆಯಲ್ಲಿ ಕೈ ಮುಗಿದು, ಕೈ ತಟ್ಟಿ ,ಕೊರಳುಗೂಡಿಸಿದರು. ವಾದ್ಯದೊಂದಿಗೆ ಶ್ರೀಮಠ ಭಜಕ ಮಕ್ಕಳನ್ನು ಬರೆ ಮಾಡಿಕೊಂಡರು . ಉತ್ತರಾದಿ ಮಠದ ದಿವಾನರಾದ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿರವರ ವ್ಯವಸ್ಥಾಪಕ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಿಯೋಜಿತವಾಗಿತ್ತು.ನಮಠದ ದಿವಾನರಾದ ಶ್ರೀ ಶಶಿಧರಾಚಾರ್ಯರು ಪ್ರೀತಿ ಆದರದಿಂದ ಮಕ್ಕಳನ್ನು ಎದುರುಗೊಂಡು ಸುಸ್ವಾಗತಿಸಿದರು. ಚಾತುರ್ಮಾಸ್ಯ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಶ್ರೀ ಆರ್ .ಎಂ. ಕುಲಕರ್ಣಿರವರ ನೇತೃತ್ವದಲ್ಲಿ ಮಕ್ಕಳಿಗಾಗಿ ಶ್ರೀಮಠದವತಿಯಿಂದ ಸುವ್ಯವಸ್ಥೆ ಮಾಡಿದ್ದರು. ದಿವಾನರಾದ ಶ್ರೀ ವಿದ್ಯಾಧೀಶಾಚಾರ್ಯ ಗುತ್ತಲ್ ಮಕ್ಕಳ ಸಂಬೋಧಿಸಿ ಮಾತನಾಡಿ ,ವೇದಿಕೆಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ವಿಶೇಷವಾಗಿ, ಗ್ರಾಮಾಂತರದಿಂದ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯಿಂದ ಶ್ರೀ ಕೃಷ್ಣ ದೇವರಿಗೆ ಇಷ್ಟವಾದ ಮತ್ತು ಕೃಷ್ಣ ಸುಧಾಮ ಸ್ನೇಹ ಒಲುಮೆಯ ಸಂಕೇತವಾಗಿರುವ ,ಅವಲಕ್ಕಿ ಮತ್ತು ತುಣುಕು ಬೆಲ್ಲವನ್ನು ಶೇಖರಿಸಿ ಬುಟ್ಟಿಗಳಲ್ಲಿ ತಂದು , ಮಠದಲ್ಲಿರುವ ಸಂಸ್ಥಾನ ದೇವರ ನೈವೇದ್ಯಕ್ಕಾಗಿ, ಪೂಜೆಗಾಗಿ 48 ಭಗವದ್ ರೂಪ ಸಂಕೇತವಾಗಿ ಕಮಲ , ಪುಷ್ಪ ಫಲ ,ತುಳಸಿಯೊಂದಿಗೆ ಮಹಾಸ್ವಾಮಿಗಳಲ್ಲಿ ಹೃದ್ಪೂರ್ವಕ ಶ್ರೀ ಕೃಷ್ಣಾರ್ಪಣ ಮಾಡಿದರು. ಮಕ್ಕಳ ಶ್ರದ್ಧಾ ಭಕ್ತಿ ಹಾಗೂ ಮಕ್ಕಳಿನ ಮೇಲೆ ಮಹಾಸ್ವಾಮಿಗಳವರ ಪ್ರೀತಿ ವಾತ್ಸಲ್ಯ ಈ ಕಾರ್ಯಕ್ರಮ ಮೆರುಗಿಸಿತು .
ಧಾರವಾಡ ಜಿಲ್ಲೆಯ ಗ್ರಾಮಗಳ ಸಹಸ್ರಾರು ಮನೆಗಳಿಗೆ ಹಬ್ಬದಂದು ಶ್ರೀ ದಿಗ್ವಿಜಯ ಮೂಲ ಸೀತಾ ರಾಮದೇವರ ವಿಶೇಷ ಅನುಗ್ರಹ ತಲುಪಿಸುವ ಸದುದ್ದೇಶ್ಯದಿಂದ ,ಮಂತ್ರಾಕ್ಷತೆಯನ್ನು ಮಹಾಸ್ವಾಮಿಗಳವರು ದಯಪಾಲಿಸಿದರು . ಹೀಗೆ ಒಂದು ಮಗುವಿನ ಮನೆಯಿಂದ ಬಂದ ಸಣ್ಣ ಅರ್ಪಣೆ ಹಳ್ಳಿಯ ನೂರಾರು ಮನೆಗಳಿಗೆ ಶ್ರೀ ರಾಮ ರಕ್ಷಾ ಪ್ರಸಾದ ತಲುಪುವುದಕ್ಕೆ ಸಾಧನವಾಯಿತು . ಶ್ರೀ ಅಶ್ವಿನ್ ಭುಸಾರೆ ಹಾಗು ಶ್ರೀಮತಿ ರಮ್ಯಾ ಶ್ರೀನಾಥ ಕೊಪ್ಪಾ ಸಂಸ್ಥೆಯ ಪರ ಮಹಾಸ್ವಾಮಿಗಳವರಿಗೆ ಸನ್ಮಾನ ,ಕೃತಜ್ಞತಾಪೂರ್ವಕ , ನಮಸ್ಕಾರಗಳ ಸಲ್ಲಿಸಿ ,ಅವರಲ್ಲಿ “ಅಕ್ಷರ ಪ್ರಭಾವಂ” ಪರವಾಗಿ ಆಶೀರ್ವಾದ ಪಡೆದುಕೊಂಡರು .
