ಮಹಾಬಲಿಪುರಂ : 2020ರ ವರ್ಷವನ್ನು ಚೀನಾ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ವಿನಿಮಯದ ವರ್ಷವಾಗಿ ಆಚರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಿರ್ಧರಿಸಿದ್ದಾರೆ.
ತಮಿಳುನಾಡಿನ ಮಾಮಲ್ಲಪುರಂನಲ್ಲಿ ಶನಿವಾರ ಸಮಾಪನಗೊಂಡ ಭಾರತ ಮತ್ತು ಚೀನಾ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶುಕ್ರವಾರ ಮತ್ತು ಶನಿವಾರ ಕಡಲತಡಿ ಮಾಮಲ್ಲಪುರಂ ಶೃಂಗಸಭೆ ಜರುಗಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಗೊಳಿಸಿದ ಮಾಹಿತಿಯ ಪ್ರಕಾರ, ಭಾರತ ಮತ್ತು ಚೀನಾ ಸಂಬಂಧಕ್ಕೆ ಎಪ್ಪತ್ತು ವರ್ಷಗಳು ತುಂಬುವ 2020ರ ವರ್ಷವನ್ನು ಪರಸ್ಪರ ಸಾಂಸ್ಕೃತಿಕ ಮತ್ತು ಜನರಿಂದ ಜನರಿಗಾಗಿ ವಿನಿಮಯ ವರ್ಷವಾಗಿ ಆಚರಿಸಲು ನಿರ್ಧರಿಸಲಾಗಿದೆ. ಉಭಯ ದೇಶಗಳು ತಮ್ಮ-ತಮ್ಮ ಶಾಸಕಾಂಗ, ರಾಜಕೀಯ ಪಕ್ಷಗಳು, ಸಂಸ್ಕೃತಿ ಮತ್ತು ಯುವ ಸಂಘಟನೆಗಳು, ಸೇನೆಗಳು ಸೇರಿದಂತೆ ಎಲ್ಲಾ ಮಟ್ಟದಲ್ಲೂ ವಿನಿಮಯವನ್ನು ವೃದ್ಧಿಗೊಳಿಸಲು ನಿರ್ಧರಿಸಿವೆ.
ಭಾರತ ಮತ್ತು ಚೀನಾದ ಸಂಬಂಧಕ್ಕೆ ಎಪ್ಪತ್ತು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ 2020ರಲ್ಲಿ ಉಭಯ ದೇಶಗಳು 70 ಚಟುವಟಿಕೆಗಳನ್ನು ಆಯೋಜನೆಗೊಳಿಸಲಿವೆ. ಎರಡು ನಾಗರಿಕತೆಗಳ ಐತಿಹಾಸಿಕ ಸಂಪರ್ಕದ ಸಂಕೇತವಾಗಿ ವೊಯಗೆ ಶಿಪ್ನಲ್ಲಿ ಕಾನ್ಫರೆನ್ಸ್ ಅನ್ನು ಆಯೋಜನೆಗೊಳಿಸಲಿದೆ. ಇನ್ನು ತಮಿಳುನಾಡು ಮತ್ತು ಚೀನಾದ ಐತಿಹಾಸಿಕ ಸಂಪರ್ಕಕ್ಕೆ ಸಂಬಂಧಿಸಿದಂತೆ ಸಂಶೋಧನೆಗಳನ್ನು ನಡೆಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.