ಗ್ರಾಮೀಣ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ನಾಯಕತ್ವ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರತವಾಗಿರುವ ಅಕ್ಷರ ಪ್ರಭಾವಂ ತಂಡವನ್ನು ,ಶಿಕ್ಷಕರನ್ನು ಹರೆಸಿದ ಮಹಾಸ್ವಾಮಿಗಳು , ಮಕ್ಕಳಿಗೆ ,ಪೋಷಕರು ಗುರು ಹಿರಿಯರಲ್ಲಿ ವಿಶೇಷ ಆದರ , ನಿತ್ಯ ಪೂಜಾ ,ಸತ್ಯ ಧರ್ಮ ನಿಷ್ಠೆ , ಸರ್ವರಲ್ಲಿ ಸೇವಾ ಭಾವ , ಉತ್ತಮ ಕಲಿವಿಕೆ , ಗುಡಿ -ಗೋ- ಗ್ರಾಮ- ಭಾರತದ ಕುರಿತಾಗಿ ಮಮಕಾರ ಪ್ರೀತಿ ಕರ್ತವ್ಯ ಎಂದು ಮಕ್ಕಳಿಗೆ ಉಪದೇಶಿಸಿದರು . ಕೃಷ್ಣ ಕಳ್ಳನಲ್ಲಾ !!! ಎಲ್ಲಾ ಮನೆಯೂ ತನ್ನದೇ ಎಂದುಕೊಂಡಿದ್ದಾ , ಹಾಗೇ ಎಲ್ಲಾ ಗೋಪಿಯರೂ ಅವನಿಗೆ ಬೆಣ್ಣೆ ಹಾಲು ಮೊಸರು ತಿನಿಸುಗಳ ಉಣಬಡಿಸುವುದರಲ್ಲಿ ಸಂತೈಸುತ್ತಿದ್ದರು ಎಂದು ಹೇಳುತ್ತಾ ,
ಒಂದು ಮನೆಯಂತೆ ಇರುವ ಒಂದಾಗಿ ಒಗ್ಗೂಡಿರುವ ಹಳ್ಳಿಗಳು ನಮ್ಮ ಮಕ್ಕಳದ್ದಾಗಬೇಕು, ಆಗ ಎಲ್ಲಾ ಸಮಸ್ಯೆಗಳ ಪರಿಹಾರ ಸುಲಭ , ವಿಕಾಸ ಸಾಧ್ಯ ಎಂಬುದನ್ನು ಒತ್ತು ಹೇಳಿ ,ಧಾರವಾಡ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಸಮೃದ್ಧಿಯನ್ನು ಕೃಷ್ಣಜನ್ಮಾಷ್ಟಮಿ ಪರ್ವಕಾಲದಲ್ಲಿ ಪ್ರಾರ್ಥನಾಪೂರ್ವಕ ಹಾರೈಸಿದರು .
ಎಲ್ಲಾ ಮಕ್ಕಳಿಗೂ ಮಹಾಸ್ವಾಮಿಗಳು ಸಿಹಿ ತಿನಿಸು ತಮ್ಮ ಕೈಯ್ಯಾರೆ ನೀಡಿ , ಮಕ್ಕಳ ಊಟದ ಪಾತ್ರೆಗಳಾಗಿ ಪ್ಲಾಸ್ಟಿಕ್ ಬಳಕೆ ನಿಲ್ಲಬೇಕು ,ಎಂದು ತುಂಬಿಸಿದ ಸ್ಟೀಲ್ ಊಟದ ಡಬ್ಬಿಗಳನ್ನು ಮಕ್ಕಳ ದಿನನಿತ್ಯದ ಬಳಕೆಗಾಗಿ ಉಡುಗೊರೆಯಾಗಿ ನೀಡಿದರು . ಅನ್ನ ಪ್ರಸಾದವನ್ನು ಭಕ್ತಾದಿಗಳು ಸ್ವೀಕರಿಸಿದರು .
ಮುಸ್ಸಂಜೆಯ ಹೊತ್ತಿನಲ್ಲಿ ಕೆ ಇ ಬೋರ್ಡ್ ಶಾಲೆಯ ಪ್ರಾಂಗಣದಲ್ಲಿ ,ರತಿಕಾ ನಾಟ್ಯ ನಿಕೇತನದಿಂದ ಕು. ಶ್ರೀನಿಧಿ ಅಕ್ಕಿಮತ್ತು ಕು .ರೇಣುಕಾ ಲೋಕಣ್ಣವರ ,ಗೋಪಾಲ ಕೃಷ್ಣ ಮತ್ತು ಗೋಪಿಯರಂತೆ ವೇಷ ಹಾಕಿಕೊಂಡಿದ್ದ ಮಕ್ಕಳಿಗೆ ರಾಸ್ ಗರ್ಬಾ ಗೋಕುಲದ ನೃತ್ಯ ಹೇಳಿಕೊಡುವ ಮೂಲಕ ಉಲ್ಲಾಸಪಡಿಸಿದರು .
ರಾಷ್ಟ್ರೋತ್ಥಾನ ಶಾಲೆ , ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೆಕರ್ ರ ಮಾರ್ಗದರ್ಶನದಲ್ಲಿ ಪ್ರಾಂಶುಪಾಲರು , ಹಲವು ಶಿಕ್ಷಕರೊಂದಿಗೆ ಮಕ್ಕಳು ಭಾಗವಹಿಸಿದರು . ಸ್ವಯಂ ಸೇವಕರು , ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ,ಈ ಕಾರ್ಯಕ್ರಮಕ್ಕೆ ಒಳಗೊಂಡ ಎಲ್ಲರಿಗೂ ಹಬ್ಬದ ವಾತಾವರಣದ ಸಡಗರ ಹೊಸ ಹುಮ್ಮಸ್ಸು ಮೂಡಿತು .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



